December 22, 2024

Bhavana Tv

Its Your Channel

ಭಾರತದ ನಂ.1 ಲಾಹೋರಿ ತಳಿ ಸೇರಿದ ಪಾರಿವಾಳ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಿದ ಭಟ್ಕಳ ನಗರ ಠಾಣೆ ಪೊಲೀಸರು

ಭಟ್ಕಳ: ತಾಲೂಕಿನ ಪುರಸಭಾ ವ್ಯಾಪ್ತಿಯ ಆಝಾದ್‌ನಗರ ಪಾರಿವಾಳ ಸಾಕಾಣಿಕಾ ಕೇಂದ್ರದಿಂದ ಕಳೆದ ಅ.5ರ ರಾತ್ರಿ ದುಬಾರಿ ಬೆಲೆಯ 25 ಪಾರಿವಾಳವನ್ನು ಕದ್ದು ಪರಾರಿಯಾಗಿದ್ದ ವ್ಯಕ್ತಿಯನ್ನು ಭಟ್ಕಳ ನಗರ ಠಾಣೆಯ ಪೊಲೀಸರು ಬೆಂಗಳೂರಿನಿಂದ ಬಂಧಿಸಿ ಕರೆ ತಂದಿರುವ ಘಟನೆ ನಡೆದಿದೆ. ಆರೋಪಿಯನ್ನು ತಮಿಳ್ಳಾಡು ಪನ್ನೀರ್ ಸೆಲ್ವಂ (40) ಎಂದು ಗುರುತಿಸಲಾಗಿದೆ. ಈತನಿಂದ ಸರಿಸುಮಾರು ರು.15 ಲಕ್ಷ ಮೌಲ್ಯದ ಪಾರಿವಾಳಗಳನ್ನು ಜಪ್ತಪಡಿಸಿಕೊಳ್ಳಲಾಗಿದೆ. ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯಗಳು ಸೆರೆಯಾಗಿದ್ದು, ಪಾರಿವಾಳ ಸಾಕಾಣಿಕಾ ಕೇಂದ್ರದ ಮಾಲಕ ಅಪ್ಪಲ್ ಕಾಶೀಮಜಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಕಳೆದ ಒಂದು ವರ್ಷದ ಹಿಂದೆಯೇ ಭಟ್ಕಳಕ್ಕೆ ಬಂದು ಅಪ್ಜಲ್ ರಿಂದ ಪಾರಿವಾಳಗಳನ್ನು ಖರೀದಿಸಿ ಹೋಗಿರುವ ಮಾಹಿತಿ ಲಭಿಸಿದೆ. ಕದ್ದ ಪಾರಿವಾಳ ಪೈಕಿ 7 ಪಾರಿವಾಳಗಳನ್ನು ಈತ ಬೇರೆಡೆಗೆ ಮಾರಾಟ ಮಾಡಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಯನ್ನು ಗುರುವಾರವೇ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ಇದು ಭಾರತದ ನಂ.1 ಲಾಹೋರಿ ತಳಿ:

ಭಟ್ಕಳ ಆಝಾದ್‌ನಗರದಲ್ಲಿರುವ ಅಫ್ಜಲ್ ಅವರು ಪಾರಿವಾಳ ಸಾಕುವ ಹವ್ಯಾಸವನ್ನು ಇಟ್ಟುಕೊಂಡಿದ್ದಾರೆ. ಅವರ ಸಾಕಾಣಿಕಾ ಕೇಂದ್ರದಲ್ಲಿ ಭಾರತದ ನಂಬರ್ 1
ಲಾಹೋರಿ ಜಾತಿಯ, ಅದ್ಭುತ ಸೌಂದರ್ಯವನ್ನು ಹೊಂದಿರುವ ಪಾರಿವಾಳಗಳು ಇವೆ.
ಈ ಪಾರಿವಾಳಗಳು ವಿದೇಶ ಮಾತ್ರವಲ್ಲದೇ ಭಾರತೀಯ ಮಾರುಕಟ್ಟೆಯಲ್ಲಿಯೂ ದುಬಾರಿ ಬೆಲೆಯನ್ನು ಹೊಂದಿವೆ.ಒಂದು ಪಾರಿವಾಳಕ್ಕೆ ಒಮ್ಮೆ 1 ಲಕ್ಷದವರೆಗೂ ಬೇಡಿಕೆ ಬರುವುದು ಎಂದು ಅಷ್ಟಲ್ ಅವರ ಸಾಕಾಣಿಕಾ ಕೇಂದ್ರದಲ್ಲಿ 300-350 ಪಾರಿವಾಳಗಳು ಇವೆ.ಈ ಲಾಹೋರಿ ಪಾರಿವಾಳಗಳ ಕಾರಣದಿಂದದಲೇ ಅಫ್ಜ 2018 ರಿಂದ ಸತತ 3 ವರ್ಷ ರಾಷ್ಟ್ರೀಯ ಪಾರಿವಾಳಗಳ ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಿಟ್ಟಿಸಿಕೊಂಡಿರುವುದು ವಿಶೇಷವಾಗಿದೆ.

error: