ಭಟ್ಕಳ:
೪ ವರ್ಷಗಳಾದರು ಧನ ಸಹಾಯ ಸೌಲಭ್ಯ ಸಿಗದ ಕಟ್ಟಡ ಕಾರ್ಮಿಕರಿಗೆ ಬಾರದೇ ಇರುವುದು ಹಾಗೂ ಜಿಲ್ಲೆಯಾದ್ಯಂತ ಕಾರ್ಮಿಕರಿಂದ ಅರ್ಜಿಗಳನ್ನು ಕಾರ್ಮಿಕ ನಿರೀಕ್ಷಕರ ಕಛೇರಿಯಲ್ಲಿ ಸ್ವೀಕರಿಸದೇ ಇರುವುದು ಸಮಂಜಸವಲ್ಲ ಇದು ಖಂಡನಾರ್ಹ ಎಂದು ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎನ್.ರೇವಣಕರ್ ಅವರು ಹೇಳಿದರು.
ಅವರು ಬುಧವಾರದಂದು ಭಟ್ಕಳ ಸಂಶುದ್ದೀನ ಸರ್ಕಲ ಸಮೀಪದ ಖಾಸಗಿ ಹೋಟೆಲನಲ್ಲಿ ಕರೆಯಲಾದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಕಟ್ಟಡ ಕಾರ್ಮಿಕರು ೨೦೧೫-೧೬ನೇ ಸಾಲಿನಲ್ಲಿ ಮದುವೆ ಧನಸಹಾಯದ ಸೌಲಭ್ಯಕ್ಕೆ ಸಲ್ಲಿಸಿರುವ ಅರ್ಜಿಗಳಿಗೆ ಇದುವರೆಗೂ ಧನಸಹಾಯ ಮಂಜೂರು ಮಾಡದೇ ಆ ಅರ್ಜಿಗಳು ೪ ವರ್ಷಗಳ ನಂತರ (೨೩ ಜನವರಿ ೨೦೨೦)ಕ್ಕೆ ಕಾರ್ಮಿಕ ಅಧೀಕಾರಿ ಕಾರವಾರ ಇವರು ಕಾರ್ಮಿಕ ನಿರೀಕ್ಷಕರ ಕಛೇರಿ ಭಟ್ಕಳಕ್ಕೆ ೧೮೦ ಅರ್ಜಿಗಳನ್ನು ಮರುಪರಿಶೀಲನೆಗೆ ಕಳುಹಿಸಿದ್ದಾರೆ. ಆ ಅರ್ಜಿಗಳು ಆಯಾ ಸಾಲಿನಲ್ಲಿ ಕಾರ್ಮಿಕ ನಿರೀಕ್ಷಕರೇ ಖುದ್ದಾಗಿ ಪರಿಶೀಲನೆ ಮಾಡಿ ಅರ್ಜಿಗಳನ್ನು ಮಂಜೂರಾತಿ ಅಧಿಕಾರಿಗಳಿಗೆ ಕಳುಹಿಸಿರುವಾಗ ೪ ವರ್ಷಗಳಾದರೂ ಅರ್ಜಿಗಳನ್ನು ಹಾಗೇ ಇಟ್ಟುಕೊಳ್ಳಲು ಕಾರಣವೇನು? ಹಿರಿಯತೆಯಿಂದ ಅರ್ಜಿಗಳಿಗೆ ಧನಸಹಾದ ಮಂಜೂರು ಮಾಡದೇ ನಂತರ ಸಲ್ಲಿಸಿರುವ ಅರ್ಜಿಗಳಿಗೆ ಧನಸಹಾಯ ಮಂಜೂರು ಮಾಡಿ ಕಾರ್ಮಿಕರಿಗೆ ಅನ್ಯಾಯ ಮಾಡಲಾಗಿದೆ. ಈ ಕೂಡಲೇ ಕಾರ್ಮಿಕ ಅಧಿಕಾರಿ ಅವರು ಈ ಹಿಂದೆ ನಿರೀಕ್ಷಕರು ಮಾಡಿರುವ ಪರಿಶೀಲನೆಯನ್ನೇ ಮಾನ್ಯ ಮಾಡಿ ಕಾರ್ಮಿಕರಿಗೆ ಧನಸಹಾಯ ಮಂಜೂರು ಮಾಡಬೇಕೆಂದು ಮನವಿ ಮಾಡಿದರು.
‘೨೦೧೭ ಮತ್ತು ೧೮ನೇ ಸಾಲಿನಲ್ಲಿ ಸಲ್ಲಿಸಿರುವ ಶೈಕ್ಷಣಿಕ ಧನಸಹಾಯದ ಸಾವಿರಾರು ಅರ್ಜಿಗಳನ್ನು ಹಾಗೇ ಇರಿಸಿಕೊಂಡ೨ ವರ್ಷ ೮ ತಿಂಗಳ ನಂತರ ಈಗ ಉದ್ಯೋಗ ಪ್ರಮಾಣ ಪತ್ರ ಕೇಳುತ್ತಿದ್ದಾರೆ. ಅರ್ಜಿ ಸಲ್ಲಿಸುವ ಸಂಧರ್ಭದಲ್ಲಿ ಉದ್ಯೋಗ ಪ್ರಮಾಣ ಪತ್ರವನ್ನು ಏಕೆ ಕೇಳಲಿಲ್ಲ? ಮತ್ತು ಆ ಸಮಯದಲ್ಲಿ ಸಲ್ಲಿಸಿರುವ ಸಾವಿರಾರು ಶೈಕ್ಷಣಿಕ ಅರ್ಜಿಗಳಿಗೆ ಧನಸಹಾಯ ಮಂಜೂರಾಗಿರುವುದರಿAದ ಬಾಕಿ ಇರಿಸಸಿಕೊಂಡಿರುವ ಅರ್ಜಿಗಳಿಗೂ ಸಹ ಧನಸಹಾಯ ಮಂಜೂರು ಮಾಡಬೇಕು.
ಇನ್ನು ಜಿಲ್ಲಾದ್ಯಂತ ಕಾರ್ಮಿಕ ನಿರೀಕ್ಷಕರ ಕಛೇರಿಯಲ್ಲಿ ಮೇ ೨೦೧೯ ಕೊನೆಯ ದಿನಾಂಕದಿAದ ಜನವರಿ ೨೦೨೦ರ ವರೆಗೂ ಕಾರ್ಮಿಕರಿಂದಾಗಲಿ ಅಥವಾ ಅಧೀಕೃತ ಕಾರ್ಮಿಕ ಸಂಘಟನೆಯವರಿAದಾಗಲಿ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಿಲ್ಲ. ಕಾರ್ಮಿಕರಿಗೂ ಆನ್ ಲೈ???ನಲ್ಲಿ ಅರ್ಜಿ ಸಲ್ಲಿಸಲು ಮಾಹಿತಿ ನೀಡುತ್ತಿದ್ದರು. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಫಲಾನುಭವಿಯ ಆಧಾರ ಸಂಖ್ಯೆಗೆ ಮೊಬೈಲ್ ಸಂಖ್ಯೆ ಜೋಡಣೆ ಆಗಿರುವುದು ಕಡ್ಡಾಯವಾಗಿರುವದರಿಂದ ೧೦೦ಕ್ಕೆ ೫೦ಕ್ಕೂ ಹೆಚ್ಚು ಕಾರ್ಮಿಕರಿಗೆ ಯಾವುದೇ ಅರ್ಜಿಗಳನ್ನು ಆನ್ ಲೈ???ನಲ್ಲಿ ಸಲ್ಲಿಸಲು ಸಾಧ್ಯವಾಗಲಿಲ್ಲ. ಆನ್ ಲೈನ್ ತಂತ್ರಾAಶದಲ್ಲಿ ಒಟಿಪಿ ಅಳವಡಿಕೆ ಇರುವುದರಿಂದ ಮತ್ತು ತಂತ್ರಾAಶದಲ್ಲಿ ಲೋಪದೋಷವಿರುವುದರಿಂದ ಕಾರ್ಮಿಕರು ಅರ್ಜಿಗಳನ್ನು ನಿಗದಿಪಡಿಸಿದ ಕಾಲಾವಧಿಯೊಳಗೆ ಸಲ್ಲಿಸಲು ಸಾಧ್ಯವಾಗಲಿಲ್ಲ, ಅಂತಹ ಅರ್ಜಿಗಳನ್ನು ನಿರೀಕ್ಷಕ ಕಚೇರಿಯಲ್ಲಿ ಸಲ್ಲಿಸಲು ಹೋದರೆ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ, ಕಾರ್ಮಿಕ ಇಲಾಖೆಯವರೇ ಕಾರ್ಮಿಕರ ಅರ್ಜಿಗಳನ್ನು ಸ್ವೀಕರಿಸದೇ ಇರುವಾಗ ಕಾರ್ಮಿಕರು ಯಾವ ಇಲಾಖೆಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು.? ಈ ವ್ಯವಸ್ಥೆಯಲ್ಲಿ ಕಾರ್ಮಿಕರಿಗೆ ಘೋರ ಅನ್ಯಾಯವಾಗಿರುವುದರಿಂದ ೨೦೧೯-೨೦೨೦ ನೇ ಸಾಲಿನಲ್ಲಿ ಸಲ್ಲಿಸಲಾಗದೇ ಇರುವ ಅರ್ಜಿಗಳು ಮತ್ತು ನಿರೀಕ್ಷಕರ ಕಛೇರಿಯಲ್ಲಿ ಸ್ವೀಕರಿಸದೇ ಇರುವ ಅರ್ಜಿಗಳು ಅದರ ಕಾಲಾವಧಿ ಪರಿಗಣಿಸದೇ ೩೧-೦೩-೨೦೨೦ ರವರೆಗೆ ಆ ಅರ್ಜಿಗಳೆಲ್ಲವನ್ನು ನಿರೀಕ್ಷಕರ ಕಛೇರಿಯಲ್ಲಿ ಸ್ವೀಕರಿಸಬೇಕು ಇಲ್ಲವಾದರೆ ಕಾರ್ಮಿಕರು ತಮ್ಮ ಸೌಲಭ್ಯವನ್ನು ಪಡೆಯುವಲ್ಲಿ ವಂಚಿತರಾಗುತ್ತಾರೆ. ಈ ವಿಷಯಗಳನ್ನು ಕೂಲಂಕೂಶವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.