December 4, 2024

Bhavana Tv

Its Your Channel

ಪತ್ರಕರ್ತ ಮಿತ್ರರಿಂದ ಅಗಲಿದ ವಿ.ಆರ್ ಜೋಷಿಯವರಿಗೆ ಶೃದ್ದಾಂಜಲಿ ಸಭೆ

ಕ.ಸಾ.ಪ ಜಿಲ್ಲಾಧ್ಯಕ್ಷರಾದ ಅರವಿಂದ ಕರ್ಕಿಕೋಡಿ ಮಾತನಾಡಿ ವಿ.ಆರ್ ಜೋಷಿಯವರು ಪತ್ರಿಕೋದ್ಯಮದಲ್ಲಿ ಹೊಸತನದ ಬರವಣಿಗೆ ತಂದವರು.ಕೇವಲ ಸುದ್ದಿ ಮಾಡುವುದಷ್ಟೇ ಅಲ್ಲದೇ ಓದುಗರಿಗೆ ಒಳ್ಳೆಯ ಸಂದೇಶ ನೀಡುವ ನಿಟ್ಟಿನಲ್ಲಿ ಸುದ್ದಿ ಮಾಡುತ್ತಿದ್ದರು.ಅವರ ವೃತ್ತಿ ನಿಷ್ಠೆ ಹಾಗೂ ವೃತ್ತಿ ಶೈಲಿಯನ್ನು ಯುವ ಪತ್ರಕರ್ತರು ಅಳವಡಿಸಿಕೊಳ್ಳಬೇಕು ಎಂದರು.
ಪತ್ರಕರ್ತರಾದ ಅನ್ಸಾರ್ ಶೇಖ್ ಮಾತನಾಡಿ ಜೋಷಿಯವರ ಜೊತೆಗೆ ನಮ್ಮದು ಅವಿನಾಭಾವ ಸಂಬAದ.ಎಲ್ಲರಿಗೂ ಸ್ಪಂದಿಸುವ ಗುಣ ಹೊಂದಿದ್ದ ಅವರು ಒಬ್ಬ ವ್ಯಕ್ತಿಯಾಗಿ ಗುರುತಿಸಿಕೊಳ್ಳುವುದಕಿಂತ ವೃತ್ತಿಯ ಮೂಲಕ ಗುರುತಿಸಿಕೊಂಡು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಎಂದರು.
ಸುಬ್ರಾಯ ಭಟ್ಟ ಮಾತನಾಡಿ ಜೋಷಿಯವರ ಆದರ್ಶಗಳನ್ನು ನಮ್ಮಲ್ಲಿ ಅಳವಡಿಸಿಕೊಂಡರೆ ನಮ್ಮ ಉನ್ನತಿಗೆ ಹಾದಿಯನ್ನು ಹಿಡಿದುಕೊಂಡ ಹಾಗಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಸಾಪ ತಾಲೂಕಾದ್ಯಕ್ಷ ಶ್ರೀಧರ ಉಪ್ಪಿನಗಣಪತಿ, ಪತ್ರಕರ್ತರಾದ ಗಣೇಶ ರಾವ್, ಶಂಕರ ಶರ್ಮಾ, ಸದಾನಂದ ದೇಶಭಂಡಾರಿ,ರಾಘು ಶೇಟ್ ,ರವಿಗಾವಡಿ,ದಿನೇಶ ಗಾಂವಕರ್,ಮAಜು ದಿವಗಿ, ಯೋಗಿಶ ಮಡಿವಾಳ್, ನಟರಾಜ ಗದ್ದೆಮನೆ, ಸಂತೋಷ ನಾಯ್ಕ, ಚಂದ್ರಕಾAತ ನಾಯ್ಕ, ಹಾಗೂ ಸಂಘದ ಸದಸ್ಯರಾದ ಕುಮಾರ್ ವೆಂಗರ್ಲೇಕರ್, ವಿನೋದ ಹರಿಕಂತ್ರ, ಸಂತೋಷ್ ನಾಯ್ಕ ಮುಂತಾದವರು ಹಾಜರಿದ್ದರು.

error: