ಬೆಂಗಳೂರು: ಗ್ರಾಮ ಸಹಾಯಕರನ್ನು ಡಿ ಗ್ರೂಪ್ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರು ಸ್ವಾತಂತ್ರ‍್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಗಮನ ಸೆಳೆಯಲು ಮುಷ್ಕರ ಹಮ್ಮಿಕೊಂಡಿರುವ ಗ್ರಾಮ ಸಹಾಯಕರು ತಾವು ಕಳೆದ -45 ವರ್ಷಗಳಿಂದ ಹಳ್ಳಿಗಳಲ್ಲಿ ಸೇವೆಸಲ್ಲಿಸುತ್ತಿದ್ದರೂ ಸರ್ಕಾರ ಕನಿಷ್ಠ ವೇತನ ನಿಗದಿಪಡಿಸಿಲ್ಲವೆಂದು ದೂರಿದ್ದಾರೆ.
ಹಗಲಿರಳು ಕೆಲಸ ಮಾಡಿದರೂ ಯಾವುದೇ ಸರ್ಕಾರಿ ಸೌಲಭ್ಯಗಳಿಲ್ಲ. ತಮ್ಮನ್ನು ಡಿ ಗ್ರೂಪ್ ನೌಕರರನ್ನಾಗಿ ಪರಿಗಣಿಸಬೇಕೆಂದು ಸಾವಿರಾರು ಪ್ರತಿಭಟನಾ ನಿರತ ನೌಕರರು ಒತ್ತಾಯಿಸಿದ್ದಾರೆ.
ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ರಾಜ್ಯಾದ್ಯಂತ 10,450 ಗ್ರಾಮ ಸಹಾಯಕರು ಸೇವೆ ಸಲ್ಲಿಸುತ್ತಿದ್ದು, 44 ವರ್ಷಗಳಿಂದ ಇಲಾಖೆಯಲ್ಲಿ ಮಾಸಿಕ 100 ರೂ.ಗಳಿಂದ ಗೌರವಧನ ಪಡೆಯುತ್ತಿದ್ದು, ಪ್ರಸ್ತುತ 13 ಸಾವಿರ ರೂ.ನೀಡಲಾಗುತ್ತಿದೆ.
ಇಂದಿನ ದುಬಾರಿ ದಿನಗಳಲ್ಲಿ ಈ ವೇತನವನ್ನು ಪಡೆದು ಜೀವನ ನಿರ್ವಹಣೆ ಮಾಡಲು ಕಷ್ಟಕರವಾಗಿದೆ. ಆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರಿಗೆ ಸೇವಾಭದ್ರತೆ ಒದಗಿಸಬೇಕು, ಡಿ ದರ್ಜೆ ಹುದ್ದೇ ಗೇರಿಸುವಂತೆ ಆಗ್ರಹಿಸಿದರು.
ಜನ ಸಮಾನ್ಯರಿಗೆ ಮಾಹಿತಿಗಳನ್ನು ನೀಡುವುದರ ಜೊತೆಗೆ ಫಲಾನುಭವಿಗಳನ್ನು ಗುರುತಿಸುವ ಹಾಗೂ ರೈತರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸುವ ಹಾಗೂ ಗುರುತಿಸುವ ಮುಖ್ಯ ಪಾತ್ರ ಗ್ರಾಮ ಸಹಾಯಕರದ್ದೇ ಆಗಿರುತ್ತದೆ. ಗ್ರಾಮ ಪಂಚಾಯ್ತಿ ನೌಕರರನ್ನು ಸಹಾ ಸರ್ಕಾರ ಖಾಂಯಗೊಳಿಸಿದೆ. ಮತ್ತು ಅಟಲ್ ಜಿ ಜನಸ್ನೇಹಿ ಕೇಂದ್ರ: ಡಾ ಆಪರೇಟಿರ್‌ಗಳಿಗೆ ಮಾಸಿಕ ರೂ.23,000/- ಗಳ ವೇತನವನ್ನು ಜಾರಿ ಮಾಡಿರುತ್ತದೆ. ಹಾಗೂ ಗ್ರಂಥಪಾಲಕರಿಗೂ ಸಹಾ ವೇತನ ಸರ್ಕಾರವು ಹೆಚ್ಚಳ: ಮಾಡಿದೆ. ಆದರೆ, ಕಂದಾಯ ಇಲಾಖೆಯಲ್ಲಿ ಕಳೆದ 43 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರನ್ನು ಕನಿಷ್ಠ ವೇತನವಾಗಲಿ ಅಥವಾ ಸೇವಾ ಭದ್ರತೆಯಾಗಲಿ ಸರ್ಕಾರವು ನೀಡಿರುವುದಿಲ್ಲ. ಸರ್ಕಾರವು ಮಾನವೀಯತೆಯ ನೆಲೆಯಲ್ಲಿ ಗ್ರಾಮ ಸಹಾಯಕರುಗಳನ್ನು ಫೆಬ್ರವರಿ17ರ 2023 ರ ಬಜೆಟ್‌ನಲ್ಲಿ ‘ಡಿ’ ದರ್ಜೆ ನೌಕರರನ್ನಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು.
ಬೇಡಿಕೆಗಳು:
1) ಗ್ರಾಮ ಸಹಾಯಕರುಗಳನ್ನು” ಡಿ” ದರ್ಜೆ ನೌಕರರನ್ನಾಗಿ ಪರಿಗಣಿಸಬೇಕು
2) ದಿನಾಂಕ 10-07-2007 ರ ಖಾಯಂ ಆದೇಶದಂತೆ ವೇತನ ಪರಿಷ್ಕರಿಸಿ,ಸೇವಾ ನಿಯಮಾವಳಿ ರೂಪಿಸಬೇಕು
3) ನಿವೃತ್ತಿ ಹೊಂದಿದ ಹಾಗೂ ಹೊಂದುತ್ತಿರುವ ಗ್ರಾಮಸಹಾಯಕರಿಗೆ ರೂ2 ಲಕ್ಷಗಳ ಹಿಡಿಗಂಟನ್ನು ನೀಡಬೇಕು ಹಾಗೂ ಮಾಸಿಕ ವಿಶ್ರಾಂತಿ ವೇತನವನ್ನು ನೀಡಿಬೇಕು
4) ಗ್ರಾಮ ಸಹಾಯರಿಗೆ ಆರೋಗ್ಯ ಚಿಕಿತ್ಸೆ ಸೌಲಭ್ಯವನ್ನು ನೀಡಬೇಕು.
5) ಮಹಿಳಾ ಗ್ರಾಮ ಸಹಾಯಕಿಯರಿಗೆ ಮಾತೃ ರಜೆಯನ್ನು ನೀಡಬೇಕು.
6) ಗ್ರಾಮ ಸಹಾಯಕರು ಚುನಾವಣಾ ಕರ್ತವ್ಯ ನಿರ್ವಹಿಸಲು ಹೆಚ್ಚುವರಿ ಭತ್ತೆ (ಡಿ.ಎ.) ನೀಡಬೇಕು ಎಂದು ಆಗ್ರಹಿಸಿದ್ದಾರೆ
ಈ ಸಂದರ್ಭದಲ್ಲಿ ಗ್ರಾಮ ಸಹಾಯಕರ ರಾಜ್ಯ ಅಧ್ಯಕ್ಷ ಎಚ್.ಎನ್.ದೇವರಾಜು,ಮಾಜಿ ಅಧ್ಯಕ್ಷರಾದ ಮುದ್ದು ಕೃಷ್ಣ,
ಪ್ರಧಾನ ಕಾರ್ಯದರ್ಶಿ ಬಿ.ಶಿವರುದ್ರಪ್ಪ,ಖಜಾಂಚಿ ಶ್ರೀನಿವಾಸ,ಪ್ರಧಾನ ಕಾರ್ಯದರ್ಶಿಯಾದ ರಾಮಾಂಜನಪ್ಪ,ಮಾದಗಿರಿ ದಂಡೋರ ರಾಜ್ಯ ಅಧ್ಯಕ್ಷರಾದ ಶ್ರೀರಾಮಲು,ರಾಜ್ಯ ವಾಲ್ಮೀಕಿ ಸೇನೆ ಘಟಕದ ಅಧ್ಯಕ್ಷ ಪ್ರತಾಪ್ ಮದಕರಿ, ಮುಂತಾದವರು ಉಪಸ್ಥಿತಿ ಇದ್ದರು.
ವರದಿ:ಮಂಜು ನಾಯ್ಕ ಭಟ್ಕಳ
More Stories
ಶರಾವತಿಯ ನದಿ ತಿರುವಿನ ಮಾರಕ ಯೋಜನೆ
ಸಾಹಿತಿ ಶಿಕ್ಷಕಿ ಜಯಶ್ರೀ ರಾಜು ರವರಿಗೆ ಉಮಾಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿ ಭಾಜನ
ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್:ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ