ಚಾಮರಾಜನಗರ ಗುಂಡ್ಲುಪೇಟೆ ಪಟ್ಟಣದ ಗೌತಮ್ ಕಾಲೇಜಿನಲ್ಲಿ ನಡೆದ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವರ್ತಮಾನದ ತಲ್ಲಣಗಳು ಮತ್ತು ಸಂವಿಧಾನ, ಎಂಬ ವಿಚಾರ ಕುರಿತು ಆಯೋಜಿಸಲಾಗಿದ್ದ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪ್ರಖ್ಯಾತ ಸಾಹಿತ್ಯಗಳು ಹಾಗೂ ಚಿಂತಕರಾದ ಯೋಗೇಶ್ ಮಾಸ್ಟರ್ ಅವರು ಗಿಡಕ್ಕೆ ನೀರು ಹಾಕುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು..
ನಂತರ ಮಾತನಾಡಿದ ಅವರು ಸಂವಿಧಾನದ ಆಶಯವೇ ಭಯರಹಿತ ಸಮಾಜದ ನಿರ್ಮಾಣವಾಗಿದೆ . ಮತ್ತು ಧರ್ಮದ ಬಲ, ಜಾತಿಯ ಬಲ, ಹಣದ ಬಲ, ಮುಂತಾದ ಯಾವುದೇ ರೀತಿಯ ಬಲವನ್ನು ಬಳಸಿಕೊಂಡು ದುರ್ಬಲ ವರ್ಗದವರ ಮೇಲೆ ಪ್ರಭಾವ ಬೀಳುವ ಯಾವುದೇ ಚಟುವಟಿಕೆಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದರು.ಹೈಕೋರ್ಟ್ ವಕೀಲರು ಮತ್ತು ಬಿಪಿಎಸ್ ರಾಜ್ಯ ಮುಖಂಡರಾದ ಪ್ರೊ.ಹರಿರಾಮ್ ಮಾತನಾಡಿ ಬೇರೆಯವರ ತಪ್ಪುಗಳನ್ನು ತಿದ್ದಲುಹೋಗುವ ನಾವು ನಮ್ಮೊಳಗಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನ ಮಾಡುವುದೇ ಇಲ್ಲ. ನಮ್ಮ ನ್ಯೂನ್ಯತೆಗಳನ್ನು ಮರೆಮಾಚಲು ಆತ್ಮವಿಮರ್ಶೆಗೆ ಗಮನಹರಿಸಬೇಕು ಎಂದರು ಅಂಬೇಡ್ಕರ್ ವಾದಿ ಚಿಂತಕರಾದ ಡಾಕ್ಟರ್ ಕೃಷ್ಣಮೂರ್ತಿ ಚಮರ ಮಾತನಾಡಿ ಮನುಷ್ಯ ಇಂದು ಆಕಾಶದ ಎತ್ತರ ,ಸಮುದ್ರದ ಆಳ ,ಭೂಮಿಯ ತೂಕ, ಹೀಗೆ ಎಲ್ಲವನ್ನೂ ಖಡಕ್ಕಾಗಿ ಲೆಕ್ಕ ಹಾಕುವ ಅಂತ ತಲುಪಿದ್ದಾನೆ. ಚಂದ್ರ ಲೋಕದಲ್ಲಿ ವಾಸವಾಗಿರುವ ಅಷ್ಟು ತಂತ್ರಜ್ಞಾನದಲ್ಲಿ ಮುಂದುವರೆದಿದ್ದಾ ನೆ. ಆದರೆ ದುರಂತವೆAದರೆ ತನ್ನ ಆಳ-ಅಗಲಗಳನ್ನು ಅರಿವಿನಲ್ಲಿ ವಿಫಲನಾಗಿದ್ದಾನೆ. ನಾವು ರಾಜಕಾರಣ, ವ್ಯವಹಾರ, ಲೆಕ್ಕಾಚಾರಗಳ ಆಚೆ ನಮ್ಮನ್ನು ನಾವು ಅರಿಯಬೇಕಿದೆ ಎಂದರು. ಈ ಕಾರ್ಯಕ್ರಮಕ್ಕೆ ಆಗಮಿಸಿರುವ ಎಲ್ಲಾ ಅತಿಥಿಗಳಿಗೂ ಕಾವಲುಪಡೆಯ ತಾಲೂಕು ಘಟಕದ ಅಧ್ಯಕ್ಷರಾದ ಎ. ಅಬ್ದುಲ್ ಮಾಲಿ ಕ್,ರವರು ಗುಲಾಬಿಹೂಗಳನ್ನು ನೀಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಪ್ರಖ್ಯಾತ ಸಾಹಿತಿಗಳಾದ ಯೋಗೇಶ್ ಮಾಸ್ಟರ್, ಪ್ರೊ ಹರಿರಾಮ್, ಡಾಕ್ಟರ್ ಕೃಷ್ಣಮೂರ್ತಿ ಚಮರಂ, ಮುಸ್ಲಿಂ ಧರ್ಮಗುರುಗಳಾದ ಮುಬಾರಕ್ ನಗ್ವಿ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕರಾದ ಸುಭಾಷ್ ಮಾಡ್ರಹಳ್ಳಿ, ಹಿರಿಯ ಹೋರಾಟಗಾರರಾದ ಬ್ರಹ್ಮಾನಂದ ,ಚಲವಾದಿ ಆರ್ ಸೋಮಣ್ಣ, ಕಾವಲುಪಡೆಯ ತಾಲೂಕು ಅಧ್ಯಕ್ಷರಾದ ಅಬ್ದುಲ್ ಮಲಿಕ್ , ಪುರಸಭಾ ಸದಸ್ಯರಾದ ರಾಜಗೋಪಾಲ್, ನಾ ಕುಮಾರ್, ನವೀನ ಮೌರ್ಯ ಯುವ ವಿಜ್ಞಾನಿಗಳು, ವಕೀಲರಾದ ಸಂಪತ್ತು, ಗೋವಿಂದರಾಜು, ನಂಜುoಡಸ್ವಾಮಿ ,ನಾಗರಾಜ್ ಮಾನಸ್, ರಾಜೇಶ್ ಮಂಜು ದೀಪು , ಮತ್ತು ಕಾವಲುಪಡೆಯ ಸಂಘಟನೆ ಯವರು ಇನ್ನು ಮುಂತಾದವರು ಹಾಜರಿದ್ದರು…
ವರದಿ ಸದಾನ೦ದಾ ಕನ್ನೆಗಾಲ ಗುಂಡ್ಲುಪೇಟೆ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.