ಶಿರಸಿ: ಮಾತು ತಪ್ಪಿದ ದಂಡಾಧಿಕಾರಿ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಲು ಹೋರಾಟಗಾರರ ಆಗ್ರಹ. ತಾಸಿಗೂ ಮಿಕ್ಕಿ ಪ್ರತಿಭಟನೆ, ಪ್ರತಿಭಟನಾಕಾರರ ಪ್ರಶ್ನೆಗಳ ಸುರಿಮಳೆ, ಸಮರ್ಪಕ ಉತ್ತರಕ್ಕೆ ಅರಣ್ಯಾಧಿಕಾರಿಗಳಿಂದ ತತ್ತರ. ಪ್ರತಿಭಟನಾಕಾರರಿಂದ ಸಭೆ ಬಹಿಷ್ಕಾರ. ಅಪೂರ್ಣಗೊಂಡ ಅಭಯಾರಣ್ಯ ಮಾಹಿತಿ ಶಿಬಿರ.
ಕಳೆದ ವಾರ ಅಭಯಾರಣ್ಯಕ್ಕೆ ವಿರೋಧಿಸಿ ರಾಗಿಹೊಸಳ್ಳಿಯಲ್ಲಿ ಜರುಗಿದ ಪ್ರತಿಭಟನೆಯಲ್ಲಿ ತಾಲೂಕಾ ದಂಡಾಧಿಕಾರಿ ಎಮ್.ಆರ್. ಕುಲಕರ್ಣಿಯವರು ಇಂದು ಉಪವಿಭಾಗಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಮ್ಮುಖದಲ್ಲಿ ಅಭಯಾರಣ್ಯ ಕುರಿತು ಮಾಹಿತಿ ನೀಡುವುದಾಗಿ ಪ್ರಕಟಿಸಿದಂತೆ ನಿಗದಿತ ಅವಧಿಗೆ ಮಿಕ್ಕಿ ತಾಸುಗಳಾದರೂ ಸಂಬAಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬಾರದೇ ಇರುವುದರಿಂದ ಪ್ರತಿಭಟನಾಕಾರರು ಅಧಿಕಾರಿಗಳ ಬರುವಿಕೆಗೆ ಒಕ್ಕೋರಿಲಿನಿಂದ ಆಗ್ರಹಿಸುತ್ತಾ ರಾಗಿಹೊಸಳ್ಳಿಯಲ್ಲಿ ಪ್ರತಿಭಟನೆ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಆಗ್ರಹಕ್ಕೆ ಮಣಿದು ಶಿರಸಿ ಉಪವಿಭಾಗಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಮಾಹಿತಿ ಶಿಬಿರ ರಾಗಿಹೊಸಳ್ಳಿಯ ಶಾಂಭವಿ ಸಭಾಭವನದಲ್ಲಿ ಜರುಗಿತು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಿದ್ದಾಪುರ ಎ.ಸಿ.ಎಫ್. ಅಜೀಜ ಆಗಮಿಸಿದ್ದು ಕಾರ್ಯಕ್ರಮದಲ್ಲಿ ಡಿ.ವೈ.ಎಸ್.ಪಿ. ಜಿ.ಟಿ. ನಾಯಕ, ವೇದಿಕೆ ಜಿಲ್ಲಾಧ್ಯಕ್ಷ ಎ.ರವೀಂದ್ರ ನಾಯ್ಕ, ಮುಂಡಗೋಡ ಸಿ.ಪಿ.ಐ. ಶಿವಾನಂದ, ಗ್ರಾಮ ಪಂಚಾಯತ ಅಧ್ಯಕ್ಷ ದೇವರಾಜ ಮರಾಠಿ ಮುಂತಾದವರ ಉಪಸ್ಥಿತಿಯಲ್ಲಿ ಮಾಹಿತಿ ಕಾರ್ಯಾಗಾರ ಪ್ರಾರಂಭಗೊAಡಿತು.
ಪ್ರಶ್ನೆಗಳ ಸುರಿಮಳೆ: ಅಭಯಾರಣ್ಯ ಘೋಷಣೆ ಪೂರ್ವ ಸ್ಥಳಿಯ ಜನರ ಅಭಿಪ್ರಾಯ ಮತ್ತರು ಸ್ಥಳಿಯ ಸಂಸ್ಥೆಯ ತೀರ್ಮಾನ ಅವಶ್ಯಕತೆ ಇದೆಯೋ? ಈ ಪ್ರದೇಶದಲ್ಲಿ ಕಾಮಗಾರಿ ಮಾಡಲು ತೊಂದರೆ ಏನಾದರೂ ಇದೆಯಾ? ಅಭಯಾರಣ್ಯ ಪ್ರದೇಶದಲ್ಲಿ ಜನ ಸಾಮಾನ್ಯರ ಜನ ಜೀವನಕ್ಕೆ ಇರುವ ನಿರ್ಭಂಧಗಳೇನು?, ಇಲ್ಲಿ ಯಾವ ಪ್ರಾಣಿಗಳಿಗೆ ಪ್ರಾತಿನಿಧ್ಯ ನೀಡಲಾಗುತ್ತದೆ ಅಥವಾ ಸಾಕಲಾಗುತ್ತದೆ. ಈಗ ಗುರುತಿಸಲ್ಪಟ್ಟ ಅಭಯಾರಣ್ಯ ಪ್ರದೇಶದಲ್ಲಿ ಜನರು ಹೆಚ್ಚಿದ್ದಾರೇ? ಪ್ರಾಣಿಗಳ ಪ್ರಬೇಧಗಳಾವವು? ಇಲ್ಲಿರುವ ಅತಿಕ್ರಮಿತ ಕುಟುಂಬಗಳೆಷ್ಟು?ಮಾಲ್ಕೀ (ಕಂದಾಯ) ಕುಟುಂಬಗಳೆಷ್ಟು? ಅಭಯಾರಣ್ಯ ಪ್ರದೇಶದಲ್ಲಿ ಬರುವ ಅತಿಕ್ರಮಣದಾರರಿಗೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿಗೆ ಅವಕಾಶ ಇದೆಯೇ? ಅಭಯಾರಣ್ಯ ಘೋಷಣೆ ಪೂರ್ವದಲ್ಲಿ ಜನಾಭಿಪ್ರಾಯ ಅಥವಾ ಸ್ಥಳೀಯ ಸಂಸ್ಥೆಯ ಅಭಿಪ್ರಾಯ ಕ್ರೋಢೀಕರಣ ಅವಶ್ಯವಿದೆಯಾ? ಎಂಬಿತ್ಯಾದಿ ವಿಷಯದ ಮೇಲೆ ಪ್ರಮುಖರಾದ ನಾಗರಾಜ ಗೌಡ, ದೇವರಾಜ ಮರಾಠಿ, ಸಂತೋಷ ಗೌಡ, ಕೃಷ್ಣ ಮರಾಠಿ, ಗಜಾನನ ನಾಯ್ಕ, ಮಂಜುನಾಥ ಮರಾಠಿ ಮುಂತಾದವರು ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಸುರಿಮಳೆಗೈದರು. ಸಂಪನ್ಮೂಲ ವ್ಯಕ್ತಿಯಾಗಿ ಅರಣ್ಯ ಇಲಾಖೆ ಪರವಾಗಿ ಬಂದAತ ಎ.ಸಿ.ಎಫ್. ಅಜೀಜ ಸಮರ್ಪಕ ಉತ್ತರ ನೀಡದೇ ಇರುವ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳೊಂದಿಗೆ ಚರ್ಚೆಗೆ ಕಾರಣವಾದವು.
ಸಭೆ ಬಹಿಷ್ಕಾರ: ಗ್ರಾಮಸ್ಥರಿಗೆ ಸಮರ್ಪಕರ ಉತ್ತರ ದೊರಕದ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ಮಾಹಿತಿ ಹಾಗೂ ಉತ್ತರ ನೀಡಲು ಸಂಬAಧಿಸಿದ ಅರಣ್ಯ ಅಧಿಕಾರಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಅಸಹನೆಗೊಳಗಾದ ಜನರು ಮಾಹಿತಿ ಕೊರತೆ ಇರುವ ಅಧಿಕಾರಿಗಳಿಂದ ನಮಗೇನು ಮಾಹಿತಿ ಸಿಗಲು ಸಾಧ್ಯವಿಲ್ಲವೆಂದು ಹೇಳಿದ್ದಲ್ಲದೇ ಈ ಕುರಿತು ಸಾರ್ವಜನಿಕವಾಗಿ ಒಂದೇ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಸಭೆಯನ್ನು ಬಹಿಷ್ಕಾರಿಸಲಾಯಿತು. ಅಭಯಾರಣ್ಯಕ್ಕೆ ಸೇರ್ಪಡೆ ವಿರೋಧದ ಕುರಿತು ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಹೋರಾಟ ಜರುಗಿಸಲಾಗುವುದೆಂದು ಜಿಲ್ಲಾಧ್ಯಕ್ಷ ಎ.ರವೀಂದ್ರ ನಾಯ್ಕ ಈ ಸಂದರ್ಭದಲ್ಲಿ ಹೇಳಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಬಂಡಲ ಗ್ರಾಮ ಪಂಚಾಯತ ಸದಸ್ಯ ಕೃಷ್ಣಾ ಮರಾಠಿ, ಮಂಜುನಾಥ ನಾಯ್ಕ, ಗಣೇಶ ಗೌಡ ಮುಂತಾದವರು ಉಪಸ್ಥಿತರಿದ್ದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.