December 22, 2024

Bhavana Tv

Its Your Channel

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಹೊಸದಾಗಿ ನಿರ್ಮಿಸಿರುವ ಚರಂಡಿ ಕಳಪೆ ಕಾಮಗಾರಿ. ಸಾರ್ವಜನಿಕರ ಆಕ್ರೋಶ

ಗುಂಡ್ಲುಪೇಟೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಸರ್ಕಾರಿ ಶಾಲೆಯ ಎದುರು ಹೊಸದಾಗಿ ನಿರ್ಮಿಸಿರುವ ಚರಂಡಿ ಕಳಪೆ ಕಾಮಗಾರಿಯಿಂದ ಕೂಡಿದ ಪರಿಣಾಮ ಶನಿವಾರ ರಾತ್ರಿ ವೇಳೆಯಲ್ಲಿ ಸರಕು ಸಾಗಣೆ ಲಾರಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಲು ಬಂದಾಗ ಚರಂಡಿ ಕುಸಿದು ಬಿದ್ದಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಆಗುವ ಅನಾಹುತವನ್ನು ತಡೆಯಲು ಸಂಬAಧಪಟ್ಟ ಇಲಾಖೆಯವರು ಅಧಿಕಾರಿಗಳು ಕೂಡಲೇ ಗಮನಹರಿಸಿ ಗುಣಮಟ್ಟದ ಕಾಮಗಾರಿ ನಡೆಸಬೇಕೆಂದು ಸಾರ್ವಜನಿಕರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸರಕು ತುಂಬಿದ ಲಾರಿಯನ್ನು ಕ್ರೇನ್ ಮೂಲಕ ಮೇಲೆ ಎತ್ತಲಾಯಿತು.

ವರದಿ ಸದಾನ೦ದ ಕನ್ನೆಗಾಲ ಗುಂಡ್ಲುಪೇಟೆ

error: