December 22, 2024

Bhavana Tv

Its Your Channel

ಕನ್ನಡ ಶಾಲೆ ಉಳಿವಿಗಾಗಿ ಹೋರಾಟ

ಗುಂಡ್ಲುಪೇಟೆ : ಮೈಸೂರಿನ ಹೆಸರಾಂತ ಐತಿಹಾಸಿಕ ಎನ್.ಟಿ.ಎಂ.ಶಾಲೆ ಹೋರಾಟಕ್ಕೆ ಕರ್ನಾಟಕ ಕಾವಲು ಪಡೆ ಗುಂಡ್ಲುಪೇಟೆ ತಾಲೂಕು ಘಟಕದಿಂದ ಬೆಂಬಲ. ಗುಂಡ್ಲುಪೇಟೆ ತಾಲೂಕು ಮೈಸೂರಿನಲ್ಲಿ ಎನ್.ಟಿ.ಎಂ.ಕನ್ನಡ ಶಾಲೆ ಮತ್ತು ನಿರಂಜನ ಮಠವನ್ನು ಉಳಿಸುವಂತೆ ಒತ್ತಾಯಿಸಿ ಕರ್ನಾಟಕ ಕಾವಲು ಪಡೆ ರಾಜ್ಯ ಅಧ್ಯಕ್ಷರಾದ ಎಂ.ಮೋಹನ್ ಕುಮಾರ್ ಗೌಡ ಅವರ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಕಾವಲು ಪಡೆಯ ಗುಂಡ್ಲುಪೇಟೆ ತಾಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಗುಂಡ್ಲುಪೇಟೆಯಿoದ ತೆರಳಿದ ತಾಲೂಕು ಅಧ್ಯಕ್ಷರಾದ ಎ.ಅಬ್ದುಲ್ ಮಾಲಿಕ್ ರವರ ನೇತೃತ್ವದಲ್ಲಿ ಬೆಂಬಲ ಸೂಚಿಸಿ ರಾಮಕೃಷ್ಣ ಆಶ್ರಮದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು.
ಕಳೆದ ೭೫ ದಿನಗಳಿಂದ ಧರಣಿ ನಡೆಸುತ್ತಿದ್ದು ಕನ್ನಡ ಶಾಲೆಯನ್ನು ಉಳಿಸಬೇಕು ಬೆಳೆಸಬೇಕು ಎಂದು ಈ ಮುಖಾಂತರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು

ಈ ಸಂದರ್ಭದಲ್ಲಿ ಕಾವಲು ಪಡೆಯ ತಾಲೂಕು ಗೌರವಾಧ್ಯಕ್ಷರಾದ ವೆಂಕಟೇಶ್ ಗೌಡ ತಾಲೂಕು ಕಾರ್ಯದರ್ಶಿ ಎಸ್.ಮುಬಾರಕ್. ತಾಲೂಕು ಕಾರ್ಯಧ್ಯಕ್ಷರಾದ ಇಲಿಯಾಸ್. ಟೌನ್ ಉಪಾಧ್ಯಕ್ಷರಾದ ಸಾದಿಕ್ ಪಾಷ. ಟೌನ್ ಗೌರವಾಧ್ಯಕ್ಷರಾದ ಶಕೀಲ್, ಸಂಚಾಲಕರಾದ ಕುಂಜುಟ್ಟಿ, ಪದಾಧಿಕಾರಿಗಳಾದ ಹೆಚ್.ರಾಜು.ಮಹೇಶ್, ಮಿಮಿಕ್ರಿರಾಜು, ಅಬ್ದುಲ್ ಜಬ್ಬಾರ್, ಕಲ್ಲಂಗಡಿಮುಬಾರಕ್, ಸ್ವಾಮಿ,ರವಿಕುಮಾರ್, ಅಬ್ದುಲ್ ರಾಜಿಕ್, ಸಿದ್ದರಾಜು., ಎಸ್.ರವಿ.ಮುಂತಾದವರು ಭಾಗವಹಿಸಿದ್ದರು

ವರದಿ: ಸದಾನಂದ ಕಣ್ಣೇಗಾಲ ಗುಂಡ್ಲುಪೇಟೆ ತಾಲೂಕು

error: