December 21, 2024

Bhavana Tv

Its Your Channel

ಬಾದಾಮಿಯ ತಾಲೂಕಾ ಆಸ್ಪತ್ರೆಯಲ್ಲಿ ಕ್ಷಯ ರೋಗಿಗಳಿಗಾಗಿ ಆರೈಕೆ ಮತ್ತು ಬೆಂಬಲ ಸಭೆ

ಬಾಗಲಕೋಟೆ ಜಿಲ್ಲೆಯ ಬಾದಾಮಿಯ ತಾಲೂಕಾ ಆಸ್ಪತ್ರೆಯಲ್ಲಿ ಕ್ಷಯ ರೋಗಿಗಳಿಗೆ ಆರೈಕೆ ಮತ್ತು ಬೆಂಬಲ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಹೊಸಬೆಳಕು ಎನ್.ಜಿ. ಓ.ಸಂಸ್ಥೆಯವರು ಸುಮಾರು 25 ಜನ ಕ್ಷಯ ರೋಗಿಗಳಿಗೆ ನ್ಯೂಟ್ರಿಷನ್ ಪೌಡರ್ ಮತ್ತು ಬಿ.ಕಾಂಪ್ಲೆಕ್ಸ್ ಸಿರಪ್ ಅನ್ನು ವಿತರಿಸಿ ಕ್ಷಯ ರೋಗಿಗಳಿಗೆ ಅಳಿಲು ಸೇವೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇದೇ ಸಂದರ್ಭದಲ್ಲಿ ತಾಲೂಕಾ ಮುಖ್ಯ ವೈದ್ಯಾಧಿಕಾರಿ ಕ್ಷಯ ರೋಗದ ಬಗ್ಗೆ ವಿವರಣೆ ನೀಡಿ ಚಿಕಿತ್ಸೆಯ ಪಡೆದುಕೊಳ್ಳುವುದರ ವಿವರವನ್ನು ಕೂಡ ನೀಡಿದರು.
ಈ ಕಾರ್ಯಾಗಾರದಲ್ಲಿ ತಾಲೂಕಾ ಮುಖ್ಯ ವೈದ್ಯಾಧಿಕಾರಿ ಡಾ!!ರೇವಣಸಿದ್ದಪ್ಪ,, ಎಸ್.ಎಸ್.ಅಂಬಿಗೇರ,, ಎಸ್. ಟಿ.ಎಲ್.ಎಸ್.ರಾಜೇಶ್ವರಿ, ಟಿ. ಬಿ.ಎಚ. ವಿ. ವಿನೋದ ಹೊಸೂರ,, ಕೆ.ಎಚ. ಪಿ. ಟಿ. ಭುವನೇಶ್ವರಿ ಕುಲಕರ್ಣಿ,,ಸಾವಿತ್ರಿ ಈಳಗೇರ,,ಹೊಸಬೆಳಕು ಎನ್.ಜಿ. ಓ. ಪೌಂಡೇಶನ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ:- ರಾಜೇಶ್.ಎಸ್ ದೇಸಾಯಿ ಬಾದಾಮಿ

error: