December 20, 2024

Bhavana Tv

Its Your Channel

ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಮಾಧ್ಯಮ ಹಾಗೂ ಪತ್ರಿಕಾ ಪ್ರತಿನಿಧಿಗಳಿಗೆ ಅಡ್ವೋಕೇಸಿ ಕಾರ್ಯಾಗಾರ

ಬಾದಾಮಿಯ ತಾಲೂಕಾ ಆಸ್ಪತ್ರೆಯಲ್ಲಿ ಇಂದು ೨೦೨೧ರ ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಮಾಧ್ಯಮ ಹಾಗೂ ಪತ್ರಿಕಾ ಪ್ರತಿನಿಧಿಗಳಿಗೆ ಅಡ್ವೋಕೇಸಿ ಕಾರ್ಯಾಗಾರ ನಡೆಸಲಾಯಿತು.

ಬಾಗಲಕೋಟೆ ಜಿಲ್ಲೆಯ ಬಾದಾಮಿಯ ತಾಲೂಕಾ ಆರೋಗ್ಯ ಇಲಾಖೆಯಲ್ಲಿ ಇಂದು ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಮಾಧ್ಯಮ ಹಾಗೂ ಪತ್ರಿಕಾ ಪ್ರತಿನಿಧಿಗಳಿಗೆ ಅಡ್ವೋಕೇಸಿ ಕಾರ್ಯಾಗಾರವು ಜಿ.ವಿ.ಜೋಶಿ ಅವರ ನಿರೂಪಣೆಯೊಂದಿಗೆ ಪ್ರಾರಂಭವಾಗಿ ಬಿ.ಏಚ್.ನರಸಾಪುರ ಕಿರಿಯ ಆರೋಗ್ಯ ಸಹಾಯಕಿ ಪ್ರಾರ್ಥನೆ ಗೀತೆಯೊಂದಿಗೆ ಚಾಲನೆ ನೀಡಿದರು. ಹಿರಿಯ ಮಾಧ್ಯಮ ಪ್ರತಿನಿಧಿ ಎಂ.ಎಸ್.ಹಿರೇಮಠ ಗುರುಗಳು ನೀರು ಹಾಕುವುದರ ಮುಖಾಂತರ ಕಾರ್ಯಕ್ರಮ ಮುನ್ನಡೆಯಿತು. ಪ್ರಾಸ್ತಾವಿಕವಾಗಿ ಜಿಲ್ಲಾ ಆರೋಗ್ಯ ಸೂಪರ್ವೈಸರ್ ಕೆ.ಪಿ.ಹಂಪಿಹೊಳಿ ಮಾತನಾಡಿ ಮಲೇರಿಯಾ ಹಾಗೂ ಸೊಳ್ಳೆಗಳಿಂದ ಬರುವ ರೋಗಗಳ ಬಗ್ಗೆ ಹಾಗೂ ಮುಂಚಿತವಾಗಿಯೇ ರೋಗ ಬರಲಾರದ ಹಾಗೆ ತಡೆಗಟ್ಟುವ ಬಗ್ಗೆ ವಿವರಣೆ ನೀಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ತಾಲೂಕಾ ಆರೋಗ್ಯ ವೈಧ್ಯಾದಿಕಾರಿಗಳಾದ ಎಂ. ಬಿ.ಪಾಟೀಲ.ಜಿಲ್ಲಾ ಕೀಲು ತಜ್ಞರಾದ ಎಲ್. ವಾಯ.ಹಿರೆಗೌಡರ್, ಎಂ.ಎಲ್.ಹಸರೆಡ್ಡಿ,ಹಾಗೂ ಹಿರಿಯಮಾಧ್ಯಮ ಪ್ರತಿನಿಧಿಗಳಾದ ಎಂ.ಎಸ್.ಹಿರೇಮಠ ವೇದಿಕೆಯಲ್ಲಿ ಆಸೀನರಾಗಿದ್ದರು.

ಜಿಲ್ಲಾ ಕೀಲು ತಜ್ಞರಾದ ಎಲ್. ವಾಯ.ಹಿರೆಗೌಡರ ಹಾಗೂ ಎಂ.ಎಲ್.ಹಸರೆಡ್ಡಿ ಮಾತನಾಡಿ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಹಾಗೂ ಆನೆ ಕಾಲು ರೋಗಗಳ ಬಗ್ಗೆ ಹಾಗೂ ಅವುಗಳನ್ನು ತಡೆಗಟ್ಟುವ ವಿಧಾನಗಳ ಬಗ್ಗೆ ದೃಶ್ಯ ಮಾಧ್ಯಮ ಹಾಗೂ ವೀಡಿಯೋ ಮೂಲಕ ವಿವರಣೆಯನ್ನು ನೀಡಿ ಸಾರ್ವಜನಿಕರಿಗೆ ನಾವು ಎಷ್ಟೇ ತಿಳಿ ಹೇಳಿದರು ಇದರ ಬಗ್ಗೆ ಲಕ್ಷ ವಹಿಸದೆ ನಿರ್ಲಕ್ಷ ತೋರುತ್ತಿದ್ದು ಮಾಧ್ಯಮ ಹಾಗೂ ಪತ್ರಿಕಾ ಪ್ರತಿನಿಧಿಗಳಾದ ನಿಮ್ಮ ಮುಖಾಂತರ ತಲುಪಿದರೆ ಸಾರ್ವಜನಿಕರು ಹೆಚ್ಚು ಜಾಗೃತರಾಗುತ್ತರೆ ಅದಕ್ಕಾಗಿಯೇ ಇದರಲ್ಲಿ ನಿಮ್ಮ ಪಾತ್ರ ಬಹು ಮುಖ್ಯವಾದದ್ದು ಎಂದು ಈ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದೇವೆ ತಿಳಿಸಿದರು. ಬಾದಾಮಿ ತಾಲೂಕಾ ವೈಧ್ಯಾಧಿಕಾರಿ ಎಂ. ಬಿ.ಪಾಟೀಲ ನಿಮ್ಮೆಲ್ಲರ ಸಹಕಾರದಿಂದ ಈ ಮಲೇರಿಯಾ ಮುಕ್ತ ಜಿಲ್ಲೆ ಮಾಡಬಹುದು. ಸಾರ್ವಜನಿಕರು ಮುಜಾಗೃತೆ ವಹಿಸಬೇಕು ಮಾಧ್ಯಮ ಪತ್ರಿಕಾ ಪ್ರತಿನಿಧಿಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಾರೆ ಎಂದು ಶ್ಲಾಘಿಸಿದರು.ನಂತರ ಬಿ.ಎಸ್.ಮದ್ಲಿ ಅವರು ಎಲ್ಲರಿಗೂ ವಂದನೆಗಳೊAದಿಗೆ ವಂದಿಸಿ ಕಾರ್ಯಕ್ರಮ ಮುಗಿಸಿದರು.ಇದೆ ಸಂದರ್ಭದಲ್ಲಿ ಮಾಧ್ಯಮ ಪತ್ರಿಕಾ ಪ್ರತಿನಿಧಿಗಳು ಹಾಗೂ ಆರೋಗ್ಯ ಇಲಾಖೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: