December 3, 2021

Bhavana Tv

Its Your Channel

ಗುಂಡ್ಲುಪೇಟೆ ; ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಉಚಿತ ಔಷಧಿಗಳ ವಿತರಣೆ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ರೆಡಿಮೇರ್ ಕೇರ‍್ಸ್ ಜನ ಸುರಕ್ಷಾ ಯೋಜನೆ ಹಾಗೂ ಕನ್ನೆಗಾಲ ಗ್ರಾಮ ಪಂಚಾಯಿತಿ ರೆಡ್ ಕ್ರಾಸ್ ಸಂಸ್ಥೆ ಚಾಮರಾಜನಗರ ಇವರ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಉಚಿತ ಔಷಧಿಗಳ ವಿತರಣೆ ಮಾಡಿದರು.

ಗುಂಡ್ಲುಪೇಟೆ ತಾಲೂಕಿನ ಕಣ್ಣೇಗಾಲ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದು ಉಚಿತ ಆರೋಗ್ಯ ಶಿಬಿರವನ್ನು ಕನ್ನೆಗಾಲ ದ ಬಸವ ಭವನ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೇಗೌಡನಹಳ್ಳಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಿದ್ದು ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಸದಸ್ಯರಾದ ಜಿ .ಕೆ ಲೋಕೇಶ್ ರವರು ಚಾಲನೆ ನೀಡಿದರು ….

ಈ ಸಂದರ್ಭದಲ್ಲಿ ಜನ ಸುರಕ್ಷಾ ಸಂಸ್ಥೆಯ ಡಾಕ್ಟರ್ ಅಚ್ಚುತರಾವ್, ಸಂಚಾಲಕರಾದ ಅಂಬರೀಶ್, ಮಾಜಿ ಗ್ರಾಮ್ ಪಂಚಾಯತಿ ಸದಸ್ಯರಾದ ಕೆ.ಎಲ್ .ಜಯರಾಮ್ , ಗ್ರಾಮ ಪಂಚಾಯಿತಿ ಸದಸ್ಯರಾದ ನಾಗುಸ್ವಾಮಿ, ಗ್ರಾಮದ ಮುಖಂಡರುಗಳು, ಗ್ರಾಮಸ್ಥರು ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಗೂ ಚಾಮರಾಜನಗರ ಮತ್ತು ಮೈಸೂರು ಆಸ್ಪತ್ರೆಯ ವೈದ್ಯಾಧಿಕಾರಿಗಳು ಸಿಬ್ಬಂದಿ ವರ್ಗದವರು ಇದ್ದರು

ವರದಿ: ಸದಾನಂದ ಕನ್ನೆಗಳ ಗು೦ಡ್ಲುಪೇಟೆ

error: