ಕುಮಟಾ: ಮಹಾಸತಿ ಗೆಳೆಯರ ಬಳಗ ಮುರೂರು ಇವರು ಸಂಯುಕ್ತ ಆಶ್ರಯದಲ್ಲಿ ನಡೆದ ಮೂರು ದಿನಗಳ ಕಾಲ ನಡೆದ ಕ್ರಿಕೇಟ್ ಟುರ್ನಾಮೆಂಟ್ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಪ್ರೋ ಎಂ ಜಿ ಭಟ್ ಅವರ , ನಮ್ಮ ತಾಯ್ನಾಡು ಅತ್ಯಂತ ಶ್ರೇಷ್ಠ ವಾದದ್ದು ಜಗತ್ತಿನಲ್ಲಿಯೇ ಅತ್ಯಂತ ಪವಿತ್ರವಾದ ಮಣ್ಣು ನಮ್ಮ ಭಾರತದ್ದು. ನಮ್ಮ ದೇಶದಲ್ಲಿ ಆಗಿಹೋದ ಋಷಿ ಮುನಿಗಳೆಷ್ಟೋ, ಸಾಧು ಸಂತರುಗಳೆಷ್ಟೋ, ಗೊತ್ತಿಲ್ಲಾ. ನಮ್ಮದು ಒಂದು ತಪೋಭೂಮಿ. ಇಲ್ಲಿ ಹುಟ್ಟಿರುವುದೇ ನಮ್ಮ ಸೌಭಾಗ್ಯ. ಅನೇಕ ಜನ್ಮಗಳ ಪುಣ್ಯದ ಫಲವಾಗಿ ನಾವಿಲ್ಲಿ ಜನ್ಮತಳೆದಿದ್ದೇವೆ. ಇಂತಹ ಪುಣ್ಯಭೂಮಿಯಲ್ಲಿ ಹುಟ್ಟಿದ ನಾವು ನೀವೆಲ್ಲ ನಮ್ಮ ಜನ್ಮಭೂಮಿಗಾಗಿ ಏನನ್ನಾದರೂ ಮಾಡಲೇಬೇಕು. ನಮ್ಮ ದೇಶ ವಿಶ್ವಗುರು ಆಗಬೇಕು ಅದಕ್ಕೆ ನಾವು ನೀವೆಲ್ಲ ಒಂದಾಗಿ ದೇಶಕ್ಕಾಗಿ ದುಡಿಯಬೇಕು. ಸಮಾಜಕ್ಕಾಗಿ, ದೇಶಕ್ಕಾಗಿ ನಾವು ಕೆಲಸ ಮಾಡಿದ್ರೆ ಅದರಲ್ಲಿರೋ ಸುಖ, ಆತ್ಮ ತೃಪ್ತಿ ಬೇರೆಲ್ಲೂ ಸಿಗದು ಹಾಗಾಗಿ ದೇಶಕ್ಕಾಗಿ ನಮ್ಮ ಜೀವನದ ಅಲ್ಪ ಭಾಗವನ್ನು ಮೀಸಲು ಇಡೋಣ ಅಂತಹ ಪ್ರತಿಜ್ಞೆ ಇಂದೇ ಮಾಡೋಣ ಎಂದು ಅತ್ಯಂತ ಅರ್ಥಪೂರ್ಣ ಸಂದೇಶವನ್ನು ಯುವಜನತೆಗೆ ನೀಡಿದರು.
ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ರಾಮಚಂದ್ರ ಮಡಿವಾಳ ವಹಿಸಿದ್ದರು. ಬಿ. ಡಿ. ಮುಕ್ರಿ, ಶ್ರೀಧರ್ ಕಲಗದ್ದೆ, ಹಾಗೂ ಇತರ ಪ್ರಮುಖರು ವೇದಿಕೆಯಲ್ಲಿಹಾಜರಿದ್ದರು .. ಮೂರು ದಿನಗಳ ಕಾಲನಡೆದ ಟುರ್ನಾಮೆಂಟ್ನಲ್ಲಿ ಮಹಾಸತಿ ಗೆಳೆಯರ ಬಳಗ ಮುರೂರು ಕಾರ್ಯಕ್ರಮ ಸಂಘಟಿಸಿದ್ದರು.
More Stories
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಭಟ್ಕಳವತಿಯಿಂದ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮೆರವಣಿಗೆ ಮೂಲಕ ಬಂದು ಸಹಾಯಕ ಆಯುಕ್ತರಿಗೆ ಮನವಿ.
ತುಳುನಾಡಿನ ಕಾರಣೀಕ ಮೆರೆದ ಕಲ್ಜಿಗ ಸಿನೇಮಾ, ಕಾಂತಾರದ ಬೆನ್ನಿಗೇ ಮತ್ತೊಂದು ಕಲಾತ್ಮಕ ಚಿತ್ರ ಕೊಟ್ಟ ಕರಾವಳಿ