December 21, 2024

Bhavana Tv

Its Your Channel

ಜಯಶ್ರೀ ಕಾನಸೂರವರಿಗೆ ಮಹಿಳಾ ಚೈತನ್ಯ ರತ್ನ ಪ್ರಶಸ್ತಿ

ವರದಿ: ವೇಣುಗೋಪಾಲ ಮದ್ಗುಣಿ

ಬೆಂಗಳೂರು : ಕನ್ನಡ ನಾಡು ನುಡಿ, ಶಿಕ್ಷಣ, ಕಲೆ, ಸಾಮಾಜಿಕ ಪರಿಸರ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಅನುಪಮ ಸೇವೆ ಸಲ್ಲಿಸುತ್ತಿರುವುದನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ ಹಾಗೂ ಸ್ವರ್ಣಭೂಮಿ ಫೌಂಡೇಶನ್ ಕರ್ನಾಟಕ ರವರು ನೀಡುವ ರಾಜ್ಯಮಟ್ಟದ ಮಹಿಳಾ ಚೈತನ್ಯ ರತ್ನ ಪ್ರಶಸ್ತಿಗೆ ಉತ್ತರ ಕನ್ನಡ ಮೂಲದ ಲೇಖಕಿ, ಪತ್ರಕರ್ತೆ ಜಯಶ್ರೀ ಕಾನಸೂರ ರವರು ಭಾಜನರಾಗಿದ್ದಾರೆ.

ಅಕ್ಕಮಹಾದೇವಿ ಸಭಾಂಗಣ ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ ಬೆಂಗಳೂರು ಇಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

error: