April 17, 2025

Bhavana Tv

Its Your Channel

ಬಾದಾಮಿ ಬನಶಂಕರಿಯ ಅಂಗನವಾಡಿ ಶಾಲೆ ಪ್ರಾರಂಭದ ನಿಮಿತ್ತ ಮಕ್ಕಳಿಗೆ ಭವ್ಯ ಸ್ವಾಗತ

ಬಾದಾಮಿ ತಾಲೂಕಿನ ಸುಕ್ಷೇತ್ರ ಬನಶಂಕರಿಯ ಅಂಗನವಾಡಿ ಶಾಲೆ ಪ್ರಾರಂಭ ದ ನಿಮಿತ್ತ ಮಕ್ಕಳನ್ನು ಭವ್ಯವಾಗಿ ಸ್ವಾಗತಿಸಲಾಯಿತು.

ಕರೋನಾ ಮಹಾಮಾರಿ ಇಂದ ಜಗತ್ತೇ ತಲ್ಲಣಗೊಂದು ಇದೀಗ ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿದೆ, ಹಾಗೆಯೇ ಅಂಗನವಾಡಿ ಶಾಲೆಗಳನ್ನು ಸರಕಾರ ಕೂಲಂಕುಷ ವಿಚಾರಣೆ ಮಾಡಿ ಸೋಮವಾರ ರಾಜ್ಯದ ಅಂಗನವಾಡಿ ಶಾಲೆಗಳನ್ನು ಪ್ರಾರಂಭಿಸಲು ಅನುಮತಿಸಿದ್ದು ಸೋಮವಾರ ಅಂಗನವಾಡಿ ಶಾಲೆಗಳು ಪ್ರಾರಂಭವಾದ ಮೊದಲ ದಿನ. ಇದರಂತೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಸುಕ್ಷೇತ್ರ ಬನಶಂಕರಿಯ ಅಂಗನವಾಡಿ ಶಾಲೆಯು ಪ್ರಾರಂಭದ ನಿಮಿತ್ತ ಮಕ್ಕಳ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಂಡು ಶಾಲೆಯನ್ನು ಸಿಂಗರಿಸಿ ಚಿಣ್ಣರ ಚಿತ್ರಗಳ ರಂಗೋಲಿ ಬಿಡಿಸಿ ಬಣ್ಣ ಬಣ್ಣದ ಬಲೂನು ಗಳ ಹಾರಾಟ ದ ಜೊತೆಗೆ ಸಿದ್ಧವಾಗಿಸಿದರು

ಇದೇ ಸಂದರ್ಭದಲ್ಲಿ ಚೊಳಚಾಗುಡ್ ಗ್ರಾಮ ಪಂಚಾಯತ ಅಧ್ಯಕ್ಷೆ ರೇಖಾ ಹಂಪಿಹೊಳಿಮಠ ಅಂಗನವಾಡಿ ಶಾಲಾ ಮಕ್ಕಳಿಗೆ ಪುಷ್ಪ ಗಳನ್ನು ವಿತರಿಸಿ ಚಾಕಲೇಟ್ ಕೊಟ್ಟು ಶಾಲೆಗೆ ಬರಮಾಡಿಕೊಂಡರು.ಮಕ್ಕಳು ಹರುಷದಿಂದ ಶಾಲೆಗೆ ಹಾಜರಾದರು. ಪಂಚಾಯತ್ ಸದಸ್ಯರುಗಳು ಹಾಗೂ ಅಂಗನವಾಡಿ ಶಿಕ್ಷಕಿ ಯಾರು ಹಾಗೂ ಸಹಾಯಕಿಯರು ಶಾಲಾ ಮಕ್ಕಳ ಪೋಷಕರು ಕೂಡ ಶಾಲಾ ಪ್ರಾರಂಭೋತ್ಸವ ದಾಲ್ಲಿ ಉಪಸ್ಥಿತರಿದ್ದರು.

ವರದಿ:- ರಾಜೇಶ್. ಎಸ್. ದೇಸಾಯಿ ಬಾದಾಮಿ

error: