September 25, 2024

Bhavana Tv

Its Your Channel

ಸಾಹಿತಿ ಶಿಕ್ಷಕಿ ಜಯಶ್ರೀ ರಾಜು ರವರಿಗೆ ಉಮಾಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿ ಭಾಜನ

ಬೆಂಗಳೂರು ; ಉತ್ತರ ಕನ್ನಡ ಹೊನ್ನಾವರ ಮೂಲದ ಸಾಹಿತಿ ಶಿಕ್ಷಕಿ ಜಯಶ್ರೀ ರಾಜುರವರಿಗೆ 2023 ರ ಸಾಲಿನ ಆಧುನಿಕ ವಚನಗಳ ಸಂಕಲನ ಉಮಾಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿ ಭಾಜನವಾಗಿದೆ. ದಿನಾಂಕ 23-6-2024 ರಂದು ಹುಬ್ಬಳ್ಳಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಯಿತು.
ಹುಬ್ಬಳ್ಳಿಯ ಉಮಾಶಂಕರ ಪ್ರತಿಷ್ಠಾನವು ಸಾಹಿತ್ಯದ ವಿವಿಧ ಪ್ರಕಾರಗಳ ಉತ್ತಮ ಪುಸ್ತಕ ಆಯ್ಕೆ ಮಾಡಿ ಪ್ರತಿವರ್ಷ ಹತ್ತರಿಂದ ಹದಿನೈದು ಸಾಹಿತಿಗಳಿಗೆ ಉಮಾಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿಯನ್ನು ಕೊಡುತ್ತ ಬಂದಿದೆ. ಈ ವರ್ಷ ಜಯಶ್ರೀ ರಾಜು ರವರ ಕೊರಡು ಕೊನರುವುದಯ್ಯ ಎಂಬ ಆಧುನಿಕ ವಚನಗಳ ಸಂಕಲನ ಪ್ರಶಸ್ತಿಗೆ ಆಯ್ಕೆಯಾಗಿತ್ತು.
ಜಯಶ್ರೀ ರಾಜು ರವರು ವೃತ್ತಿಯಲ್ಲಿ ಶಿಕ್ಷಕಿ, ಪ್ರವೃತ್ತಿಯಲ್ಲಿ ಸಾಹಿತಿ, ನಿರೂಪಕಿ, ನೃತ್ಯ ಸಂಯೋಜಕಿ, ಸಂಪನ್ಮೂಲ ವ್ಯಕ್ತಿ, ಇವರ ಸಾಹಿತ್ಯ ಕೃತಿಗಳು ಚೊಚ್ಚಲ ಕೃತಿ ಸವೆದ ದಾರಿಯ ಮುಂದೆ ಸೂರ್ಯ ಕವನ ಸಂಕಲನಕ್ಕೆ ಪುಸ್ತಕ ಪ್ರಾಧಿಕಾರ ಯುವಬರಹಗಾರರ ಚೊಚ್ಚಲ ಕೃತಿಗೆ ನೀಡುವ ಧನಸಹಾಯದಡಿ ಪ್ರಕಟವಾಯಿತು. ಎರಡನೇ ಕೃತಿ ಶಾಲಾ ಮಕ್ಕಳಿಗಾಗಿ ಸುಭಾಷಿತಗಳ ಸಂಗ್ರಹದ ಕೈಪಿಡಿ ಜ್ಞಾನದೀಪ ಕೋರಿಕೆಯ ಮೇರೆಗೆ ಪ್ರಕಟಿಗೊಂಡಿದೆ, ಮೂರನೇ ಕೃತಿ ಚಿತ್ತಾರ ಮಕ್ಕಳ ಕವನ ಸಂಕಲನ, ನಾಲ್ಕನೇ ಕೃತಿ ಕೆಂಡಸ0ಪಿಗೆ ಕವನ ಸಂಕಲನ, ಐದನೇ ಕೃತಿ ಯದ್ಭಾವಂ ತದ್ಭವತಿ ವ್ಯಕ್ತಿತ್ವ ವಿಕಸನ ಲೇಖನ ಮಾಲಿಕೆ, ಆರನೇ ಕೃತಿ ಮೊಗ ಹೊತ್ತ ಭಾವ ಕವನ ಸಂಕಲನ. ಏಳನೇ ಕೃತಿ ಕೊರಡು ಕೊನರುವುದಯ್ಯಾ ಎಂಬ ಆಧುನಿಕ ವಚನ ಸಂಕಲನ, ಎಂಟನೇ ಕೃತಿ ಬಾಳೊಂದು ಭಾವಗೀತೆ ಎಂಬ ವ್ಯಕ್ತಿತ್ವ ವಿಕಸನ ಲೇಖನ ಮಾಲಿಕೆ,
ಸ್ಮೃತಿಯೊಳಗಣ ಬಿಂದು ಎಂಬ ಕಥಾ ಸಂಕಲನ ಹಾಗೂ ಮಾಳ್ಪಾವೈರೇಕ್ ದೊಳೆ ಎಂಬ ಕೊಂಕಣಿ ಕವನ ಸಂಕಲನ ಅಚ್ಚಿನಲ್ಲಿದೆ.
ಇವರಿಗೆ ಅನೇಕ ಪ್ರಶಸ್ತಿಗಳು ಬಂದಿರುತ್ತಿದ್ದು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯ ವತಿಯಿಂದ ಕ್ರಿಸ್ತ ಆವಾರ್ಡ 2020 ಪಡೆದಿರುತ್ತಾರೆ, ಕೇರಳ ಕರ್ನಾಟಕದ ಕಾಸರಗೋಡು ಕಾವ್ಯ ಪ್ರಶಸ್ತಿ, ಬುದ್ಧ, ಬಸವ, ಗಾಂಧಿ ಟ್ರಸ್ಟ್ ವತಿಯಿಂದ ಶ್ರೀ ರಾಂ. ಕೆ. ಹನುಮಂತಯ್ಯ ಮತ್ತು ಹೆಬ್ಬಗೋಡಿ ಗೋಪಾಲಪ್ಪ ದತ್ತಿ ಪ್ರಶಸ್ತಿ, ವಿದ್ಯಾಧರ ಕನ್ನಡ ಪ್ರತಿಷ್ಠಾನ- ಧಾರವಾಡ- ಮುಂಬೈ ಯಿಂದ ಕ್ರಿಯಾಶೀಲ ಕನ್ನಡತಿ ಪ್ರಶಸ್ತಿ, ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಕನ್ನಡ ಮಾಣಿಕ್ಯ ರತ್ನ ಪ್ರಶಸ್ತಿ. ರೋಟರಿ ಕ್ಲಬ್ ಮಲ್ಲೇಶ್ವರಂ ಇವರಿಂದ ವೆಕೆಷನಲ್ ಸರ್ವಿಸ್ ಆವಾರ್ಡ ಹಾಗೂ ಸದ್ಯ ಧಾರವಾಡದ ಉಮಾಶಂಕರ ಪ್ರತಿಷ್ಠಾನದ ವತಿಯಿಂದ ಉಮಾಶಂಕರ ಪುಸ್ತಕ ಪ್ರಶಸ್ತಿ ಲಬಿಸಿರುತ್ತದೆ,

ಲಾಕ್ ಡೌನ್ ಸಮಯದಲ್ಲಿ ಕೊರೋನಾ ಜಾಗೃತಿ ಹಾಗೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರಿAದ ಬೆಂಗಳೂರಿನ ಗಾಂಧಿಭವನದಲ್ಲಿ ಅಕ್ಟೋಬರ್2 ರಂದು ಸನ್ಮಾನಿಸಿದರು. 2021 ರಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ ವಿದ್ಯಾಧರ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಇವರಿಂದ ಸಾಹಿತ್ಯ ಶಿಕ್ಷಣ ಚೇತನ ಪ್ರಶಸ್ತಿ
ರಾಜ್ಯಮಟ್ಟದ ಚುಟುಕು ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ರಾಜ್ಯಮಟ್ಟದ ಕವನ ವಾಚನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಅತ್ಯುತ್ತಮ ನಿರೂಪಕಿ ಪ್ರಶಸ್ತಿ, ಆಕಾಶವಾಣಿಯಲ್ಲಿ ಹಲವಾರು ಉಪನ್ಯಾಸ. ಹಲವಾರು ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ, ಉಪನ್ಯಾಸಕಿಯಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ, ಆಕಾಶವಾಣಿಯಲ್ಲಿ ಶಾಲಾ ಮಕ್ಕಳಿಂದ ಹಲವಾರು ಕಾರ್ಯಕ್ರಮಗಳನ್ನು ನೀಡಿರುತ್ತಾರೆ,
ಮೈಸೂರಿನಲ್ಲಿ ನಡೆದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ. 2014 ರ ಮೈಸೂರು ದಸರಾದ ಬಹುಭಾಷಾ ಕವಿಗೋಷ್ಠಿಯಲ್ಲಿ ಕೊಂಕಣಿ ಕವನ ವಾಚನ ಹೀಗೇ ಹಲವಾರು ರಾಜ್ಯಮಟ್ಟದ ರಾಷ್ಟ್ರ ಮಟ್ಟದ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿರುತ್ತಾರೆ, ಹೀಗೇ ಹಲವಾರು ಸಂಘ ಸಂಸ್ಥೆಗಳಿAದ ಉತ್ತಮ ನಿರೂಪಕಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಹಾಗೂ ಗೌರವ ಪಡೆದಿರುತ್ತಾರೆ,
ಭಕ್ತಿ ಕಾವ್ಯ ಯಾನ ಪ್ರತಿಷ್ಠಾನ ಎಂಬ ಹೆಸರಿನ ಸಂಘಟನೆಯ ಮೂಲಕ ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸುವ ಹಲವಾರು ಕಾರ್ಯಕ್ರಮ, ಕಾರ್ಯಗಾರ, ಸ್ಪರ್ಧೆಗಳನ್ನು ಏರ್ಪಡಿಸಿರುತ್ತಾರೆ,
ಕನ್ನಡ ಮತ್ತು ಕೊಂಕಣಿ ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡುವುದರಿಂದ ದ್ವಿಭಾಷಾ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ, ವಿಶಢಷವಾಗಿ ನಮ್ಮ ಭಾವನಾ ವಾಹಿನಿಯಲ್ಲಿ ಲಾಕ್ ಡೌನ್ ಸಮಯದಲ್ಲಿ ಆನ್ ಲೈನ್ ಅನೇಕ ಕಾರ್ಯಕ್ರಮವನ್ನು ನೀಡಿ ಯಶಸ್ವಿಗೊಳಿಸಿದ್ದಾರೆ, ಮಕ್ಕಳಿಗಾಗಿ ಕವನ ಸ್ಪರ್ದೇ, ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಅವರ ಬಗ್ಗೆ ಕವಿಗೋಷ್ಟಿ ನಡೆಸಿ ನೂರಕ್ಕು ಹೆಚ್ಚು ಕವಿಗಳು ಇದರಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿದ್ದರು.
ಇವರು ನಮ್ಮ ಉತ್ತರ ಕನ್ನಡದ ಹೊನ್ನಾವರದ ಮೂಲದವರು ಎನ್ನುವುದು ನಮಗೆ ಹೆಮ್ಮೆ.

error: