ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಹುಂಡಿ ಗ್ರಾಮದಲ್ಲಿ ನೆನ್ನೆ ರಾತ್ರಿ ಸುರಿದ ಭಾರಿ ಮಳೆ ಗಾಳಿಗೆ ಅಪಾರವಾದ ಬಾಳೆಗಿಡ ನಾಶವಾಗಿದೆ.
ಗುರುಸ್ವಾಮಿ ಎಂಬುವರಿಗೆ ಸೇರಿದ ಜಮೀನಿನಲ್ಲಿ ಎರಡೂವರೆ ಎಕರೆಯ ಬಾಳೆಗಿಡ ಕಟಾವಿಗೆ ಬಂದಿದ್ದು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬAತೆ ಆಗಿದೆ.ಸಾಲ ಸೋಲ ಮಾಡಿ ಬೆಳೆ ಬೆಳೆದಿದ್ದಾರೆ
ಸುಮಾರು ಅಂದಾಜು ಒಂದೂವರೆ ಎಕರೆಯಲ್ಲಿ ಬಾಳೆ ಗಿಡ ಸರ್ವೆ ನಂಬರ್ ೧೬೧ /೪ರಲ್ಲಿ ಬೆಳೆದು ಬಾಳೆಗೊನೆ ಕೇರಳಕ್ಕೆ ಮಾರಾಟ ಮಾಡುತ್ತಿದ್ದ ರೈತ ಗುರುಸ್ವಾಮಪ್ಪ.
ಕೊರೋನ ಸಮಯದಲ್ಲಿ ಅಪಾರ ನಷ್ಟವನ್ನು ಅನುಭವಿಸಿ ಆರ್ಥಿಕವಾಗಿ ಮೇಲೆತ್ತುವ ಸಂದರ್ಭದಲ್ಲಿ . ಗಾಳಿ ಮಳೆಗೆ ನೇಂದ್ರ ಬಾಳೆ ಗಿಡ ನೆಲಕ್ಕುರುಳಿದೆ. ಸೂಕ್ತ ಪರಿಹಾರ ಕೊಡಿಸುವಂತೆ ಮನವಿ ಮಾಡಿ ಕೊಂಡ ರೈತ, ತೋಟಗಾರಿಕೆ ಅಧಿಕಾರಿಗಳಾಗಲಿ ಹಾಗೂ ಸಂಬAಧಪಟ್ಟ ಅಧಿಕಾರಿಗಳಿಗೆ ಸೂಕ್ತ ಪರಿಹಾರ ಕೊಡಿಸಿ ಕೊಡಬೇಕೆಂದು ಮನವಿ ಮಾಡಿದ್ದಾರೆ.
ವರದಿ ಸದಾನ೦ದಾ ಕನ್ನೆಗಾಲ ಗುಂಡ್ಲುಪೇಟೆ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.