December 22, 2024

Bhavana Tv

Its Your Channel

ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆ ಹಿ೦ಪಡೆದಿದ್ದಕ್ಕೆ ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಎಸ್ ಶಿವನಾಗಪ್ಪ ಪ್ರತಿಕ್ರಿಯೆ

ಗುಂಡ್ಲುಪೇಟೆ :ಕೇಂದ್ರ ಸರ್ಕಾರದ ವಿರುದ್ಧ ಬಹುದಿನಗಳಿಂದ ಅನ್ನದಾತರು ಹೋರಾಟವನ್ನು ನಡೆಸಿಕೊಂಡು ಬಂದಿರುವ ಹಿನ್ನೆಲೆಯಲ್ಲಿ ಇಂದು ಅನ್ನದಾತರಿಗೆ ನ್ಯಾಯ ಸಿಕ್ಕಂತಾಗಿದೆ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡಿದೆ. ಹಾಗಾಗಿ ರೈತರಿಗೆ ಮತ್ತು ಪ್ರಗತಿಪರ ಸಂಘಟನೆಗಳಿಗೆ ಇಂದು ನ್ಯಾಯ ಸಿಕ್ಕಂತಾಗಿದೆ. ಪಂಚರಾಜ್ಯಗಳ ಚುನಾವಣೆ ಹೆದರಿ ಈ ಕಾಯ್ದೆಯನ್ನು ವಾಪಸ್ ಪಡೆದುಕೊಂಡಿದ್ದಾರೆ ಮತ್ತು ಈ ಹೋರಾಟದಿಂದಸುಮಾರು ೭೦೦ ಕು ಹೆಚ್ಚು ರೈತರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ನೂತನ ಕೃಷಿ ಕಾಯ್ದೆಯ ವಿರುದ್ಧ ರೈತರು ಸಿಡಿದೆದ್ದರು. ಹಾಗಾಗಿ ಇಂದು ಅನ್ನದಾತರು ಮಾಡಿರುವ ಹೋರಾಟಕ್ಕೆ ಸಿಕ್ಕಿದ ಫಲವಾಗಿದೆ ಎಂದರು.
ಈ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ ಎಸ್.ಶಿವನಾಗಪ್ಪ, ಉಪಾಧ್ಯಕ್ಷರಾದ ರತ್ನಮ್ಮ ಮಹದೇವಪ್ಪ, ಮಾಜಿ ಅಧ್ಯಕ್ಷರಾದ ಮೃತ್ಯುಂಜಯ, ಶಿವಪ್ಪ, ಶಿವ ಮಾದಪ್ಪ ,ಜಿ ಗುರುಸ್ವಾಮಿ,, ಸದಸ್ಯರಾದ ದೊಡ್ಡೇಗೌಡ, ಜಿ ಮಡಿವಾಳಪ್ಪ, ಮಂಚಳ್ಳಿ ಬಾಬು ,ಹಂಗಳ ಪುರದ ಸುರೇಶ್ ,ಬಿ.ಸಿ .ರಾಜು ಪ್ರಭುಸ್ವಾಮಿ, ಸುಜಿ೦ದ್ರ,ಹಾಜರಿದ್ದರು

ವರದಿ: ಸದಾನಂದ ಕಣ್ಣೇಗಾಲ ಗುಂಡ್ಲುಪೇಟೆ

error: