December 19, 2024

Bhavana Tv

Its Your Channel

ಕನ್ನಡ ಸಾಹಿತ್ಯ ಪರಿಷತ್ ಚಾಮರಾಜನಗರ ಜಿಲ್ಲಾಧ್ಯಕ್ಷರ ಚುನಾವಣೆ ಫಲಿತಾಂಶ ಪ್ರಕಟ, ಶೈಲಾ ಕುಮಾರ್ .ಎಂ . ಅತಿ ಹೆಚ್ಚು ಮತ ಪಡೆದು ಜಯಭೇರಿ

ಚಾಮರಾಜನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ ಚಾಮರಾಜನಗರ ಜಿಲ್ಲಾಧ್ಯಕ್ಷರ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಶೈಲಾ ಕುಮಾರ್ .ಎಂ ಅತಿ ಹೆಚ್ಚು ಮತ ಪಡೆದು ಜಯಭೇರಿ ಬಾರಿಸಿದ್ದಾರೆ. ಗುಂಡ್ಲುಪೇಟೆ ಭಾನುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ೨೦೨೧ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ನಾಲ್ಕು ಸ್ಪರ್ಧಿಗಳು ಕಣದಲ್ಲಿದ್ದರು. ಒಟ್ಟು ೨೧ ೮೩ ಮತದಲ್ಲಿ ೨೧೧೬ ಚಲಾವಣೆಯಾಗಿದ್ದು ೨೨ ಮತ ತಿರಸ್ಕೃತಗೊಂಡಿದೆ. ಶೈಲ ಕುಮಾರ್ ಎಂ.೧೩೧೬ ಅತಿ ಹೆಚ್ಚು ಮತ ಪಡೆದು ಜಯಭೇರಿ ಬಾರಿಸಿದ್ದಾರೆ. ಸಿ ಎಂ ನರಸಿಂಹಮೂರ್ತಿ ೬೭೩ ಮತ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.
ಇನ್ನುಳಿದಂತೆ ನಾಗೇಶ್ ಸೋಸ್ಲೆ ೧೫೦ ಹಾಗೂ ಸ್ನೇಹ ೨೨ ಮತ ಪಡೆದಿದ್ದಾರೆ.

ವರದಿ ಸದಾನ೦ದ ಕನ್ನೆಗಾಲ ಗುಂಡ್ಲುಪೇಟೆ

error: