April 17, 2025

Bhavana Tv

Its Your Channel

ಎನ್. ಸಿ. ಡಿ. ಘಟಕದಿಂದ ವಿಶ್ವ ಮಧುಮೇಹ ಸಪ್ತಾಹ

ಬಾಗಲಕೋಟೆ ಜಿಲ್ಲೆಯ ಬಾದಾಮಿಯ ತಾಲೂಕಾ ಆಸ್ಪತ್ರೆಯಲ್ಲಿ ಎನ್. ಸಿ. ಡಿ.ಘಟಕದಿಂದ ವಿಶ್ವ ಮಧುಮೇಹ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣ ಕಛೇರಿ ಹಾಗೂ ಜಿಲ್ಲಾ ಎನ್. ಸಿ. ಡಿ.ಕೋಶ ಬಾಗಲಕೋಟೆ, ಬಾದಾಮಿಯ ಎನ್. ಸಿ. ಡಿ.ಘಟಕ ಬಾದಾಮಿಯ ತಾಲೂಕಾ ಆಸ್ಪತ್ರೆಯಲ್ಲಿ ದಿನಾಂಕ ರಾಷ್ಟ್ರೀಯ ಕ್ಯಾನ್ಸರ್, ಮಧುಮೇಹ, ಹೃದಯ ರಕ್ತನಾಳಗಳಿಗೆ ಸಂಭAದಿಸಿದ ಹಾಗೂ ಪಾರ್ಶ್ವವಾಯು ರೋಗಗಳ ತಡೆಯುವಿಕೆ ಮತ್ತು ನಿಯಂತ್ರಣ (ಎನ್. ಪಿ. ಸಿ. ಡಿ. ಸಿ. ಎಸ್) ಕಾರ್ಯಕ್ರಮದಡಿಯಲ್ಲಿ ವಿಶ್ವ ಮಧುಮೇಹ ತಪಾಸಣಾ ಸಪ್ತಾಹವನ್ನು ದಿನಾಂಕ ೧೪/೧೧೨೦೨೧ ರಿಂದ ೨೦/೧೧/೨೦೨೧ ರ ವರೆಗೆ ಹಮ್ಮಿಕೊಳ್ಳ ಲಾಗಿತ್ತು.
ಇದರ ಪ್ರಯುಕ್ತ ಶುಕ್ರವಾರ ಸೈಕಲ್ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಾರ್ವಜನಿಕರಿಗೆ ಮಧುಮೇಹ ತಪಾಸಣೆ ಹಾಗೂ ಅಧಿಕ ರಕ್ತದೊತ್ತಡ ದ ಬಗ್ಗೆ ಮಾಹಿತಿ ನೀಡಲಾಯಿತು. ಮುಖ್ಯ ವೈದ್ಯಾಧಿಕಾರಿ ಮಾತನಾಡಿ ಜನರು ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ವಿವರಣೆ ನೀಡಿದರು. ಮತ್ತೋರ್ವ ವೈ.ಪ್ರಾ.ಅಧಿಕಾರಿ ಗಂಗಾಧರ ಫಿರಂಗಿ ಮಾತನಾಡಿ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ದ ಬಗ್ಗೆ ಸಂಪೂರ್ಣ ವಿವರಣೆ ನೀಡಿದರು,ಕಾರ್ಯಕ್ರಮವನ್ನು ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಅಂಬಿಗೇರ ನಿರೂಪಿಸಿ ಜಾಥಾದ ಬಗ್ಗೆ ಸಪ್ತಾಹದ ಬಗ್ಗೆ ಮಾತನಾಡಿದರು. ಹಾಗೂ ಆಪ್ತ ಸಮಾಲೋಚಕ ರಾದ ಸ್ನೇಹಾ ನಾಯ್ಕರ ಮಾತನಾಡಿ ಸಪ್ತಾಹದ ಉದ್ದೇಶ ಹಾಗೂ ಜನರು ಅದರ ಬಗ್ಗೆ ಹೇಗೆ ಜಾಗೃತಿ ಯಿಂದ ಇರಬೇಕು ಎನ್ನುವುದರ ಬಗ್ಗೆ ಸಪೂರ್ಣ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಕಲಾದಗಿ ತಾಲೂಕಾ ಪಂಚಾಯತ್ ಇ. ಓ. ಮತ್ತು ಡಾ! ರೇವಣಸಿದ್ದಪ್ಪ.ಃ.ಊ. ತಾಲೂಕಾ ಮುಖ್ಯ ವೈದ್ಯಾಧಿಕಾರಿಗಳು, ಡಾ! ಜಯಂತ್, ಡಾ! ಶೆಟ್ಟರ್ ಗಂಗಾಧರ ಫಿರಂಗಿ ವೈ. ಪ್ರಾ. ತಂತ್ರಜ್ಞ ಅಧಿಕಾರಿ, ಎಸ್. ಎನ್. ಶಿರಹಟ್ಟಿ ಡಿ. ಇ. ಓ. ಹಾಗೂ ಸ್ನೇಹಾ ನಾಯ್ಕರ ಆಪ್ರಸಮಾಲೋಚಕರು, ವಿಶಾಲಾಕ್ಷಿ ರಂಜನಗಿ, ಶುಶ್ರೂಷ ಅಧಿಕಾರಿ, ಆರ್. ಬಿ. ಹೊತ್ತಗಿಗೌಡರ ಹಾಗೂ ಕೆ.ಎಚ್. ಪಿ. ಟಿ. ಸಿ ಸಿಬ್ಬಂದಿ ಮತ್ತು ಟಿ. ಬಿ. ವಿಭಾಗದ ಸಿಬ್ಬಂದಿವರ್ಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವರದಿ:- ರಾಜೇಶ್. ಎಸ್. ದೇಸಾಯಿ ಬಾದಾಮಿ

error: