ವಿವಿಧ ಪೈನಾನ್ಸನಲ್ಲಿ ಗಿರಿವಿ ಇಟ್ಟು ಹಣ ಪಡೆದ ಆರೋಪಿ ಸತೀಶ ಭಟ್
ಭಟ್ಕಳ:ತಾಲೂಕಿನ ಮುಂಡಳ್ಳಿ ಗ್ರಾಮದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ದಿನಾಂಕ: 18-10-2020 ರಂದು ಬಂಗಾರದ ಆಭರಣಗಳು ಕಳ್ಳತನ ಆದ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆ ಗುನ್ನಾ ನಂ.72/2020, ಕಲಂ: 454,457,380 ಐ.ಪಿ.ಸಿ ಪ್ರಕರಣ ದಾಖಲಾಗಿದ್ದು ಆರೋಪಿತರ ಪತ್ತೆಯ ಪತ್ತೆಗಾಗಿ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಮಾನ್ಯ ಶ್ರೀ ಶಿವಪ್ರಕಾಶ ದೇವರಾಜ ಹಾಗೂ ಶ್ರೀ ಎಸ್ ಬದ್ರಿನಾಥ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಇವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀ ನಿಖೀಲ್ ಬಿ. ಸಹಾಯಕ ಪೊಲೀಸ್ ಅಧೀಕ್ಷಕರು ಉಪ ವಿಭಾಗ ಭಟ್ಕಳ ರವರ ನೇತೃತ್ವದಲ್ಲಿ ಅಧಿಕಾರಿ ಹಾಗೂ ವಿಶೇಷ ತಂಡ ರಚಿಸಿ ತಂಡದ ಉಸ್ತುವಾರಿಯನ್ನು ಶ್ರೀ ದಿವಾಕರ ಪಿ.ಎಮ್ ಸಿ.ಪಿ.ಐ ಭಟ್ಕಳ ರವರು ವಹಿಸಿಕೊಂಡು ಈ ಪ್ರಕರಣದಲ್ಲಿಯ ಆರೋಪಿತನಿಗೆ ದಿನಾಂಕ 23-10-2020 ರಂದು ಸತೀಶ ರಾಮಚಂದ್ರ ಭಟ್ 31 ವರ್ಷ ದೇವಸ್ಥಾನದ ಅರ್ಚಕ, ಆಗಿದ್ದು : ಇಡಗುಂದಿ,ಯಲ್ಲಾಪುರ ಆಗಿದ್ದು ಈತನಿಗೆ ಸಾಗರದಲ್ಲಿ ದಸ್ತಗಿರಿ ಮಾಡಿ ಆರೋಪಿತನಿಗೆ ಪೋಲಿಸ್ ಕಸ್ಟಡಿ ಪಡೆದುಕೊಂಡು ವಿಚಾರಣೆ ನಡೆಸಿದಾಗ ಆರೋಪಿತನು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಯಲ್ಲಾಪುರ ಮಣಿಪುರಂ ಪೈನಾನ್ಸ್ ಮತ್ತು ಮುತ್ತೋಬ್ ಪೈನಾನ್ಸದಲ್ಲಿ ಗಿರಿವಿ ಇಟ್ಟು ಹಣ ಪಡೆದ ಬಗ್ಗೆ ತಿಳಿಸಿದಂತೆ ಮಣಿಪುರಂ ಪೈನಾನ್ಸ್ ಮತ್ತು ಮುತ್ತೂಟ್ ಫೈನಾನ್ಸಿನಿಂದ ಒಟ್ಟು 23 ನಮೂನೆಯ ಒಟ್ಟು 24,15,340 ರೂಪಾಯಿ 513.8 ಗ್ರಾಂ ಚಿನ್ನಾಭರಣಗಳನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ.
ಈ ಕಾರ್ಯಾಚರಣೆಯ ತಂಡದಲ್ಲಿ ಭಟ್ಕಳ ವೃತ್ತ ನಿರೀಕ್ಷಕರಾದ ಶ್ರೀ ದಿವಾಕರ ಪಿ.ಎಮ್, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಶ್ರೀ ಎಚ್ ಓಂಕಾರಪ್ಪ, ಭಟ್ಕಳ ಶಹರ ಠಾಣೆಯ ಪಿ.ಎಸ್.ಐ ಶ್ರೀ ಭರತ್ ಕುಮಾರ, ಮುರ್ಡೆಶ್ವರ ಪೊಲೀಸ ಠಾಣೆಯ ಪಿ.ಎಸ್.ಐ ಶ್ರೀ ರವೀಂದ್ರ ಬಿರಾದಾರ, ಭಟ್ಕಳ ಗ್ರಾಮೀಣ ಠಾಣೆಯ ಎ.ಎಸ್.ಐ ಶ್ರೀ ಮಂಜುನಾಥ ಗೌಡರ್, ಶ್ರೀ ರಾಮಚಂದ್ರ ಎಸ್ ನಾಯ್ಕ, ಹಾಗೂ ಸಿಬ್ಬಂದಿಯವರಾದ ಮಹೇಶ ಪಟಗಾರ, ಸಂತೋಷ ಹೊನ್ನಾಳ, ಮೋಹನ ಪೂಜಾರಿ, ದೀಪಕ .ಎಸ್. ನಾಯ್ಕ, ನಾಗರಾಜ ಮೊಗೇರ, ಗಣೇಶ ಗಾಂವಕರ, ಅಶೋಕ ನಾಯ್ಕ, ದಿನೇಶ ನಾಯಕ, ದೇವು.ಆರ್.ನಾಯ್ಕ, ಲೋಕೇಶ ಕತ್ತಿ, ರಾಜು ಗೌಡ, ಈರಣ್ಣಾ ಪೂಜಾರಿ, ಮಲ್ಲಿಕಾರ್ಜುನ ನಾಯ್ಕ, ಸಚೀನ ಪವಾರ, ಮಲ್ಲಿಕಾರ್ಜುನ ಉಟಗಿ, ನಿಂಗನಗೌಡ ಪಾಟೀಲ್, ರವಿ ಪಟಗಾರ, ಹಾಗೂ ಸಿ.ಡಿ.ಆರ್ ವಿಭಾಗದ ಸಿಬ್ಬಂದಿಯವರಾದ ಸುಧೀರ ಮಡಿವಾಳ, ರಮೇಶ ನಾಯ್ಕ, ಅಣಪ ಬುಡಗೇರಿ, ಚಾಲಕರಾದ ದೇವರಾಜ ಮೊಗೇರ, ಇವರು ಉಪಸ್ಥಿತರಿದ್ದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.