April 25, 2024

Bhavana Tv

Its Your Channel

NSS ನಿಂದ ನಮ್ಮ ಜ್ಞಾನ ವೃದ್ಧಿಸಿಕೊಳ್ಳಬಹುದು; ಉಷಾ ಹೆಗಡೆ

ಶಿರಸಿ: ಇಂದಿನ ಕಾಲಮಾನದಲ್ಲಿ ಅವಕಾಶಗಳು ಹಲವಾರು. ಇದನ್ನು ಉಪಯೋಗಿಸಿಕೊಂಡು ನಮ್ಮಜ್ಞಾನ ಬಹುಮುಖವಾಗಿ ವೃದ್ಧಿಸಿಕೊಳ್ಳಬಹುದು. ಅಂತಹ ಅವಕಾಶಗಳಿದ್ದಲ್ಲಿ ಎನ್‌ಎಸ್‌ಎಸ್ ಕೂಡ ಒಂದು ಮಹತ್ವದ ಭಾಗವಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಉಷಾ ಹೆಗಡೆ ಹೇಳಿದರು.
ತಾಲೂಕಿನ ಗೋಳಿಯಲ್ಲಿ ನಡೆಯುತ್ತಿರುವ ಎಮ್.ಎಮ್ ಕಾಲೇಜಿನ ಎನ್ ಎಸ್ ಎಸ್ ಶಿಬಿರದ ಪ್ರಧಾನಮಂತ್ರಿ ಮುದ್ರಾ ಯೋಜನೆಯ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಗ್ರಾಮ ಪಂಚಾಯತ್ ನಗರ ಸಭೆಗಳು ಜನರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಅದರ ಬಗ್ಗೆ ಜ್ಞಾನ ಹೊಂದಿರುವುದು ನಮ್ಮ ಕರ್ತವ್ಯವಾಗಿದೆ. ಈ ಯೋಜನೆಗಳನ್ನು ನಿರ್ವಹಿಸುವ ಅಭ್ಯರ್ಥಿಗಳು ಹೇಗಿರಬೇಕು ಎಂದು ಆಯ್ಕೆ ಮಾಡುವ ಅಧಿಕಾರವು ನಮ್ಮ ಕೈಯಲ್ಲಿರುತ್ತದೆ.ಸ್ವಚ್ಛ ಭಾರತದಂತಹ ಮಹತ್ವದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದಲ್ಲದೆ ಅದನ್ನು ಪ್ರೋತ್ಸಾಹಿಸಿ ಹಾಗು ಕಟ್ಟುನಿಟ್ಟಾಗಿ ಅನುಸರಿಸಬೇಕು. ನಾವು ಕಲಿತಿರುವ ಕಾರ್ಯವನ್ನು ಅನುಷ್ಠಾನಕ್ಕೆ ತರಬೇಕು ಎಂದು ಹೇಳಿದರು.

ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ವಾಸುದೇವ ಶಾನಭಾಗ್ ಅವರು ನಮ್ಮ ದೇಶದಲ್ಲಿ ಕೆಲವಡೆ ಆರ್ಥಿಕವಾಗಿ ಬಲಿಷ್ಠರಾಗಿರುವ ಜನರನ್ನು ಕಂಡರು. ಅವರಲ್ಲಿರುವ ಅನಕ್ಷರತೆಯಿಂದ ಹಲವಾರು ಸಮಸ್ಯೆಗಳನ್ನು ಎದುರಿಸುವುದನ್ನು ಕಾಣಬಹುದಾಗಿದೆ. ಹಲವಾರು ಕೃಷಿಕರು ಅನಕ್ಷರಸ್ಥರಾಗಿದ್ದರಿಂದ ಅವರು ಸಾಲ ಪಡೆಯುವ ಸಮಯದಲ್ಲಿ ಮೋಸ ಹೊಗುವುದನ್ನು ಕಾಣಬಹುದಾಗಿದೆ ಇತ್ತೀಚಿನ ದಿನಗಳಲ್ಲಿ ಅದರ ಬಗ್ಗೆ ಮಾಹಿತಿ ನೀಡುವುದು ಬಹಳ ಮುಖ್ಯಕಾರ್ಯವಾಗಿರುತ್ತದೆ. ಆರ್.ಬಿ.ಐ ಸ್ಥಾಪನೆಯಾದಾಗಿನಿಂದಲೂ ದೇಶದಲ್ಲಿ ಹಣ ನಿರ್ವಹಣೆ ಇದರ ಜವಾಬ್ದಾರಿ ಆಗಿದೆ. ಎಲ್ಲಾ ರೀತಿಯ ಹಣದ ವಹಿವಾಟು ಕೇಂದ್ರ ಬಿಂದುವಾಗಿ ನಿಂತಿದೆ ಹಾಗು ಬ್ಯಾಂಕ್‌ಗಳ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಕೊನೆಯದಾಗಿ ಅಧ್ಯಕ್ಷರ ನುಡಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಇದು ನಮ್ಮೆಲ್ಲರಿಗೂ ಹಲಾವಾರು ರೀತಿಯಲ್ಲಿ ಯೋಜನಾ ಕಾರ್ಯವಾಗಿದೆ.ಸೇವಾ ಮತ್ತು ಪ್ರಾಮಾಣಿಕತೆ ಇದರ ಮೂಲತತ್ವವಾಗಿದ್ದು ಇದರ ಬಗ್ಗೆ ಶ್ರದ್ಧೆಯನ್ನು ಬೆಳಸಿಕೊಳ್ಳಲು ಆತ್ಮತೃಪ್ತಿಯನ್ನು ತಂದು ಕೊಡುವಲ್ಲಿ ಹಲವಾರು ದಾರಿಗಳನ್ನು ಸೃಷ್ಠಿಸುತ್ತದೆ. ಇದನ್ನು ಮನಗಂಡು ಹೊಸರೀತಿಯಲ್ಲಿ ಆಲೋಚಿಸಬೇಕೆಂದು ಕಾರ್ಯಕ್ರಮದ ಅಧ್ಯಕ್ಷ ಎಮ್.ಎಮ್ ಹೆಗಡೆ ಬಕ್ಕಳ ಹೇಳಿದರು.
ಶಿರಸಿಯ ಎಮ್.ಎಮ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಎನ್.ಎಸ್.ಎಸ್ ಘಟಕದ ವಾರ್ಷಿಕ ಶಿಬಿರದ 2ನೇ ದಿನದ ಉಪನ್ಯಾಸ ಕಾರ್ಯಕ್ರಮದ ವೇದಿಕೆಯ ಮೇಲೆ ಜಿಲ್ಲಾ ನೊಡಲ್ ಅಧಿಕಾರಿಯಾದ ಜಿ.ಟಿ ಭಟ್ಟ ಮತ್ತು ಎನ್‌ಎಸ್‌ಎಸ್ ಯೋಜನಾಧಿಕಾರಿಗಳಾದ ಕೆ.ಎನ್‌ರೆಡ್ಡಿ ಹಾಗು ಸಹ ಶಿಬಿರಾಧಿಕಾರಿಯಾದ ಸೌಖ್ಯ ನಾಯ್ಕ ಉಪಸ್ಥಿತರಿದ್ದರು. ಮೇಘನಾ ನಿರೂಪಣೆ ಮಾಡಿದಳು ಹಾಗು ನಂದಿನಿ ಸ್ವಾಗತಿಸಿದಳು. ಸಹನಾ ವಂದಿಸಿದರು

error: