December 21, 2024

Bhavana Tv

Its Your Channel

ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ

ಬಾದಾಮಿ ತಾಲೂಕಿನ ಆಡಗಲ್‌ನ ಸರಕಾರಿ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಆಚರಿಸಲಾಯಿತು.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಅಡಗಲ್‌ನ ಸರಕಾರಿ ಪ್ರೌಢ ಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದೊಂದಿಗೆ ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಹದಿಹರೆಯದವರ ಆರೋಗ್ಯ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ಹದಿಹರೆಯದ ವರ ಆರೋಗ್ಯ ಸ್ವಾಸ್ತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾಸ್ತಾವಿಕ ವಾಗೀ ಮಾತನಾಡಿದ ಆಪ್ತ ಸಮಾಲೋಚಕ ರಾದ ಶಾಂತಾ ನಾಶಿ ಮಾತನಾಡಿ ಹದಿಹರೆಯದವರ ಆರೋಗ್ಯ ವ್ಯವಸ್ಥೆ ಹಾಗೂ ನಿರ್ವಹಣೆ ಬಗ್ಗೆ ಮತ್ತು ಅಪೌಷ್ಠಿಕ ಕೊರತೆಯಾಗಿ ರಕ್ತಹೀನತೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಹಾಗೆಯೇ ಸ್ನೇಹಾ ಕ್ಲಿನಿಕ್ ಬಗ್ಗೆ ಮಾತನಾಡಿ ಹದಿಹರೆಯದವರ ಆರೋಗ್ಯ ಹಾಗೂ ಸರ್ವತೋಮುಖ ಬೆಳವಣಿಗೆಗೆ ಉದ್ದೇಶದಿಂದ ಎಲ್ಲಾ ಜಿಲ್ಲಾ ಆಸ್ಪತ್ರೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹದಿಹರೆಯದ ವರಿಗಾಗಿಯೆ ಸ್ನೇಹಾ ಕ್ಲಿನಿಕ್ ತೆರೆದಿದೆ,ಹಾಗೆಯೇ ಸ್ನೇಹಾ ಕ್ಲಿನಿಕ್ ಗಳಲ್ಲಿ ಹದಿಹರೆಯದ ವರ ರಕ್ತಹೀನತೆಯನ್ನು ತಡೆಗಟ್ಟುವ ಉದ್ದೇಶದಿಂದ ವಾರಕ್ಕೊಂದರAತೆ ಪ್ರತಿ ಸೋಮವಾರ ಕಬ್ಬಿನಾಂಶವಿರುವ ಮಾತ್ರೆಗಳನ್ನು ನೀಡಲಾಗುತ್ತಿದೆ ಎಂದರು. ಹಾಗೆ ಸ್ನೇಹಾ ಕ್ಲಿನಿಕ್ ನಲ್ಲಿನ ಲಭ್ಯವಿರುವ ಸೇವೆಗಳ ಬಗ್ಗೆ ವಿವರಣೆ ನೀಡಿದರು.ನಂತರ ಮುಖ್ಯ ಉಪಾಧ್ಯಾಯರಾದ ಐ.ಎಂ.ಇಳಕಲ್ ಮಾತನಾಡಿ ವಿದ್ಯಾರ್ಥಿಗಳಿಗೆ ಆರೋಗ್ಯದ ಶುಚಿತ್ವದ ಬಗ್ಗೆ ತಿಳಿ ಹೇಳಿದರು.
ಇದೇ ಸಂದರ್ಭದಲ್ಲಿ ಶಾಲಾ ಮುಖ್ಯ ಉಪಾಧ್ಯಾಯ ರಾದ ಐ.ಎಂ.ಇಳಕಲ್,ವಿಶಾಲ್ ದೇಶಪಾಂಡೆ,ಸಹಶಿಕ್ಷಕಿಯರಾದ ಆರ್.ಎಂ.ರಜಪೂತ, ಹಾಗೂ ಶ್ರೀಮತಿ ಸಾವಿತ್ರಿ ಈಳಗೇರ
ತಾಲೂಕಾ ಸಂಯೋಜಕರು ಗ್ರಾಮ ಪಂಚಾಯತ ಆರೋಗ್ಯ ಅಮೃತ ಅಭಿಯಾನ, ಹಾಗೂ ಆಪ್ತಸಮಾಲೋಚಕರಾದ ಶಾಂತಾ ನಾಶಿ ಉಪಸ್ಥಿತರಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: