ಕೊರೊನಾ ಲಾಕ್‌ಡೌನ್‌ನಿಂದಾಗಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ವಿಶೇಷ ವಿಮಾನಗಳಲ್ಲಿ ಕರೆತರಲು ಭಾರತ ಸರ್ಕಾರ ಇಂದಿನಿoದ ಕಾರ್ಯಾಚರಣೆ ಆರಂಭಿಸಿದೆ.ಇAದು ಮಧ್ಯರಾತ್ರಿ ಭಾರತೀಯರು ಸ್ವದೇಶಕ್ಕೆ ಆಗಮಿಸುವ ನಿರೀಕ್ಷೆ ಇರುವುದರಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್ ತಪಾಸಣೆಗೆ ಹಾಗೂ ಕ್ವಾರಂಟೈನ್‌ಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ.ಅಮೆರಿಕ, ಇಂಗ್ಲೆoಡ್ ಸೇರಿದಂತೆ ೧೩ ದೇಶಗಳಿಂದ ಭಾರತೀಯರು ಆಗಮಿಸಲಿದ್ದಾರೆ.ಸುಮಾರು ೭೦೦ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಆಗಮಿಸುವ ಸಾಧ್ಯತೆ ಇದೆ. ಕೆಐಎಎಲ್ ನಲ್ಲಿ ಪ್ರಯಾಣಿಕರಿಗೆ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ.ಕೆಐಎಎಲ್ ನಲ್ಲಿ ಕೊರೊನಾ ಶಂಕೆ ಕಂಡು ಬಂದ್ರೆ ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇನ್ನೂ ಉಳಿದ ಪ್ರಯಾಣಿಕರನ್ನು ನಗರದ ಕ್ವಾರೆಂಟೈನ್ ಸೆಂಟರ್‌ಗಳಿಗೆ ರವಾನೆ ಮಾಡಲಾಗುತ್ತದೆ.ಈಗಾಗಲೇ ಕ್ವಾರೆಂಟೈನ್‌ಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ರಾಜ್ಯ ಸರ್ಕಾರ. ಹೋಟೆಲ್, ವಸತಿ ಶಾಲೆಗಳಲ್ಲಿ, ಕಲ್ಯಾಣ ಮಂಟಪ, ಖಾಸಗಿ/ಸರ್ಕಾರಿ ಆಸ್ಪತ್ರೆಗಳನ್ನು ಕ್ವಾರೆಂಟೈನ್ ಸೆಂಟರ್ ಗಳಾಗಿ ಮಾರ್ಪಾಡು ಮಾಡಲಾಗಿದೆ ಎಂದು ತಿಳಿಸಿದ್ದಾರೆ
More Stories
ಶರಾವತಿಯ ನದಿ ತಿರುವಿನ ಮಾರಕ ಯೋಜನೆ
ಸಾಹಿತಿ ಶಿಕ್ಷಕಿ ಜಯಶ್ರೀ ರಾಜು ರವರಿಗೆ ಉಮಾಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿ ಭಾಜನ
ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್:ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ