December 20, 2024

Bhavana Tv

Its Your Channel

ಗಿಡ ನೆಡುವ ಮೂಲಕ ಗುಂಡ್ಲು ನದಿ ಅಭಿಯಾನಕ್ಕೆ ಚಾಲನೆ ನೀಡಿದ ಸುಧಾಮೂರ್ತಿ.

ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ದ ದೇವಾಲಯವಾದ ಪಾರ್ವತಿ ಬೆಟ್ಟದಲ್ಲಿ ಗುಂಡ್ಲು ನದಿ ಉಳಿಸಿ ಎಂಬ ಅಭಿಯಾನದ ಜನಾಂದೋಲನಕ್ಕೆ ಬೆನ್ನೆಲುಬಾದ ಕಂದೇಗಾಲ, ಮೊಳ್ಳಯನಹುಂಡಿ, ಶಿಂಡನಪುರ, ಹಾಗೂ ಬೆಟ್ಟಹಳ್ಳಿ ಗ್ರಾಮದ ಯುವಕರು ಮತ್ತು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯವರು. ಬೆಟ್ಟದಲ್ಲಿ ಸ್ವಚ್ಛತಾ ಕಾರ್ಯದ ಜೊತೆಗೆ ಆತ್ಮಪೂರ್ವಕವಾಗಿ ಸಸಿ ನೆಟ್ಟು ಬೆಳೆಸುವ ಪ್ರತಿಜ್ಞೆಯನ್ನು ಜಲಯೋಧರು ಸ್ವೀಕರಿಸಿದರು . ಸಸಿಗಳನ್ನು ಕಾಪಾಡುವ ಪಣವನ್ನು ಗ್ರಾಮಸ್ಥರು ತೊಟ್ಟರು, ಅಭಿಯಾನಕ್ಕೆ ಆಗಮಿಸಿ ಸಸಿಗಳನ್ನು ನೆಟ್ಟು ಸುಧಾಮೂರ್ತಿ ರವರು ಬೆಂಬಲಿಸಿದರು, ಈ ಸಂದರ್ಭದಲ್ಲಿ ಇತರೆ ಸಂಘ ಸಂಸ್ಥೆಗಳು ಗ್ರಾಮಸ್ಥರು ಯುವಕರು ಇದ್ದರು.

ವರದಿ: ಸದಾನ೦ದ ಕನ್ನೆಗಾಲ ಗುಂಡ್ಲುಪೇಟೆ

error: