December 22, 2024

Bhavana Tv

Its Your Channel

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಕಾವಲುಪಡೆಯ ಸಂಘಟನೆ ವತಿಯಿಂದ ೬೬ನೇ ಕನ್ನಡ ರಾಜ್ಯೋತ್ಸವ ಹಾಗೂ ಕಾವಲುಪಡೆಯ ಹನ್ನೊಂದನೇ ವಾರ್ಷಿಕೋತ್ಸವದ ಆಚರಣೆ

ಗುಂಡ್ಲುಪೇಟೆ ; ಪಟ್ಟಣದ ಬಿಇ ಒ ಕಚೇರಿಯ ಮುಂಭಾಗದಲ್ಲಿ ೬೬ನೇ ಕನ್ನಡ ರಾಜ್ಯೋತ್ಸವ ಹಾಗೂ ಕಾವಲುಪಡೆಯ ೧೧ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಚಲನಚಿತ್ರ ನಟ ಪವರ್ ಸ್ಟಾರ್ ದಿವಂಗತ ಪುನೀತ್ ರಾಜಕುಮಾರ್ ರವರಿಗೆ ಎರಡು ನಿಮಿಷಗಳ ಕಾಲ ಮೌನವನ್ನು ಆಚರಿಸಿದರು. ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ದೀಪ ಬೆಳಗುವುದರ ಮುಖಾಂತರ ಕಾವಲುಪಡೆಯ ರಾಜ್ಯಾಧ್ಯಕ್ಷರಾದ ಎ೦ ಮೋಹನ್ ಕುಮಾರ್ ಗೌಡ ರವರು ಚಾಲನೆ ನೀಡಿದರು. ನಂತರ ಮಾತನಾಡಿದ ಅಧ್ಯಕ್ಷರು ನಾಡು-ನುಡಿಗಾಗಿ ಸೇವೆಯನ್ನು ಸಲ್ಲಿಸುವುದರ ಮೂಲಕ ಸಮಾಜದಲ್ಲಿ ಅವರವರ ಸಾಧನೆಗಳನ್ನು ಗುರುತಿಸಿಕೊಂಡಿರುವ ಮತ್ತು ಉತ್ತಮ ಶಿಕ್ಷಕರನ್ನು ಗೌರವಿಸುವ ಮೂಲಕ ಕರ್ನಾಟಕ ಕಾವಲು ಪಡೆ ನಿರಂತರವಾಗಿ ಸಕ್ರಿಯ ಮತ್ತು ನಿಷ್ಠಾವಂತರಾಗಿ ಕೆಲಸಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಇಲ್ಲಿನ ಸರ್ಕಾರಿ ನೌಕರರ ತರಹ ಕಾವಲುಪಡೆ ಸಂಘಟನೆಯವರು ಕೊರೋನಾ ವಾರಿಯರ್ಸ್ ಆಗಿ ಅತ್ಯಂತ ಉತ್ತಮವಾದ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ ಹಾಗಾಗಿ ಅವರಿಗೆ ಕನ್ನಡ ಮಾತೆ ಭುವನೇಶ್ವರಿ ತಾಯಿ ಇನ್ನು ಹೆಚ್ಚೆಚ್ಚು ಕೆಲಸವನ್ನು ಮಾಡಲು ಶಕ್ತಿ ತುಂಬಲಿ ಎಂದು ಈ ಮೂಲಕ ಆಶೀರ್ವದಿಸಿದರು.

ಕಾವಲುಪಡೆಯ ತಾಲೂಕು ಘಟಕದ ಅಧ್ಯಕ್ಷರಾದ ಅಬ್ದುಲ್ ಮಾಲಿಕ್ ಮಾತನಾಡಿ ನಮ್ಮದು ಗಡಿ ಭಾಗದ ಜಿಲ್ಲೆ ನಾವು ಸೇವಕರಂತೆ ಗಡಿಯನ್ನು ದಾಟದಂತೆ ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಗಡಿ ಭಾಗದ ಚೆಕ್ಪೋಸ್ಟ್ ಗಳಾದ ಮೂಲೆಹೊಳೆ ಮತ್ತು ಕೆಕ್ಕನಹಳ್ಳ ಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಹೊರರಾಜ್ಯಗಳಿಂದ ಬರುತ್ತಿರುವ ತ್ಯಾಜ್ಯವನ್ನು ನಮ್ಮ ಕಾವಲುಪಡೆ ಸಂಘಟನೆಯವರು ಮತ್ತು ಪದಾಧಿಕಾರಿಗಳು ಖುದ್ದಾಗಿ ತ್ಯಾಜ್ಯ ವಾಹನ ಸಮೇತ ಹಿಡಿದು ಈ ರೀತಿ ಮಾಡಬಾರದು ಎಂದು ವಾಹನ ಚಾಲಕನಿಗೆ ಎಚ್ಚರಿಕೆ ನೀಡಿದ್ದಾರೆ. ಮತ್ತು ಚೆಕ್ ಪೋಸ್ಟ್ ಗಳಲ್ಲಿ ಇರುವ ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ತ್ಯಾಜ್ಯ ಬರುತ್ತಿದೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ತ್ಯಾಜ್ಯ ಬರಬಾರದು ಎಂದು ಈ ಮೂಲಕ ತಿಳಿಸಿದರು

ಈ ಸಂದರ್ಭದಲ್ಲಿ ಕಾವಲುಪಡೆಯ ರಾಜ್ಯಾಧ್ಯಕ್ಷರಾದ ಎನ್ ಮೋಹನ್ ಕುಮಾರ್ ಗೌಡರು, ರಾಜ್ಯಮಟ್ಟದ ಪದಾಧಿಕಾರಿಗಳಾದ ಡಿಆರ್ ಕರಿಗೌಡರು, ರವಿ ಗೌಡರು, ರವೀಂದ್ರ, ಭೂಮಿ ನಾಗರಾಜು, ಕೊಡಗು ಜಿಲ್ಲಾ ಅಧ್ಯಕ್ಷರಾದ ಎಂ ಕೃಷ್ಣ, ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷರಾದ ಹಾಗೂ ಚಲನಚಿತ್ರ ನಟರಾದ ಶಿವು ಬಾಲಾಜಿ, ಜಿಲ್ಲಾ ಅಧ್ಯಕ್ಷರಾದ ಪರಶಿವಮೂರ್ತಿ, ಜಿಲ್ಲಾ ಉಪಾಧ್ಯಕ್ಷರಾದ ಅಮೀರ್, ಜಿಲ್ಲಾ ಕಾರ್ಯಧ್ಯಕ್ಷರಾಗಿ ಅಬ್ದುಲ್ ರಶೀದ್, ಹಿರಿಯ ಕನ್ನಡಪರ ಹೋರಾಟ ಗಾರರಾದ ಬ್ರಹ್ಮಾನಂದ,ತಾಲೂಕು ಉಪಾಧ್ಯಕ್ಷರಾದ ಮಂಜುನಾಥ್, ಕಾರ್ಯಾಧ್ಯಕ್ಷರಾದ ಇಲಿಯಾಸ್, ಗೌರವಾಧ್ಯಕ್ಷರಾದ ವೆಂಕಟೇಶ್ ಗೌಡ್ರು, ಸಂಚಾಲಕರಾದ ಕುಂಜು ಟಿ, ಟೌನ್ ಉಪಾಧ್ಯಕ್ಷರಾದ ಸಾಧಿಕ್ ಪಾಶ, ಗೌರವಾಧ್ಯಕ್ಷರಾದ ಶಕೀಲಾ, ಕಸಬಾ ಹೋಬಳಿ ಘಟಕದ ಅಧ್ಯಕ್ಷರಾದ ಎಚ್ ರಾಜು, ಟೌನ್ ಸಂಚಾಲಕರಾದ ಮಿಟಾಯಿ ಮಂಜುನಾಥ್, ಮಿಮಿಕ್ರಿ ರಾಜು ,ನೂರು ಶರೀಫ್, ರವಿಕುಮಾರ್ ಸೇರಿದಂತೆ ಕನ್ನಡದ ಅಭಿಮಾನಿಗಳು ಪ್ರೇಮಿಗಳು ಹಾಜರಿದ್ದರು.
ವರದಿ ; ಸದಾನಂದ ಕಣ್ಣೇಗಾಲ ಗುಂಡ್ಲುಪೇಟೆ

error: