ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನ ಬರಗಿ ಉಪ ವಿದ್ಯುತ್ ಕೇಂದ್ರದಲ್ಲಿ ಆಯುಧ ಪೂಜೆ ಕಾರ್ಯಕ್ರಮ ನಡೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿದ್ಯುತ ಉಪ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಆಯುಧಪೂಜೆ ಕಾರ್ಯವನ್ನು ಮಾಡಿಕೊಂಡು ಬಂದಿರುತ್ತಾರೆ. ಹಿ೦ದು ಸಂಸ್ಕೃತಿಯ ಪ್ರಕಾರ ಯಂತ್ರೋಪಕರಣ ಮತ್ತು ಯಂತ್ರಗಳಿಗೆ ಮತ್ತು ವಾಹನಗಳಿಗೂ ದೈವ ಶಕ್ತಿ ಇದೆ ಎಂದು ನಂಬಿರುತ್ತಾರೆ. ಹಾಗಾಗಿ ಶ್ರೀಚಾಮುಂಡೇಶ್ವರಿ ಅಮ್ಮನವರ ಹಬ್ಬದ ಹಿಂದಿನ ದಿನದಂದು ದೇಶಾದ್ಯಂತ ನಡೆಯುವ ಆಯುಧ ಪೂಜೆಯನ್ನು ಸಂಭ್ರಮದಿAದ ಮತ್ತು ಸಡಗರದಿಂದ ಆಚರಿಸಿಕೊಂಡು ಬಂದಿದ್ದಾರೆ. ಹಾಗಾಗಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ಪಾಳಿ ಕರ್ತವ್ಯದ ನೌಕರರಾದ ಎಸ್ .ಬಸವಣ್ಣ, ಮಂಜುನಾಥ್ ನಿಜಗುಣಸ್ವಾಮಿ ಮತ್ತು ಗುರುಪ್ರಸಾದ್, ಸದಾನಂದ ,ಮೋಹನ್ ಕುಮಾರ್, ಮಹೇಶ್ , ಮತ್ತು ಮನು ಹಾಜರಿದ್ದರು
ವರದಿ:ಸದಾನ೦ದ ಕನ್ನೇಗಾಲ ಗುಂಡ್ಲುಪೇಟೆ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.