ಬಾದಾಮಿ ; ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಹಾಲಿ ಬಾದಾಮಿ ಮತಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯನವರು ಸುಮಾರು ೬ ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ಬಾದಾಮಿ ತಾಲೂಕಿನ ಚೋಳಚಗುಡ್ಡ ಗ್ರಾಮದ ಹೈಸ್ಕೂಲ್ ಹತ್ತಿರದ ಆಶ್ರಯ ಕಾಲೋನಿಯ ಶ್ರೀ ಕೃಷ್ಣನ ಮೂರ್ತಿಗೆ ದೇವಸ್ಥಾನ ನಿರ್ಮಿಸಲು ಕಾಂಗ್ರೆಸ್ ಮುಖಂಡರು ಗುದ್ದಲಿ ಪೂಜೆ ನೆರವೇರಿಸಿದರು. ಯಾದವ ಸಮಾಜದ ಬಾಂಧವರು ದೇವಸ್ಥಾನ ನಿರ್ಮಾಣದ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದರು.ಸಿದ್ದರಾಮಯ್ಯನವರ ಕಾರ್ಯಗಳಿಗೆ ಯಾದವ ಸಮಾಜದವತಿಯಂದ ಶ್ಲಾಘನೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನ ಉತ್ಸಾಹಿ ಯುವ ಮುಖಂಡರಾದ ಪ್ರಕಾಶ್.ಎಸ್.ದೇಸಾಯಿ,ಆನಂದ ಮರದಿತೋಟ ಹಾಗೂ ಮುಖಂಡರುಗಳಾದ ಡಾ||ರಾಘು ಜೋಶಿ, ರಾಜು ಹಟ್ಟಿ, ಈರಣ್ಣ.ಕುಲಕರ್ಣಿ,ಉಮೇಶ್ ಶಿವಪ್ಪಯ್ಯನಮಠ,ಹಾಗೂ ಸಿದ್ದಪ್ಪ ಹನಮರ,ಯಾದವ ಸಮಾಜದ ಯುವಕರು, ಬಾಂಧವರು ಉಪಸ್ಥಿತರಿದ್ದರು.
ವರದಿ:- ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ
More Stories
ಏ.೨೨ ಕ್ಕೆ ಹಳಗೇರಿ- ಉಗಲವಾಟ ದಲ್ಲಿ ಬೃಹತ್ ಕಾರ್ಯಕ್ರಮ
2021-2022 ನೇ ಸಾಲಿನ ಏಳನೇ ವರ್ಗದ ವಿದ್ಯಾರ್ಥಿಗಳನ್ನು ಬೀಳ್ಕೊಡುಗೆ ಕಾರ್ಯಕ್ರಮ
ದಾಹ ತಣಿಸುವ ಆರವಟಿಗೆ ಆರಂಭಿಸಿ ಜನರ ಮೆಚ್ಚುಗೆಗೆ ಪಾತ್ರವಾದ ಯುವಾ ಬ್ರಿಗೇಡ್ ಘಟಕ