December 22, 2024

Bhavana Tv

Its Your Channel

ಗುಂಡ್ಲುಪೇಟೆ ಬಿಜೆಪಿ ಮಂಡಲ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ೭೧ ನೇ ಜನ್ಮ ದಿನಾಚರಣೆ

ಗುಂಡ್ಲುಪೇಟೆ : ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೃಹತ್ ಲಸಿಕಾ ಮೇಳ ಹಾಗೂ ಹಣ್ಣು-ಹಂಪಲು ವಿತರಿಸುವ ಕಾರ್ಯಕ್ರಮ ಮತ್ತು ನರೇಂದ್ರ ಮೋದಿಯವರಿಗೆ ಪೋಸ್ಟ್ ಕಾರ್ಡ್ ಗಳನ್ನು ಪೋಸ್ಟ್ ಮಾಡುವ ಮೂಲಕ ಹುಟ್ಟುಹಬ್ಬದ ಶುಭಾಶಯ ವನ್ನು ಕೋರುವ ಪೋಸ್ಟ್ ಕಾರ್ಡ್ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಮಂಡಲದ ಅಧ್ಯಕ್ಷ ದೊಡ್ಡಹುಂಡಿ ಜಗದೀಶ್, ಪ್ರಧಾನ ಕಾರ್ಯದರ್ಶಿ ರಾಘವಪುರ ದೇವಯ್ಯ, ಪುರಸಭೆ ಅಧ್ಯಕ್ಷರಾದ ಪಿ ಗಿರೀಶ್ , ಉಪಾಧ್ಯಕ್ಷರಾದ ದೀಪಿಕಾ ಅಶ್ವಿನ್,ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎನ್ ಮಲ್ಲೇಶ್, ಸಿ ಮಹದೇವಪ್ರಸಾದ್, ಎಸ್ಸಿ ಮಂಜುನಾಥ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸುನಿಲ್, ನಾಗೇಂದ್ರ, ಮಲ್ಲೇಶ ಡಿ ಮಹೇಶ್, ಎಸ್ ಟಿ ಮಹದೇವಸ್ವಾಮಿ, ಮಹೇಂದ್ರ ಕಲ್ಲಹಳ್ಳಿ ಮಹೇಶ್, ಮಹೇಶ್ ಕಿರಣ್ ಮಾನ್ಯ ಇನ್ನು ಮುಂತಾದ ಕಾರ್ಯಕರ್ತರು ಮುಖಂಡರುಗಳು ಭಾಗಿಯಾಗಿದ್ದರು.
ವರದಿ .ಸದಾನಂದ ಕಣ್ಣೇಗಾಲ ಗುಂಡ್ಲುಪೇಟೆ

error: