December 22, 2024

Bhavana Tv

Its Your Channel

ಗುಂಡ್ಲುಪೇಟೆ; ಎಚ್ ಎಸ್ ಮಹದೇವ ಪ್ರಸಾದ್ ಫೌಂಡೇಶನ್ ವತಿಯಿಂದ ಆರ್ಥಿಕ ನೆರವು.

ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಮೊನ್ನೆ ಸುರಿದ ಭಾರಿ ಮಳೆಗೆ ಗೋಡೆ ಕುಸಿದಿದ್ದು. ಇದನ್ನು ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿ.ಜಿ. ಶಿವಕುಮಾರ್ ಅವರು ಕೂಡಲೇ ಕಾಂಗ್ರೆಸ್ ಯುವ ಮುಖಂಡರಾದ ಎಚ್ ಎ೦ ಗಣೇಶ್ ಪ್ರಸಾದ್ ರವರಿಗೆ ತಿಳಿಸಿದರು. ತಕ್ಷಣ ಎಚ್ ಎಸ್ ಮಹದೇವ ಪ್ರಸಾದ್ ಫೌಂಡೇಶನ್ ವತಿಯಿಂದ ಆರ್ಥಿಕ ನೆರವು ನೀಡಿದರು . ಆ ಹಣವನ್ನು ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರಾದ ಬಿ.ಜಿ. ಶಿವಕುಮಾರ್ ಮತ್ತು ಜಿ ಸ್ವಾಮಿರವರು ಗೋಡೆ ಕುಸಿದು ಹೋಗಿದ್ದ ಮನೆಯ ಬಡ ವರ್ಗದ ಮಹಿಳೆಗೆ ತಲುಪಿಸಿದರು . ಈ ಸಂದರ್ಭದಲ್ಲಿ ಬಿ.ಜಿ ಶಿವ ಕುಮಾರ್ ಅವರು ಮತ್ತು ಸ್ವಾಮಿರವರು. ಎಚ್ ಎಂ ಗಣೇಶ್ ಪ್ರಸಾದ ನವರಿಗೆ ಧನ್ಯವಾದಗಳನ್ನು ತಿಳಿಸಿದರು.

ಸದಾನಂದ ಕಣ್ಣೇಗಾಲ ಗುಂಡ್ಲುಪೇಟೆ

error: