May 6, 2024

Bhavana Tv

Its Your Channel

ಮಲೆಮಾದೇಶ್ವರ ಸನ್ನಿಧಿಗೆ ದೀಪಾವಳಿಯ ಅಮಾವಾಸ್ಯೆಯಂದು ವಿಶೇಷ ಪೂಜೆಗೆಂದು ಹರಿದುಬಂದ ಭಕ್ತರು.

ಗುಂಡ್ಲುಪೇಟೆ ತಾಲೂಕಿನ ಮಳವಳ್ಳಿ ಮಲೆಮಾದೇಶ್ವರ ಎಂದು ಹೆಸರುವಾಸಿಯಾಗಿರುವ ಮಾದಪ್ಪನ ಸನ್ನಿಧಿಗೆ ದೀಪಾವಳಿಯ ಅಮಾವಾಸ್ಯೆಯಂದು ಭಕ್ತರ ದಂಡು ಪೂಜೆಗೆಂದು ಹರಿದು ಬಂದರು.

ಶ್ರೀ ಮಹಾದೇವ ಸ್ವಾಮಿಗಳವರ ಅಧ್ಯಕ್ಷತೆಯಲ್ಲಿ ನಡೆದ ಈ ಅಮಾವಾಸ್ಯೆ ಪೂಜಾ ಕಾರ್ಯವು ಬಹಳ ವಿಜೃಂಭಣೆಯಿAದ ನಡೆಯಿತು. ತಾಲೂಕಿನ ಎಲ್ಲಾ ಗ್ರಾಮಗಳಿಂದಲೂ ಭಕ್ತರು ಪೂಜೆಗೆಂದು ಈ ದಿನ ಮಾದಪ್ಪನ ದೇವಸ್ಥಾನಕ್ಕೆ ಮಳವಳ್ಳಿಗೆ ಆಗಮಿಸಿದರು. ಭಕ್ತರು ಅವರ ಕಷ್ಟಕಾರ್ಪಣ್ಯಗಳನ್ನು ಈಡೇರಿಸಿದ್ದಕ್ಕೆ ಹರಕೆಯನ್ನು ಮಾಡಿಕೊಂಡಿರುತ್ತಾರೆ ಹಾಗಾಗಿ ಭಕ್ತಾದಿಗಳು ಮುಡಿ ಸೇವೆ ಮಾಡಿಸುವುದು, ಹುಲಿವಾಹನ ಮೆರೆಸುವುದು, ವಿಶೇಷ ಪೂಜೆ ಮಾಡಿಸುವುದು ಕಂಡುಬAದಿದೆ. ಮಲೆಮಾದೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ನಂದೀಶ್ ರವರು ಮಾತನಾಡಿ ಕಳೆದ ಎರಡು ವರ್ಷಗಳಿಂದ ಸಾಂಕ್ರಾಮಿಕ ರೋಗ ಕೋವಿಡ್ ೧೯ ಇರುವುದರಿಂದ ಅಮಾವಾಸ್ಯೆಯೆಂದುವಿಶೇಷ ಪೂಜೆ ಇರಲಿಲ್ಲ ಈ ಬಾರಿ ದೀಪಾವಳಿಯ ಅಮಾವಾಸ್ಯೆಯಂದು ವಿಶೇಷ ಪೂಜೆಯನ್ನು ಗ್ರಾಮಸ್ಥರು ಏರ್ಪಡಿಸಿದ್ದಾರೆ ಎಂದರು.
ಹಾಗೂಬರುವ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆಯನ್ನು ಸಹ ಮಾಡಿದ ಗ್ರಾಮಸ್ಥರು ಮತ್ತು ವಿವಿಧ ಬಗೆಯ ಮಕ್ಕಳ ಆಟದ ಸಾಮಾನುಗಳನ್ನು ಸಹ ವ್ಯಾಪಾರಸ್ಥರು ಪಸರಗಳನ್ನು ಇಟ್ಟಿದ್ದರು

ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರುಗಳಾದ, ಗೌಡಿಕೆ ಬಸವಣ್ಣ, ಗೌಡಿಕೆ ಮಹಾದೇವಪ್ಪ, ಎಂ ಬಿ.ಬಸಪ್ಪ ಪಿಎಸಿಸಿ ಬ್ಯಾಂಕ್ ಅಧ್ಯಕ್ಷರು ನೇನೇಕಟ್ಟೆ ,ಎಂಎಸ್ ಮಹದೇವಪ್ಪ, ಯುವ ಮುಖಂಡರಾದ ಡಿ ಮಹೇಶ್ ಪಿಕಾರ್ಡ್ ಬ್ಯಾಂಕ್ ಸದಸ್ಯ. ಗ್ರಾಮ ಪಂಚಾಯಿತಿ ಸದಸ್ಯರಾದ ಮಾಧು, ಶಂಕರ, ಇನ್ನು ಮುಂತಾದ. ಗ್ರಾಮಸ್ಥರು ಭಕ್ತಾದಿಗಳು ಹಾಜರಿದ್ದರು

ವರದಿ: ಸದಾನಂದ ಕನ್ನೇಗಾಲ ಗುಂಡ್ಲುಪೇಟೆ

error: