December 20, 2024

Bhavana Tv

Its Your Channel

ಕೆಂದೂರ ಕೆರೆಗೆ ಯುವ ಮುಖಂಡರಾದ ಹೊಳಬಸು ಶೆಟ್ಟರ ಹಾಗೂ ಮುಚಖಂಡಯ್ಯ ಹಂಗರಗಿರವರು ಭೇಟಿ ನೀಡಿ ಪ್ರಾಯೋಗಿಕ ನೀರು ತುಂಬಿಸುವ ಪ್ರಕ್ರಿಯೆ ವೀಕ್ಷಣೆ

ಬಾದಾಮಿ: ವಿರೋಧ ಪಕ್ಷದ ನಾಯಕರು, ಬಾದಾಮಿ ಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯ ರವರ ಮಾರ್ಗದರ್ಶನದಲ್ಲಿ ಇಂದು ಕೆಂದೂರ ಕೆರೆಗೆ ಯುವ ಮುಖಂಡರಾದ ಹೊಳಬಸು ಶೆಟ್ಟರ ಹಾಗೂ ಮುಚಖಂಡಯ್ಯ ಹಂಗರಗಿ ರವರು ಬೇಟಿ ನೀಡಿ ಪ್ರಾಯೋಗಿಕ ನೀರು ತುಂಬಿಸುವ ಪ್ರಕ್ರಿಯೆ ವೀಕ್ಷಿಸಿದರು.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಪುರಾತನ ಕೆರೆಯಾಗಿರುವ ಕೆಂದೂರ ಕೆರೆಗೆ ಮಲಪ್ರಭಾ ನದಿಯಿಂದ ಕೆರೆ ತುಂಬಿಸುವ ಯೋಜನೆಯನ್ನು ಬಾದಾಮಿ ಮತಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯ ರವರ ಕನಸಿನ ಯೋಜನೆ ನನಸಾಗಲಿದೆ. ಇಂದು ಪ್ರಾಯೋಗಿಕವಾಗಿ ಪರೀಕ್ಷೆ ಮಾಡಿದ್ದು ಇಷ್ಟರಲ್ಲಿಯೇ ಮಾನ್ಯ ಶಾಸಕರೂ ಬಂದು ಉದ್ಘಾಟನೆ ಮಾಡಲಿದ್ದಾರೆ ಎಂದು ಹೊಳಬಸು ಶೆಟ್ಟರ ತಿಳಿಸಿದರು ..
ಇದೇ ಸಂದರ್ಭದಲ್ಲಿ ನಂದಿಕೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷ ಮಡ್ಡಿ, ಬಸಲಿಂಗಯ್ಯ ಹಿರೇಮಠ, ಶಿವಪ್ಪ ಹನಮಸಾಗರ, ಗುರುನಾಥ ಹುದ್ದಾರ,ಮಹಾದೇವಪ್ಪ ನಿಲುಗಲ್ಲ,ಶಿವಪುತ್ರಪ್ಪ ಕೆಂಪಾರ, ಭೀಮಶಿ ಮಾದರ,ಸಿದ್ದು ಗೌಡರ,ಮಳಿಯಪ್ಪ ಬಜನ್ನವರ,ಚನ್ನಪ್ಪ ಕಮತಗಿ,ಪರಪ್ಪ ಕಂಠಿ,ಗುರಯ್ಯ ಜಡ್ರಾಮಕುಂಟಿ,ಕೆಲೂಡೆಪ್ಪ ಆಡಗಲ್ಲ,ಬಸವರಾಜ ಗಾಡಗೂಳಿ,ಮಾಗುಂಡಪ್ಪ ಮೆಣಸಗಿ, ವಿಠ್ಠಲ ಬಂಡರಗಲ್ಲ ,ಮಾಗುಂಡಪ್ಪ ಮೆಣಸಗಿ ಇತರ ಮುಖಂಡರು ಹಾಜರಿದ್ದರು.

ವರದಿ:- ರಾಜೇಶ್. ಎಸ್. ದೇಸಾಯಿ ಬಾದಾಮಿ

error: