ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚೋಳಚಗುಡ್ಡ ದ ಅಂಗನವಾಡಿ ಕೇಂದ್ರ -5 ರಲ್ಲೀ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ಮಾಡಲಾಯಿತು. ಅಂಗನವಾಡಿ ತಾಲೂಕಾ ಮೇಲ್ವಿಚಾರಕಿ ಎಂ. ಬಿ. ಗುನಾರಿ ಮಾತನಾಡಿ ಹೆಣ್ಣು ಮಕ್ಕಳ ಬಗ್ಗೆ ಇರುವ ಕೀಳರಿಮೆ ತೆಗೆದು ಹಾಕಬೇಕು, ಹೆಣ್ಣು ಮಕ್ಕಳು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಗಂಡಿನ ಸರಿಸಮನಾಗಿ ದೊಡ್ಡ ಹುದ್ದೆಗಳಲ್ಲಿಯೂ ಕಾರ್ಯ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ.ಇದಕ್ಕಾಗಿಯೇ ಸರಕಾರ ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಭಾಗ್ಯಲಕ್ಷ್ಮೀ ಎನ್ನುವ ಈ ವಿಶೇಷ ಯೋಜನೆಯನ್ನು ತಂದಿರುವುದು. ಹೆಣ್ಣು ಮಕ್ಕಳು ಆರ್ಥಿಕ ಸ್ವಾವಲಂಬನೆ ಪಡೆದು ಕೊಳ್ಳಬೇಕು ಹೆಣ್ಣು ಮಕ್ಕಳು ಶಿಕ್ಷಣ ಪಡೆದುಕೊಂಡು ಸಬಲರಾಗಬೇಕು ಎನ್ನುವುದು ಸರಕಾರದ ಧ್ಯೇಯವಾಗಿದೆ ಎಂದು ತಿಳಿಸಿದರು.ಹಾಗೆಯೇ ಭಾಗ್ಯಲಕ್ಷ್ಮೀ ಬಾಂಡ್ ಯೋಜನೆಯ ವಿವರಣೆಯನ್ನು ಹಾಗೂ ಭಾಗ್ಯಲಕ್ಷ್ಮಿ ಬಾಂಡ್ ಹೇಗೆ ಕಾಯ್ದುಕೊಳ್ಳಬೇಕು ಎನ್ನುವುದರ ಬಗ್ಗೆಯೂ ಪೋಷಕರಿಗೆ ತಿಳಿಹೇಳಿದರು
ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ವಹಿಸಿ ಆರ್ಥಿಕವಾಗಿ ಸಶಕ್ತವಾಗಿ ಬದುಕಲು ಸರಕಾರ ಈ ಭಾಗ್ಯಲಕ್ಷ್ಮೀ ಅಂತಹ ವಿಶೇಷ ಯೋಜನೆಯನ್ನ ತಂದಿದೆ. ಹಾಗೆಯೇ ಭಾಗ್ಯಲಕ್ಷ್ಮೀ ಬಾಂಡ್ ನ ನಿರ್ವಹಣೆ ಹಾಗೂ ಅದರ ಸಂಪೂರ್ಣ ವಿವರಣೆಯನ್ನು ಪೋಷಕರಿಗೆ ಮನದಟ್ಟು ಆಗುವ ಹಾಗೆ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ರತ್ನಾ ಬಸಯ್ಯಹಂಪಿಹೊಳಿ ಮಠ, ಹಾಗೂ ಸದಸ್ಯರಾದ ಪ್ರೀತಿ.ಪ್ರಕಾಶ್.ದೇಸಾಯಿ, ಕಮಲವ್ವ ಬಸಪ್ಪ ಗಡ್ಡಿ, ಉಪಸ್ಥಿತರಿದ್ದು ಬಾಂಡ್ ವಿತರಿಸಿದರು.ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಉಪಸ್ಥಿತರಿದ್ದರು.
ವರದಿ:- ರಾಜೇಶ್ ಎಸ್ ದೇಸಾಯಿ ಬಾದಾಮಿ
More Stories
ಏ.೨೨ ಕ್ಕೆ ಹಳಗೇರಿ- ಉಗಲವಾಟ ದಲ್ಲಿ ಬೃಹತ್ ಕಾರ್ಯಕ್ರಮ
2021-2022 ನೇ ಸಾಲಿನ ಏಳನೇ ವರ್ಗದ ವಿದ್ಯಾರ್ಥಿಗಳನ್ನು ಬೀಳ್ಕೊಡುಗೆ ಕಾರ್ಯಕ್ರಮ
ದಾಹ ತಣಿಸುವ ಆರವಟಿಗೆ ಆರಂಭಿಸಿ ಜನರ ಮೆಚ್ಚುಗೆಗೆ ಪಾತ್ರವಾದ ಯುವಾ ಬ್ರಿಗೇಡ್ ಘಟಕ