April 27, 2024

Bhavana Tv

Its Your Channel

ಚುನಾವಣಾ ಪೂರ್ವ ಸಿದ್ಧತೆಯ ಬಗ್ಗೆ ಗುಂಡ್ಲುಪೇಟೆ ತಾಲೂಕು ದಂಡಾಧಿಕಾರಿಗಳಿAದ ಮತ್ತು ಸಹಾಯಕ ಚುನಾವಣಾ ಅಧಿಕಾರಿಗಳಿಂದ ಮಾಹಿತಿ

ಗುಂಡ್ಲುಪೇಟೆ : ಪಟ್ಟಣದ ತಾಲೂಕು ಕಚೇರಿಯ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ 224ನೇ ಮತ ಕ್ಷೇತ್ರವಾದ ಗುಂಡ್ಲುಪೇಟೆ ಮತಗಟ್ಟೆಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿ ಸಹಾಯಕ ಚುನಾವಣಾ ಅಧಿಕಾರಿ ಡಾ. ದಯಾನಂದರವರು ಚುನಾವಣೆಯ ಬಗ್ಗೆ ಕ್ರಮಬದ್ಧವಾಗಿ ಮತ್ತು ಪಾರದರ್ಶಕವಾಗಿ ಚುನಾವಣೆಯನ್ನು ನಡೆಸಬೇಕು ಆ ನಿಟ್ಟಿನಲ್ಲಿ ಮಾಧ್ಯಮದವರು ನಮ್ಮ ಜೊತೆ ಸಹಕಾರಿಯಾಗಬೇಕು ಮತ್ತು ಪತ್ರಿಕೆ ಮಾಧ್ಯಮಗಳಲ್ಲಿ ಚುನಾವಣೆ ಜಾಗೃತಿ ಬಗ್ಗೆ ಜನರಿಗೆ ಹರಿವು ಮೂಡಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕಾರಿಯಾಗಬೇಕೆಂದು ತಿಳಿಸಿದರು.
ಅಲ್ಲದೆ ಚುನಾವಣೆ ಯಲ್ಲಿ ಎಲ್ಲರೂ ಮತದಾನ ಮಾಡಲು ಜಾಗೃತಿಯನ್ನು ಮೂಡಿಸಬೇಕು ಮತ್ತು ಶುಭ ಸಮಾರಂಭ ಜಾತ್ರೆಗಳಲ್ಲಿ ಮತ್ತು ಮದುವೆ ಇನ್ನು ಮುಂತಾದ ಕಾರ್ಯಕ್ರಮಗಳಲ್ಲಿ ಮತ್ತು ವಿಶೇಷವಾಗಿ ಗ್ರಾಮ ದೇವತೆ ಹಬ್ಬಗಳು ಹೆಚ್ಚಾಗಿದ್ದು ಇವುಗಳಿಗೆ ಕಡ್ಡಾಯವಾಗಿ ಪೊಲೀಸ್ ಇಲಾಖೆಯಿಂದ ಮತ್ತು ಕಂದಾಯ ಇಲಾಖೆಯಿಂದ ಪರವಾನಿಗೆ ಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ ಅಭ್ಯರ್ಥಿಗಳು ಪ್ರಚಾರ ಮಾಡುವ ವೇಳೆಯಲ್ಲಿ 18 ವರ್ಷ ಕೆಳಗಿರುವ ಮಕ್ಕಳನ್ನು ಪ್ರಚಾರದ ವೇಳೆಯಲ್ಲಿ ಬಳಸಬಾರದು ಒಂದು ವೇಳೆ ಸಣ್ಣ ಪುಟ್ಟ ಮಕ್ಕಳನ್ನು ಪ್ರಚಾರದಲ್ಲಿ ಬಳಸಿಕೊಂಡು ಹೋದರೆ ಕಾನೂನಿನ ಪ್ರಕಾರ ಸೂಕ್ತ ಕ್ರಮವನ್ನು ಜರುಗಿಸಲಾಗುತ್ತದೆ. ರಾಜಕೀಯ ಪಕ್ಷಗಳು ಯಾವುದೇ ವಾಹನವನ್ನು ಬಳಸಬೇಕಾದರೆ ಆನ್ಲೈನ್ ನಲ್ಲಿ ಅರ್ಜಿ ಹಾಕಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಜೆ. ಮಂಜುನಾಥ್, ವೃತ್ತ ನಿರೀಕ್ಷಕರಾದ, ಪರಶಿವಮೂರ್ತಿ, ವನರಾಜು ಹಾಗೂ, ದ್ವಿತೀಯ ದರ್ಜೆ ತಾಸಿಲ್ದಾರ್ ಮಹೇಶ್ ಹಾಗೂ ವಿವಿಧ ಇಲಾಖೆಯ ಅಧಿಕಾರಿ ವರ್ಗದವರು ಚುನಾವಣೆ ಅಧಿಕಾರಿಗಳು ಇದ್ದರು.
ವರದಿ ; ಸದಾನಂದ ಕಣ್ಣೇಗಲ ಗುಂಡ್ಲುಪೇಟೆ

error: