December 20, 2024

Bhavana Tv

Its Your Channel

ಶಮ್‌ಶುದ್ದೀನ್ ವೃತ್ತದ ಸಮೀಪದ ಖಾಲಿ ಜಾಗದಲ್ಲಿ ವ್ಯಕ್ತಿಯ ಶವ ಪತ್ತೆ

ಭಟ್ಕಳ:ತಾಲೂಕಿನ ಎನ್.ಹೆಚ್. 66 ರಸ್ತೆಯ ಟಿ.ಎಪ್.ಸಿ. ಹೋಟೆಲ್ ಎದುರಿನಲ್ಲಿ ಇರುವ ಖಾಲಿ ಜಾಗದಲ್ಲಿ ಸುಮಾರು 45-ರಿಂದ50 ವರ್ಷದ ವ್ಯಕ್ತಿ ಶವ ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ.ಮೃತಪಟ್ಟ ವ್ಯಕ್ತಿ ನಾಗರಾಜ್ ತಂದೆ ಮಂಜೇಗೌಡ,
ಹನುಮಂತಪುರ ಹಾಸನ ಜಿಲ್ಲೆಯ ನಿವಾಸಿ ಎಂದು ತಿಳಿದು ಬಂದಿದೆ. ಇತ ಧರಿಸಿದ ಪ್ಯಾಂಟ್ ನಲ್ಲಿ ಹಾಸನ ಮೂಲದ ಕರ್ನಾಟಕ ರಸ್ತೆ ಸಾರಿಗೆ ಗುರುತಿನ ಚೀಟಿ ಪತ್ತೆಯಾಗಿದೆ.

ಈತ ಹಾಸನ ದಿಂದ ಭಟ್ಕಳ ಕ್ಕೆ ಯಾವ ಉದೇಶ ಕ್ಕಾಗಿ ಬಂದಿದ್ದ,ಇಲ್ಲಿ ಶವ ಹೇಗೆ ಪತ್ತೆಯಾಗಿದೆ ಎಂದು ಪೋಲಿಸ್ ತನಿಖೆ ಯಲ್ಲಿ ತಿಳಿದು ಬರಬೇಕಾಗಿದ್ದೆ. ಮೃತಪಟ್ಟ ವ್ಯಕ್ತಿಯ ಶವವನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ.

error: