December 21, 2024

Bhavana Tv

Its Your Channel

ಬಾದಾಮಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೈಕಲ್ ಜಾಥಾ

ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿರಂತರವಾಗಿ ದರ ಏರಿಕೆ ಹಾಗೂ ಕರೊನಾದಿಂದ ಸಂಕಷ್ಟದಲ್ಲಿರುವ ಜನರ ಮೇಲೆ ಗದಾ ಪ್ರಹಾರ ಮಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಬಾದಾಮಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಾದಾಮಿ ನಗರದಲ್ಲಿ ಸೈಕಲ್ ಜಾಥಾ ಮಾಡುವ ಮೂಲಕ ಪ್ರತಿಭಟಿಸಲಾಯಿತು. ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ಬಿ ಬಿ ಚಿಮ್ಮನಕಟ್ಟಿ ಅವರು, ಕೆಪಿಸಿಸಿ (ಹಿಂ.ವ.ವಿ) ರಾಜ್ಯ ಕಾರ್ಯದರ್ಶಿಗಳಾದ ಮಹೇಶ ಎಸ್ ಹೊಸಗೌಡ್ರ ,ಬಾದಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಡಿ ಯಲಿಗಾರ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಮ್ ಜಿ ಕಿತ್ತಲಿ, ಕಾಳಿದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಭೀಮಸೇನ ಚಿಮ್ಮನಕಟ್ಟಿ ,ಪುರಸಭೆ ಅಧ್ಯಕ್ಷರಾದ ಮಂಜುನಾಥ ಹೊಸಮನಿ ..ಪುರಸಭೆ ಉಪಾಧ್ಯಕ್ಷೆ ಶ್ರೀಮತಿ ರಾಮವ್ವ ಮಾದರ ಹಾಗೂ ಮುಖಂಡರು ಸೈಕಲ್ ಜಾಥಾ ಮಾಡುವ ಮೂಲಕ ಪ್ರತಿಭಟಿಸುತ್ತಾ ತಾಲೂಕಾ ದಂಡಾಧಿಕಾರಿಗಳಾದ ಸುಹಾಸ ಇಂಗಳೆ ಅವರಿಗೆ ಮನವಿ ನೀಡಲಾಯಿತು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: