December 21, 2024

Bhavana Tv

Its Your Channel

ಬಾದಾಮಿಯ ಶಕ್ತಿ ದೇವತೆ ಶ್ರೀ ಬನಶಂಕರಿ ದೇವಿಯ ದರ್ಶನ ಪಡೆದ ಪೂಜಾ ಗಾಂಧಿ ಕುಟುಂಬ.

ಬಾದಾಮಿ ; ನಿನ್ನೆಯಷ್ಟೇ ಮಳೆ ಹುಡುಗಿ ಪೂಜಾ ಗಾಂಧಿ ಕುಟುಂಬ ಬಾದಾಮಿಯ ಸುಕ್ಷೇತ್ರ ಬನಶಂಕರಿ ದೇವಿಯ ದರ್ಶನ ಪಡೆದು ನಂತರ ಕೋಟೆ ಕಲ್ಲನ ಹೊಳೆ ಹುಚ್ಛೇಶ್ವರ ಜಾತ್ರೆಯ ನಾಟಕ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ನಂತರ ಬಾದಾಮಿಯ ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ವೀಕ್ಷಿಸಿದರು. ನಂತರ ಹೆರಿಟೇಜ್ ರೆಸಾರ್ಟ್ಗೆ ಆಗಮಿಸಿದರು.


ಜಾತ್ಯಾತೀತ ಜನತಾದಳದ ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಹಣಮಂತ ಮಾವಿನಮರದ ಆಗಮಿಸಿ ಜೆಡಿಎಸ್‌ನ ಮುಖಂಡರು ಚಲನಚಿತ್ರ ನಟಿ ಪೂಜಾ ಗಾಂಧಿ ಅವರನ್ನು ಸನ್ಮಾನ ಮಾಡಿ ಬಾದಾಮಿಗೆ ಆಗಮಿಸಿದ್ದನ್ನೂ ಹರ್ಷ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಹಣಮಂತ ಮಾವಿನಮರದ ಹಾಗೂ ತಾಲೂಕಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ:- ರಾಜೇಶ್.ಎಸ್ ದೇಸಾಯಿ ಬಾದಾಮಿ

error: