April 16, 2025

Bhavana Tv

Its Your Channel

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬಾದಾಮಿಗೆ ಆಗಮನ.

ಬಾದಾಮಿ: ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಹಾಗೇ ಬಾದಾಮಿ ಹಾಲಿ ಶಾಸಕ ಸಿದ್ದರಾಮಯ್ಯನವರು ಎರಡು ದಿನಗಳ ಭೇಟಿಗಾಗಿ ಇಂದು ಬಾದಾಮಿಗೆ ಆಗಮಿಸಿದ್ದಾರೆ. ಕುಳಗೇರಿ ಕ್ರಾಸ್‌ಗೆ ಬಂದಿಳಿದ, ಕಾರ್ಯಕರ್ತರ ಹಾಗೂ ಮುಖಂಡರು ಕರೆಯುವ ಹಾಗೆ ಬಾದಾಮಿ ಭಾಗ್ಯ ವಿದಾ ತ ರೆಂದೆ ಕರೆಯಿಸಿಕೊಳ್ಳುವ ಸಿದ್ದರಾಮಯ್ಯನವರನ್ನು ಪುಷ್ಪಗಳ ಸುರಿಮಳೆ ಗೈದು ಬಾದಾಮಿಗೆ ಸ್ವಾಗತಿಸಿದ ಕಾರ್ಯಕರ್ತರ ಹಾಗೂ ಮುಖಂಡರ ಉತ್ಸಾಹ ಹಿಂದೆAದೂ ಕಾಣದ ಉತ್ಸಾಹ ಈ ಸಲದ ಭೇಟಿಯ ವಿಶೇಷ ಎನ್ನಬಹುದು. ಚೋಳಚ ಗುಡ್ಡ ಗ್ರಾಮದ ಉತ್ಸಾಹಿ ಕಾಂಗ್ರೆಸ್ ಕಾರ್ಯಕರ್ತರು ಹೂ ಗಳ ರಾಶಿಗಳ ಏರ್ಪಾಡು ಮಾಡಿರುವುದು ವಿಶೇಷ ಎನ್ನಬಹುದು. ಹರ್ಷೋದ್ಗಾರದೊಂದಿಗೆ ತಮ್ಮ ನಾಯಕನನ್ನು ಬರಮಾಡಿಕೊಂಡರು. ಸಿದ್ದರಾಮಯ್ಯನವರು ೩ ಗಂಟೆಗೆ ತಾಲೂಕಾ ಕೆ.ಡಿ.ಪಿ. ಸಭೆ ತೆಗೆದುಕೊಂಡು ತಾಲೂಕಾ ಅಧಿಕಾರಿಗಳಿಂದ ಸಮಗ್ರ ವಿವರಣೆ ತೆಗೆದುಕೊಂಡು ತಾಲೂಕಿನ ಅಭಿವೃದ್ದಿ ಹಾಗೂ ಕುಂದುಕೊರತೆಗಳನ್ನು ಸಭೆಯಲ್ಲಿ ಚರ್ಚಿಸಿದರು.ಇಂದು ಬಾದಾಮಿಯಲ್ಲಿ ವಾಸ್ತವ್ಯ ಹೂಡುವ ಸಿದ್ದರಾಮಯ್ಯನವರು ನಾಳೆಯ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಸಂಜೆ ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರಿಗೆ ತೆರಳುವರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: