December 22, 2024

Bhavana Tv

Its Your Channel

ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ತಾಲೂಕು ಕಚೇರಿಯ ಮುಂಭಾಗ ಧರಣಿ. ತಾಲೂಕು ದಂಡಾಧಿಕಾರಿಗಳಿಗೆ ಮನವಿ

ಗುಂಡ್ಲುಪೇಟೆ . ಸೇ ೨೪ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಮತ್ತು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಹಾಗೂ ಆಶಾ ಕಾರ್ಯಕರ್ತರ ಸಂಘ ರಾಜ್ಯ ಜಂಟಿ ಸಮಿತಿಗಳು ಹೋರಾಟವನ್ನು ನಡೆಸಿವೆ.

ಕಳೆದ ಬಜೆಟ್ ೨೦೨೧ ೨೨ರಲ್ಲಿ ಬಜೆಟ್ ಹಂಚಿಕೆಯಲ್ಲಿ ಯೋಜನೆಗಳಿಗೆ ಅನುದಾನ ಕಡಿತದಿಂದಾಗಿ ಯೋಜನೆಗಳಲ್ಲಿ ದುಡಿಯುವ ಅಂಗನವಾಡಿ, ಬಿಸಿ ಊಟ ಮತ್ತು ಆಶಾ ಕಾರ್ಯಕರ್ತೆಯರು ಮುಂತಾದವರ ನಿಯಮಿತ ಮಾಸಿಕ ಸಂಭಾವನೆ ಕೂಡ ಹಲವು ರಾಜ್ಯಗಳಲ್ಲಿ ಬಾಕಿ ಉಳಿದಿದೆ ಇಂತಹ ಕೋವಿಡ್ ಬಂದಿರುವ ಸಂದರ್ಭದಲ್ಲಿ ಇದನ್ನು ಕೋವಿಡ್ ೧೯ ರ ಸಂಕ್ರಾಮಿಕ ಪಿಡುಗಿನ ಪರಿಣಾಮವಾಗಿ ದುಡಿಯುವ ಜನರ ದೊಡ್ಡ ವಿಭಾಗದ ಉದ್ಯೋಗ ಮತ್ತು ಆದಾಯ ನಷ್ಟವಾಗಿದೆ ಎರಡನೇ ಅಲೆಯಲ್ಲಿ ಆರೋಗ್ಯ ವ್ಯವಸ್ಥೆಯ ಪ್ರಮುಖ ದೌರ್ಬಲ್ಯಗಳನ್ನು ವಿಶೇಷವಾಗಿ ನಮ್ಮ ದೇಶದ ಆರೋಗ್ಯ ವ್ಯವಸ್ಥೆಯ ಸಂಪೂರ್ಣಕುಸಿತ ಮತ್ತು ಸಾವಿರಾರು ಅಮೂಲ್ಯ ಜೀವಗಳನ್ನು ನಷ್ಟ ವನ್ನು ಆಘಾತ ಮತ್ತು ದುಃಖದಿಂದ ಮಾತ್ರ ನೆನಪಿಸಿಕೊಳ್ಳಬಹುದು ಈಗಲೂ ಮುಂದುವರಿದ ಎರಡನೇ ಅಲೆಗೆ ಸಂಬAಧಿಸಿದ ಆರೋಗ್ಯ ಬಿಕ್ಕಟ್ಟು ಮತ್ತು ಸಂಭವನೀಯ ಮೂರನೇ ಅಲೆಯ ಸರಿಯಾದ ವೈಜ್ಞಾನಿಕ ಯೋಜನೆ ಮತ್ತು ಬೃಹತ್ ಸಮಯೋಚಿತ ವ್ಯಾಕ್ಸಿನೇಷನ್ ಅಭಿಯಾನದ ತುರ್ತು ಅಗತ್ಯವನ್ನು ಬಹಿರಂಗಪಡಿಸಿತು ಎಂದು ಈ ಮೂಲಕ ತಿಳಿಸಿದರು

ಹೆಚ್ಚುವರಿಯಾಗಿ ಮಾಸಿಕ ೧೦ ಸಾವಿರ ರೂಗಳನ್ನು ನೀಡುವುದು. ಕೋವಿಡ್ ೧೯ ರ ಬತ್ತೆ ನೀಡುವುದು. ಸೇವೆಯಲ್ಲಿದ್ದಾಗ ಕೋವಿಡ್ ೧೯ ರ ಸೋಂಕಿನಿAದ ಪೀಡಿತರಾದವರಿಗೆಲ್ಲ ಕನಿಷ್ಠ ೧೦ ಲಕ್ಷ ರೂಗಳನ್ನು ಪರಿಹಾರ ನೀಡುವುದು. ಕಾರ್ಮಿಕ ವಿರೋಧ ಸಂಹಿತೆಗಳನ್ನು ವಾಪಸ್ಸು ಪಡೆಯಿರಿ. ಯೋಜನೆಗಳ ಕೆಲಸಗಾರರನ್ನು ಕಾರ್ಮಿಕರೆಂದು ಪರಿಗಣಿಸಿ. ಕೇಂದ್ರ ಯೋಜನೆ ಸ್ಕಿ೦ ನೌಕರರನ್ನ ಕಾಯಂಗೊಳಿಸಿ ಮತ್ತು ೨೧ ಸಾವಿರ ರೂಗಳ ಮಾಸಿಕ ಕನಿಷ್ಠ ವೇತನ ನೀಡುವುದು ಮತ್ತು ಇನ್ನು ಅನೇಕ ಬೇಡಿಕೆಗಳನ್ನು ನೀಡಬೇಕು ಎಂದು ಆಗ್ರಹಿಸಿದರು ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಧರಣಿ ನಡೆಯಿತು. ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಈ ಸಮಯದಲ್ಲಿ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷರಾದ ವಿಮಲ, ಪ್ರಧಾನ ಕಾರ್ಯದರ್ಶಿ ಗುರು ಮಲ್ಲಮ್ಮ ಮತ್ತು ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷರಾದ ಎನ್ ಮಹಾದೇವಮ್ಮ, ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ, ವಿಮಲಾ ,ಸುಮಿತ್ರ,ಕಲಾವತಿ , ಜ್ವಾಲಾಮುಖಿ ವರಲಕ್ಷ್ಮಿ ಹಾಗೂ ಗುಪ್ತ ಮಾಹಿತಿ ಮುಖ್ಯಪೇದೆ ರವಿ ಹಸಗೂಲಿ ಇತರರು ಹಾಜರಿದ್ದರು

ವರದಿ : ಸದಾನಂದ ಕಣ್ಣೇಗಾಲ ಗುಂಡ್ಲುಪೇಟೆ

error: