December 22, 2024

Bhavana Tv

Its Your Channel

ಹಿಂದೂ ಜಾಗರಣ ವೇದಿಕೆ ವತಿಯಿಂದ ಪ್ರತಿಭಟನೆ.

ಚಾಮರಾಜನಗರ ; ನವಂಬರ್ ೨೧ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳ ಮೇಲೆ ನಿರಂತರವಾಗಿ ದಾಳಿ ದೌರ್ಜನ್ಯಎಸಗಲು ಬೆಂಬಲ ನೀಡುತ್ತಿರುವ ಅಲ್ಲಿನ ಸರ್ಕಾರದ ನಡೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಚಾಮರಾಜನಗರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ನಂತರ ಮಾತನಾಡಿದ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂ ಪ್ರಣಯ್ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅವರು ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎನ್ನುತ್ತಿದ್ದಾರೆ. ಆದರೆ ನಮ್ಮಯಾವುದೇ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಬರದೇ ಬೇರೆಯವರ ಪ್ರತಿಭಟನೆಗೆ ಕುದ್ದು ಬಂದು ಮನವಿ ಸ್ವೀಕರಿಸುತ್ತಾರೆ. ನಮ್ಮ ಹಿಂದು ಜಾಗರನ ವೇದಿಕೆ ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು ಬೇರೆಯವರನ್ನು ಮನವಿ ಸ್ವೀಕರಿಸಲು ಕಳುಹಿಸುತ್ತಾರೆ ಹಾಗಾದರೆ ಹಿಂದೂ ಕಂಡರೆ ಆಗುವುದಿಲ್ಲವೇ ಏಕೆ ಈ ತಾರತಮ್ಯ ಎಂದು ಪ್ರತಿಭಟನೆಯಲ್ಲಿ ತಿಳಿಸಿದರು.

ಭಾವನಾ ಟಿವಿಗಾಗಿ ಸದಾನಂದ ಕನ್ನೆಗಾಲ, ಗುಡ್ಲಪೇಟೆ

error: