December 20, 2024

Bhavana Tv

Its Your Channel

ಸಿಡಿಲು ಬಡಿದು ಮೃತನಾದ ಯುವಕನ ಕುಟುಂಬಕ್ಕೆ ಹದಿನೈದು ಸಾವಿರ ರೂಪಾಯಿ ನೀಡಿದ ಹೊಳಬಸು ಶೆಟ್ಟರ

ಬಾದಾಮಿ:- ವಿರೋಧ ಪಕ್ಷದ ನಾಯಕರು, ಬಾದಾಮಿ ಮತಕ್ಷೇತ್ರದ ಶಾಸಕರಾದ ಶ್ರೀ ಸಿದ್ದರಾಮಯ್ಯ ರವರ ಮಾರ್ಗದರ್ಶನದಲ್ಲಿ ಬಾದಾಮಿ ತಾಲೂಕಿನ ಮುಷ್ಟಿಗೇರಿ ಗ್ರಾಮದಲ್ಲಿ ಇತ್ತೀಚೆಗೆ ಸಿಡಿಲು ಬಡಿದು ಪಿ.ಯು.ಸಿ ವ್ಯಾಸಂಗ ಮಾಡು ತ್ತಿದ್ದ ವಿದ್ಯಾರ್ಥಿಯಾದ ಮಹೇಶ ದ್ಯಾಮಣ್ಣ. ಜುಂಜನಗೌಡರ ಮರಣಹೊಂದಿದ್ದರು. ವಿಷಯ ತಿಳಿದ ಯುವ ಮುಖಂಡರಾದ ಶ್ರೀ ಹೊಳಬಸು ಶೆಟ್ಟರ ರವರು ಮೃತರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು. ಸಿದ್ದರಾಮಯ್ಯರವರ ವತಿಯಿಂದ ಮೃತ ಹುಡುಗನ ಕುಟುಂಬದವರಿಗೆ ಹದಿನೈದು ಸಾವಿರ ರೂಪಾಯಿಗಳನ್ನು ನೀಡಿದರು ಹಾಗೂ ಮಾನ್ಯ ಶ್ರೀ ಸಿದ್ದರಾಮಯ್ಯ ರೊಂದಿಗೆ ಅಲ್ಲಿಯೇ ದೂರವಾಣಿ ಮೂಲಕ ಮಾತನಾಡಿ ಜಿಲ್ಲಾಧಿಕಾರಿಗಳು ಬಾಗಲಕೋಟೆ ರವರಿಗೆ ಕೂಡಲೇ ಪರಿಹಾರಧನ ನೀಡಲು ಸಿದ್ದರಾಮಯ್ಯ ರವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಮ್.ಬಿ.ಹಂಗರಗಿ , ಪಿ.ಆರ್.ಗೌಡರ,ರಾಜಮಹ್ಮದ ಬಾಗವಾನ, ಶಿವು ಕೊನೇರಿ, ಕಲ್ಯಾಣಪ್ಪ ದ್ಯಾವಪ್ಪ ಶಿರಗುಂಪಿ,ಯಲ್ಲಪ್ಪ ಬಸಪ್ಪ ಅಮೆತಪ್ಪನವರ,ಹನಮಂತ ಶಿದ್ದನ್ನವರ,ಅಯ್ಯಪ್ಪ ರಡ್ಡೇರ,ಯಲ್ಲಪ್ಪ ಕುರಿ,ಮಹೇಶ ಕರಡಿಗುಡ್ಡ,ದ್ಯಾವಪ್ಪ ನಿಂಬಣ್ಣವರ,ದಯಾನAದ ಕೊನೇರಿ,ರಾಬರ್ಟ್ ತಳವಾರ, ಇತರರು ಹಾಜರಿದ್ದರು.

ವರದಿ:- ರಾಜೇಶ್.ಎಸ್. ದೇಸಾಯಿ ಬಾದಾಮಿ

error: