December 22, 2024

Bhavana Tv

Its Your Channel

ಕರುನಾಡ ಶಿವಶಕ್ತಿ ಸಂಘಟನೆ ಗುಂಡ್ಲುಪೇಟೆ ವತಿಯಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್‌ಗೆ ಭಾವಪೂರ್ಣ ಶ್ರದ್ಧಾಂಜಲಿ

ಗುOಡ್ಲುಪೇಟೆ : ನಟ ಪುನೀತ್ ರಾಜಕುಮಾರ್ ವಿಧಿವಶರಾದ ಹಿನ್ನೆಲೆಯಲ್ಲಿ ಕರುನಾಡ ಯುವಶಕ್ತಿ ಸಂಘಟನೆಯ ವತಿಯಿಂದ ಗುಂಡ್ಲುಪೇಟೆಯಲ್ಲಿ ಕಂಬನಿ ಮಿಡಿಯಿತು. ಈ ಸಂದರ್ಭದಲ್ಲಿ ಕರುನಾಡ ಯುವಶಕ್ತಿ ಜಿಲ್ಲಾ ಅಧ್ಯಕ್ಷರಾದ ಅಶೋಕ್ ರಾಜ್ ಮಾತನಾಡಿ ಕನ್ನಡ ನಟ ಪುನೀತ್ ರಾಜಕುಮಾರ್ ಅವರು ನಮ್ಮ ಜಿಲ್ಲೆಯವರು ಹಾಗಾಗಿ ನಮ್ಮ ಗಡಿಭಾಗದಿಂದ ರಾಜಧಾನಿ ಮಟ್ಟಕ್ಕೆ ಬೆಳೆದಿರುವುದು ಹೆಮ್ಮೆಯ ವಿಚಾರ ಆದರೆ ವಿಧಿ ಅವರನ್ನು ಬಿಡಲಿಲ್ಲ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಅವರು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ ಅವರಿಗೆ ಒಂದು ನಿಮಿಷದ ಕಾಲ ಮೌನವನ್ನು ಆಚರಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ ಎಂದರು

ಈ ಸಂದರ್ಭದಲ್ಲಿ ಕರುನಾಡ ಯುವಶಕ್ತಿ ತಾಲೂಕು ಅಧ್ಯಕ್ಷರಾದ ಮುನೀರ್ ಪಾಷಾ, ಪ್ರಧಾನ ಕಾರ್ಯದರ್ಶಿಯಾದ ಯೋಗೇಶ, ಕೆ. ಮಾನವ ಬಂದುತ್ವ ವೇದಿಕೆಯ ಜಿಲ್ಲಾ ಸಂಚಾಲಕರಾದ ಸುಭಾಷ್ ಮಾಡ್ರಳ್ಳಿ, ತಾಲೂಕು ಸಂಚಾಲಕರಾದ ಆರ್ ಸೋಮಣ್ಣ, ಸಿಸಿ ದೇವರಾಜ್, ಸಾಹಿತಿ ಕಾಳಿಂಗ ಸ್ವಾಮಿ, ಲಕ್ಕುರು ಗಿರೀಶ್, ಕಾವಲುಪಡೆಯ ತಾಲೂಕು ಘಟಕದ ಅಧ್ಯಕ್ಷರಾದ ಅಬ್ದುಲ್ ಮಾಲಿಕ್, ಕಾರ್ಯದರ್ಶಿಯಾದ ಎಸ್ ಮುಬಾರಕ್, ಅಬ್ದುಲ್ ರಶೀದ್, ಇಲಿಯಾಸ್, ಕುಣಗಳ್ಳಿ ಶಿವು, ಸಾರ್ವಜನಿಕರು ಉಪಸ್ಥಿತರಿದ್ದರು

ವರದಿ: ಸದಾನ೦ದ ಕಣ್ಣೇಗಾಲ ಗು೦ಡ್ಲೂಪೇಟೆ

error: