December 22, 2024

Bhavana Tv

Its Your Channel

ನಿಯಂತ್ರಣ ತಪ್ಪಿ ಒಣಗಿದ ಮೀನು ತುಂಬಿದ ಲಾರಿವೊಂದು ಪಲ್ಟಿ.

ಭಟ್ಕಳ: ತಾಲೂಕಿನ ಮೂಡಭಟ್ಕಳ ಬೈಪಾಸ್ ಸಮೀಪ ನಿಯಂತ್ರಣ ತಪ್ಪಿ ಒಣಗಿದ ಮೀನು ತುಂಬಿದ ಲಾರಿವೊಂದು ಪಲ್ಟಿಯಾದ ಪರಿಣಾಮ ಲಾರಿ ಚಾಲಕನ ಕಾಲಿಗೆ ಪೆಟ್ಟು ಬಿದ್ದಿದ್ದು ಪ್ರಾಣಾಪಾಯದಿಂದ ಚಾಲಕ ಪಾರಾದ ಘಟನೆ ಬುಧವಾರದಂದು ನಡೆದಿದೆ.
ಗುಜರಾತ್ ನಿಂದ ಮಂಗಳೂರು ಕಡೆಗೆ ಸಾಗುತಿದ್ದ ಒಣಗಿದ ಮೀನು ತುಂಬಿದ ಲಾರಿವೊಂದು ಎದುರಿಗೆ ಬರುತ್ತಿದ್ದ ವಾಹನವನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ಹೊಂಡ ಕ್ಕೆ ಮುಗುಚಿ ಬಿದ್ದಿದೆ.ಲಾರಿ ಯಲ್ಲಿ ಒಣ ಮೀನು ಚಲಾ ಪೀಲಿ ಆಗಿ ಬಿದ್ದಿದ್ದು ಚಾಲಕ ಗುಜರಾತಿನ ಮೂಲದ ಹಿಲೋಚ ಖಾನ್ ೪೫ ವರ್ಷ ಗಾಯಗೊಂಡ ಹಿನ್ನೆಲೆ ತಕ್ಷಣಕ್ಕೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತದಲ್ಲಿ ಮೀನುಗಳನ್ನೆಲ್ಲ ಕೆಳಗಡೆ ಬಿದ್ದಿದು ಇನ್ನೊಂದು ವಾಹನಕ್ಕೆ ತುಂಬಿ ಲಾರಿಯನ್ನು ಕ್ರೇನ್ ಮುಖಾಂತರ ಲಾರಿ ಮೇಲಕ್ಕೆ ಎತ್ತಲಾಯಿತು.
ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

error: