December 21, 2024

Bhavana Tv

Its Your Channel

ವೆಂಕಟಾಪುರ ನದಿಯಲ್ಲಿ ಅಪರಿಚಿತ ವ್ಯಕ್ತಿ ಶವ‌ ಪತ್ತೆ.

ಭಟ್ಕಳ:ತಾಲೂಕಿನ ಕುಕ್ನೀರ ಸಮೀಪದ ವೆಂಕಟಾಪುರ ನದಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿರುವ ಘಟನೆ ಬುಧವಾರ ನಡೆದಿದೆ.ಅಂದಾಜು 60 ವರ್ಷದ ಆಸುಪಾಸಿನ ವ್ಯಕ್ತಿಯಾಗಿದ್ದು.ಈತನ ಶವ ಪತ್ತೆಯಾದ ನದಿಯ ದಡದಲ್ಲಿ ಮೃತ ವ್ಯಕ್ತಿಯ ಬಟ್ಟೆ ಮತ್ತು ಚಪ್ಪಲಿ ಪತ್ತೆಯಾಗಿದ್ದು. ದಡದಲ್ಲಿ ಪತ್ತೆಯಾದ ಶರ್ಟ್ ಹಿಂಬದಿಯಲ್ಲಿ ಬೆಂಗಳೂರು ಮೂಲದ ಟೈಲರ್ ಶಾಪ್ ಮೊಬೈಲ್ ನಂಬರ್ ಮತ್ತು ವಿಳಾಸ ಪತ್ತೆಯಾಗಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಭಟ್ಕಳ ಗ್ರಾಮೀಣ ಠಾಣೆ ಪಿ.ಎಸ್.ಐ ಓಂಕಾರಪ್ಪ ಹಾಗೂ ಸಿಬ್ಬಂದಿ ಮಲ್ಲಿಕಾರ್ಜುನ ಸ್ಥಳಕ್ಕೆ ತೆರಳಿ ವೆಂಕಟಾಪುರ ನದಿಯಲ್ಲಿ ಅಪರಿಚಿತ ಮೃತ ದೇಹವನ್ನು ಎಸ್.ಡಿ.ಪಿ.ಐ ಸದಸ್ಯರು ಸಹಾಯದಿಂದ ನದಿಯಿಂದ ಶವವನ್ನು ಮೇಲಕ್ಕೆತ್ತಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

error: