ಬಾದಾಮಿ: ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಬಾದಾಮಿ ಶಾಸಕ ಸಿದ್ದರಾಮಯ್ಯ ನವರು ಶುಕ್ರವಾರ ಬಾದಾಮಿಯಲ್ಲಿ ಮತದಾನ ಮಾಡಿದರು.
ಕಿಕ್ಕಿರಿದ ಜನಸಾಗರದ ನಡುವೆ ,ಬೈಕ್ ರಾಲಿ ಮಾಡುತ್ತಾ ಮುಂದಿನ ಮುಖ್ಯಮಂತ್ರಿ ಹಾಗೂ ಬಾದಾಮಿ ಕ್ಷೇತ್ರದಲ್ಲಿ ಯೆ ಸ್ಪರ್ಧಿಸುತ್ತಾರೆ ಎಂದು ನಾಮ ಫಲಕಗಳನ್ನು ಹಿಡಿದು ಜನಸಾಗರವೇ ಹರಿದು ಬಂದಿತು.
ಬಾದಾಮಿ ನಗರದ ಪುರಸಭೆಯಲ್ಲಿ ಸಿದ್ದರಾಮಯ್ಯ ಮತ ಚಲಾವಣೆ ಮಾಡಿ ಮಾಧ್ಯಮದೊಂದಿಗೆ ಮಾತನಾಡಿ ಎಲ್ಲ್ಲಾ ಕ್ಷೇತ್ರ ಬಿಟ್ಟು ನಾನು ಇಂದು ಬಾದಾಮಿಯಲ್ಲಿ ಮತ ಹಾಕಲು ಬಂದಿದ್ದೇನೆ. ನಮ್ಮ ಅಭ್ಯರ್ಥಿ ಸುನೀಲ ಗೌಡ ಪಾಟೀಲ ಆರಿಸಿ ಬರುತ್ತಾರೆ ಎಂದು ಭರವಸೆಯ ಮಾತುಗಳನ್ನು ಹೇಳಿದರು.
ಜನರ ಊಹಾಪೋಹಗಳಿಗೆ ನಾನು ಏನು ಹೇಳಲಾರೆ ಚುನಾವಣೆ ಇನ್ನೂ ದೂರ ಇದೆ ನನಗೆ ಸುಮಾರು ಹದಿನೈದು ಮತಕ್ಷೇತ್ರದಲ್ಲಿ ನಿಲ್ಲಲು ನನಗೆ ಬರಮಾಡಿಕೊಳ್ಳುತ್ತಾರೆ ಅದರ ಬಗ್ಗೆ ಈಗ ಮಾತನಾಡೋದು ಬೇಡ ಅದಕ್ಕೆ ಇನ್ನೂ ತುಂಬಾ ಸಮಯ ಇದೆ ಎಂದು ಮಾತನ್ನು ಮೊಟಕುಗೊಳಿಸಿದರು. ಸರಕಾರಿ ವೈದ್ಯ ಕೀಯ ಕಾಲೇಜು ಅನುಮತಿ ನೀಡಿದ್ದರು ಸರಕಾರ ಅದಕ್ಕೆ ವಿಳಂಬ ಮಾಡುತ್ತಿದೆ ಸರಕಾರದಲ್ಲಿ ಅನುದಾನದ ಕೊರತೆ ಇದೆ ಎನ್ನುವುದು ನೆಪ ಮಾಡಿಕೊಂಡಿದ್ದಾರೆ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಇದೆ ಸಂದರ್ಭದಲ್ಲಿ ಮುಖಂಡರಾದ ಹೊಳಬಸು ಶೆಟ್ಟರ್, ವಾಸುರಾಜ್ ಭಾವಿ ,ಮಹೇಶ್ ಹೊಸಗೌಡರ್,ಆರ್. ಎಫ.ಬಾಗವಾನ,ಮಂಜು ಹೊಸಮನಿ,ಇನ್ನೂ ಮುಂತಾದ ಮುಖಂಡರು ಜೊತೆಗಿದ್ದರು.
ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ
More Stories
ಏ.೨೨ ಕ್ಕೆ ಹಳಗೇರಿ- ಉಗಲವಾಟ ದಲ್ಲಿ ಬೃಹತ್ ಕಾರ್ಯಕ್ರಮ
2021-2022 ನೇ ಸಾಲಿನ ಏಳನೇ ವರ್ಗದ ವಿದ್ಯಾರ್ಥಿಗಳನ್ನು ಬೀಳ್ಕೊಡುಗೆ ಕಾರ್ಯಕ್ರಮ
ದಾಹ ತಣಿಸುವ ಆರವಟಿಗೆ ಆರಂಭಿಸಿ ಜನರ ಮೆಚ್ಚುಗೆಗೆ ಪಾತ್ರವಾದ ಯುವಾ ಬ್ರಿಗೇಡ್ ಘಟಕ