December 22, 2024

Bhavana Tv

Its Your Channel

ವಿಷಪೂರಿತ ಹಾವು ಕಡಿದ ಬಾಲಕರ ರಕ್ಷಣೆ ಮಾಡಿದ ಭಟ್ಕಳ ಸರ್ಕಾರಿ ಆಸ್ಪತ್ರೆ ವೈದ್ಯರ ತಂಡ

ಸೂಕ್ತ ಚಿಕಿತ್ಸೆ ನೀಡಿದ ಮಕ್ಕಳ ತಜ್ಞರ ಡಾ: ಸುರಕ್ಷಿತ್ ಶೆಟ್ಟಿ ಕಾರ್ಯಕ್ಕೆ ಶ್ಲಾಘನೆ

ಭಟ್ಕಳ: ವಿಷಪೂರಿತ ಹಾವು ಕಚ್ಚಿದ ಇಲ್ಲಿನ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಮಕ್ಕಳನ್ನು ಇಲ್ಲಿನ ಮಕ್ಕಳ ತಜ್ಞ ಡಾ: ಸುರಕ್ಷಿತ್ ಶೆಟ್ಟಿ ಹಾಗೂ ಸರ್ಜನ್ ಡಾ| ಅರುಣಕುಮಾರ ಸೂಕ್ತ ಚಿಕಿತ್ಸೆ ನೀಡಿ ಅಪಾಯದಿಂದ ಪಾರು ಮಾಡಿದ ಘಟನೆ ವರದಿಯಾಗಿದೆ. ಕೋವಿಡ್-19 ಸಂದರ್ಭದಲ್ಲಿ ವೈದ್ಯರುಗಳ ಸಕಾಲಿಕ ಚಿಕಿತ್ಸೆ ಶ್ಲಾಘನೀಯವಾಗಿದೆ. ಮಕ್ಕಳನ್ನು ಅತ್ಯಂತ ಕಾಳಜಿಯಿಂದ ನೋಡಿಕೊಂಡು ಸಕಾಲಿಕ ಚಿಕಿತ್ಸೆ ನೀಡುವುದನ್ನು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ| ಸವಿತಾ ಕಾಮತ್ ಶ್ಲಾಘಿಸಿದ್ದಾರೆ. ಕೆಲ ದಿನಗಳ ಹಿಂದೆ ಮಾರುಕೇರಿ ಎಂಟು ವರ್ಷದ ಭರತ್ ನಾಯ್ಕ ನಿಗೆ ಮನೆಯೊಳಗೆ ಡಬ್ಬದಲ್ಲಿಟ್ಟಿದ್ದ ತಿಂಡಿ ತೆಗೆಯುವ ಸಂದರ್ಭದಲ್ಲಿ ವಿಷಪೂರಿತ ಹಾವು ಕಚ್ಚಿತ್ತು. ಕೆಲವೇ ನಿಮಿಷದಲ್ಲಿ ಕಾಲಿನಲ್ಲಿ ರಕ್ತ ಸೋರುತ್ತಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಿದ್ದ ಈತನನ್ನು ಮಕ್ಕಳ ತಜ್ಞ ಡಾ| ಸುರಕ್ಷಿತ ಶೆಟ್ಟಿ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಿದ್ದರು. ಭರತನಿಗೆ ಯಾವ ಹಾವು ಕಚ್ಚಿದೆ ಎಂದು ತಿಳಿದಿದ್ದರೂ ವಿಷ ಬಾಲಕನ ದೇಹಕ್ಕೆ ಏರದಂತೆ ತೀವ್ರ ನಿಗಾ ವಹಿಸಿದ್ದರು. ರಾತ್ರಿ ಉಸಿರಾಟದಲ್ಲಿ ಏರುಪೇರಾಗಿದ್ದರಿಂದ ವೆಂಟಿಲೇಟರ್ ವ್ಯವಸ್ಥೆ ಕಲ್ಪಿಸಿ, ಆಸ್ಪತ್ರೆಯ ಇನ್ನಿತರ ವೈದ್ಯರ ಸಹಕಾರದಿಂದ ಪ್ರಾಣಾಪಾಯದಿಂದ ಪಾರುಮಾಡಿದ್ದರು. ಭರತನಿಗೆ ವಿಷಪೂರಿತ ನಾಗರ ಹಾವು ಕಚ್ಚಿರುವುದನ್ನು ಖಚಿತಪಡಿಸಿಕೊಂಡ ವೈದ್ಯರು ಒಂದು ವಾರ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಿದ್ದಲ್ಲದೇ ಹಾವು ಕಚ್ಚಿದ ಆತನ ಬಾಲಕನ ಕೈಗೆ ನಾಗರಹಾವು ಕಚ್ಚಿದ್ದು ಪಾಲಕರು ಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಿ ಕೀವು ಸಹಿತ ಕಪ್ಪಾದ ಚರ್ಮ ತೆಗೆದಿದ್ದು ಬಾಲಕ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಅದರಂತೆ ವೆಂಕಟಾಪುರ ಶ್ರೇಯಾ ಎನ್ನುವ 7 ವರ್ಷದ ಜೀವಂತ ಹಾವು ಸಮೇತ ಆಸ್ಪತ್ರೆಗೆ ಬಂದಿದ್ದರಿಂದ ವೈದ್ಯರು ಆಕೆ ಸೂಕ್ತ ಚಿಕಿತ್ಸೆ ನೀಡಲು ಸಹಕಾರಿ ಆಯಿತು. ಆಕೆಯೂ ಕೂಡ ಆಸ್ಪತ್ರೆಯಲ್ಲಿ ಇದೆ ಚೇತರಿಸಿಕೊಳ್ಳುತ್ತಿದೆ ಅಪಾಯದಿಂದ ಪಾರಾಗಿದ್ದಾರೆ. ಹಾವು ಕಡಿತಕ್ಕೊಳಗಾದ ಜೀವನ್ಮರಣದ ಸ್ಥಿತಿಯಲ್ಲಿದ್ದ ಇಬ್ಬರು ಮಕ್ಕಳನ್ನು ಸೂಕ್ತ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿರುವ ಸರ್ಕಾರಿ ಆಸ್ಪತ್ರೆ ಮಕ್ಕಳ ತಜ್ಞ ಡಾ| ಸುರಕ್ಷಿತ ಶೆಟ್ಟಿ ಸರ್ಜನ್ ಡಾ| ಅರುಣಕುಮಾರ ಹಾಗೂ ಆಡಳಿತ ವೈದ್ಯಾಧಿಕಾರಿ, ಡಾ॥ ಸವಿತಾ ಕಾಮತ್ ಅರವಳಿಕೆ ತಜ್ಞೆ ಮತ್ತು ಸಿಬ್ಬಂದಿ ಕಾರ್ಯಕ್ಕೆ ನಾಗರಿಕರು ಅಭಿನಂದಿಸಿದ್ದಾರೆ. ಈ ಬಗ್ಗೆ ಜಯಶ್ರೀ ನಾಯ್ಕ,ಭರತನ ತಾಯಿ ಮಾತನಾಡಿ ವಿಷಪೂರಿತ ಹಾವು ಕಡಿದು ಜೀವನ್ಮರಣದ ಸ್ಥಿತಿಯಲ್ಲಿದ್ದ ನನ್ನ ಮಗ ಭರತನಿಗೆ ಸೂಕ್ತ ಚಿಕಿತ್ಸೆ ನೀಡಿದ್ದಲ್ಲದೇ ನಮಗೆ ಧೈರ್ಯ ನೀಡಿದ ತಾಲೂಕು ಆಸ್ಪತ್ರೆ ವೈದ್ಯರ ಕಾರ್ಯ ಸ್ತುತ್ಯಾರ್ಹವಾಗಿದೆ ಎಂದರು.

error: