December 21, 2024

Bhavana Tv

Its Your Channel

ಸಕಾಲದಲ್ಲಿ ರೈತರು ಸಾಲ ಮರುಪಾವತಿ ಮಾಡಿದರೆ ಸಹಕಾರ ಸಂಘಗಳ ಬೆಳವಣಿಗೆ ಸಾಧ್ಯ- ಎಂ ಪಿ. ಸುನಿಲ್.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿAದ ೨೫ ಲಕ್ಷ ರೂಪಾಯಿ ಸಾಲದ ಚೆಕ್ ವಿತರಣೆ ಮಾಡಿದರು. ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ರೈತರಿಗೆ ಮಧ್ಯಮಾವಧಿ ಸಾಲವನ್ನು ವಿತರಣೆ ಮಾಡಿದರು. ವಿತರಣೆ ಮಾಡಿ ಮಾತನಾಡಿದ ಜಿಲ್ಲಾ ಬ್ಯಾಂಕ್ ನಿರ್ದೇಶಕ ಎಂಪಿ ಸುನಿಲ್ ರವರು ರೈತರ ನೆರವಿಗೆ ನಮ್ಮ ಬ್ಯಾಂಕ್ ಸಿದ್ಧವಿರುತ್ತದೆ ಹಾಗಾಗಿ ರೈತರು ಸಹ ಸರಿಯಾದ ಸಮಯಕ್ಕೆ ತೆಗೆದುಕೊಂಡ ಸಾಲವನ್ನು ಮರುಪಾವತಿ ಮಾಡಿಕೊಂಡರೆ ಉತ್ತಮ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ೨೫ ಲಕ್ಷ ರೂಗಳ ಸಾಲವನ್ನು ೭ಜನ ರೈತರಿಗೆ ವಿತರಣೆ ಮಾಡಲಾಯಿತು. ಇದರಲ್ಲಿ ಕಸಬಾ ಪ್ರಾಥಮಿಕ ಕೃಷಿ ಪತ್ತಿನಸಹಕಾರ ಸಂಘದ ನೌಕರರು ಹಾಜರಿದ್ದರು.
ವರದಿ: ಸದಾನ೦ದ ಕಣ್ಣೆಗಾಲ ಗುಂಡ್ಲುಪೇಟೆ

error: