November 30, 2023

Bhavana Tv

Its Your Channel

ಭತ್ತದ ಬೆಳೆಗೆ ಬೆಂಕಿ ರೋಗ; ಕೃಷಿ ಇಲಾಖೆಯಿಂದ ಸಲಹೆ

ಮುಂಡಗೋಡ: ತಾಲೂಕಿನ ಪಾಳಾ ಹೊಬಳಿಯ ಇಂಗಳಕಿ ಹಾಗೂ ಕಲಕೊಪ್ಪ ಗ್ರಾಮಗಳ ವ್ಯಾಪ್ತಿಯ ರೈತರ ನಾಟಿ ಭತ್ತದ ಬೆಳೆಗೆ ಬೆಂಕಿ ರೋಗ ಮತ್ತು ಬೇರು ಕೊಳೆ ರೋಗ ಕಂಡು ಬಂದಿರುತ್ತಿದೆ.
ಬೆಂಕಿ ರೋಗ ನಿಯಂತ್ರಣಕ್ಕಾಗಿ 1ಗ್ರಾಂ. ಟ್ರೈಸೈಕ್ಲೋಜೋಲ್(ಬೀಮ್ ಪೌಡರ್)ನ್ನು 1ಲೀಟರ್ ನೀರಿಗೆ ಬೆರೆಸಿ ಸಿಂಪರಿಸಬೇಕು. ಬೇರು ಕೊಳೆ ರೋಗದ ನಿಯಂತ್ರಣಕ್ಕಾಗಿ ಪ್ರೊಪಿಕೊನಾಜೋಲ್ 1ಮಿ.ಲೀ. ಅನ್ನು 1ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. 4 ದಿನಗಳ ನಂತರ 2ಗ್ರಾಂ. ಮಂಗಳ ಬಯೋ-20 ಸಸ್ಯ ವರ್ಧಕವನ್ನು 1ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿ ರೈತರಿಗೆ ಸಲಹೆ ನೀಡಿದ್ದಾರೆ.

error: