December 21, 2024

Bhavana Tv

Its Your Channel

ಶ್ರೀ ರಾಘವೇಂದ್ರ ಸ್ವಾಮಿಗಳ 428 ನೇ ಜನ್ಮದಿನೋತ್ಸವ- ಲೋಕ-ಕಲ್ಯಾಣಕ್ಕಾಗಿ ಶ್ರೀವಿಶ್ವಪ್ರಸನ್ನ ತೀರ್ಥರಿಂದ “ಲಕ್ಷ ಪುಷ್ಪಾರ್ಚನೆ” ರಾಯರ ಸನ್ನಿಧಿಗೆ ಭಕ್ತ ಜನಸಾಗರ

ಬೆಂಗಳೂರು:- ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯಶ್ರೀ 108 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರ ಅನುಗ್ರಹ ಆಶೀರ್ವಾದದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪ ಕರಾದ ಆರ್ . ಕೆ ವಾದೀಂದ್ರ ಆಚಾರ್ಯರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 428 ನೇ ಜನ್ಮದಿನೋತ್ಸವಕ್ಕಾಗಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪರಮ ಪೂಜ್ಯ ಉಡುಪಿಯ ಪೇಜಾವರ ಮಠದ ಶ್ರೀ108 ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಂದ “ಲಕ್ಷ- ಪುಷ್ಪಾರ್ಚನೆ” ಲೋಕ ಕಲ್ಯಾಣ ಕ್ಕಾಗಿ ತಮ್ಮ ಅಮೃತ ಹಸ್ತದಿಂದ ನೆರವೇರಿಸಿದರು ತದನಂತರ ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು. ಶ್ರೀ ಗುರು ರಾಯರ ಜನ್ಮದಿನದ ಅಂಗವಾಗಿ ರಾಯರ ಬೃಂದಾವನಕ್ಕೆ ಫಲಪಂಚಾಮೃತ ಅಭಿಷೇಕ , ಪ್ರವಚನ, ಉತ್ಸವ, ಸುಮಾರು 108 ಋತ್ವಿಜರಿಂದ ಅಷ್ಟೋತ್ತರ ಪಾರಾಯಣ ವಿಶೇಷವಾಗಿ ನೆರವೇರಿತು.


ಈ ಸಂದರ್ಭದಲ್ಲಿ ಸಾವಿರಾರು ಭಕ್ತ ಜನರಿಗೆ ಅನ್ನ ಸಂತರ್ಪಣೆಯು ನೆರವೇರಿತು ಭಕ್ತರು ರಾಯರ ದರ್ಶನ ಪಡೆದು ಮಹಾಪ್ರಸಾದ ಸ್ವೀಕರಿಸಿ ಶ್ರೀಗುರುರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಿ ಶ್ರೀ ಮಠದ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕಂಡು ತುಂಬಾ ಸಂತೋಷ ವ್ಯಕ್ತಪಡಿಸಿದರು

error: