December 21, 2024

Bhavana Tv

Its Your Channel

ನಿರಂಜನ ಮಠದ ಉಳಿವಿಗೆ ಪಾದಯಾತ್ರೆಯ ಮೂಲಕ ಹೋರಾಟ

ಚಾಮರಾಜನಗರ ಗುಂಡ್ಲುಪೇಟೆಯ ಮೈಸೂರು ನಿರಂಜನ ಮಠದ ಉಳಿವಿಗೆ ಈಗ ಮತ್ತಷ್ಟು ತೀವ್ರವಾಗಿ ಪಾದಯಾತ್ರೆಯ ಮೂಲಕ ಹೋರಾಟ ನಡೆಯಿತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) ಬಸವ ಸೇನೆ ಮತ್ತು ವೀರಶೈವ ಲಿಂಗಾಯತ ಸಂಘ-ಸAಸ್ಥೆಗಳು ಹಾಗೂ ಬಸವ ಬಳಗದ ಒಕ್ಕೂಟ ಗುಂಡ್ಲುಪೇಟೆ ತಾಲೂಕು ವತಿಯಿಂದ ಬೃಹತ್ ರ‍್ಯಾಲಿ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.

ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಿAದ ಪಾದಯಾತ್ರೆಯ ಮೂಲಕ ತಾಲೂಕು ಕಚೇರಿಗೆ ತೆರಳಿ ಮಠವನ್ನು ಉಳಿಸಿ ಎಂದು ಸರ್ಕಾರಕ್ಕೆ ತಾಲೂಕು ದಂಡಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು. ಈ ಹೋರಾಟದಿಂದ ನಿರಂಜನ್ ಮಠವನ್ನು ಉಳಿಸಬೇಕು ಎಂದು ಈ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಪಟ್ಟಣದ ಕೆಲವು ರಸ್ತೆಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ದ ದಿಕ್ಕಾರವನ್ನು ಕೂಗಿದರು.
ಸರ್ಕಾರವು ಒತ್ತಡದಿಂದ ಹೊರಬರಬೇಕು ವಿವೇಕಾನಂದರ ಸ್ಮಾರಕ ನಿರ್ಮಿಸಲು ನಮ್ಮ ಮಠವೆ ಬೇಕಿಲ್ಲ ಬೇರೆ ಸ್ಥಳವನ್ನು ಮಂಜೂರು ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಹೋರಾಟ ಸ್ಮಾರಕದ ವೀರುದ್ದವಿಲ್ಲ ಆದರೆ ಮಠದ ಜಾಗದಲ್ಲಿ ನಿರ್ಮಿಸಬೇಕೆನ್ನುವ ನಿರ್ಧಾರದ ವಿರುದ್ಧ ಎಂದು ಘೋಷಣೆಗಳನ್ನು ಕೂಗಿದರು. ನಂತರ ಮೈಸೂರಿನ ಬಸವ ಪುತ್ತಳಿಗೆ ಮಾಲಾರ್ಪಣೆ ಮಾಡಿ ನಂತರ ಪಾದಯಾತ್ರೆ ಮೂಲಕ ನಿರಂಜನ ಮಠದ ಉಳಿವಿಗೆ ಬೆಂಬಲ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಿನ ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳು , ಯುವ ಮುಖಂಡರು ಬಸವ ಸೇನೆ ಮತ್ತು ಬಸವ ಬಳಗದ ಒಕ್ಕೂಟ, ಮತ್ತು ತಾಲೂಕಿನ ವೀರಶೈವ ಲಿಂಗಾಯಿತ ಮುಖಂಡರುಗಳು ಭಾಗಿಯಾಗಿದ್ದರು.

ಸದಾನ೦ದಾ ಕಣ್ಣಿಗಾಲ ಗುಂಡ್ಲುಪೇಟೆ

error: