December 22, 2024

Bhavana Tv

Its Your Channel

ಅಖಿಲ ಭಾರತ ಕರುನಾಡ ಯುವಶಕ್ತಿ ತಾಲೂಕು ಘಟಕದ ವತಿಯಿಂದ ೬೬ನೇ ಕನ್ನಡ ರಾಜ್ಯೋತ್ಸವ ಆಚರಣೆ .

ಗುಂಡ್ಲುಪೇಟೆ ಪಟ್ಟಣದ ಸಿಎಂಎಸ್ ಮಕ್ಕಳ ಮನೆಯಲ್ಲಿ ನಡೆದ ಅಖಿಲ ಭಾರತ ಕರುನಾಡ ಯುವಶಕ್ತಿ ಸಂಘಟನೆ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ೬೬ನೇ ಕನ್ನಡ ರಾಜ್ಯೋತ್ಸವ ವನ್ನು ಆಚರಿಸಿದ್ದು, ನಟ ದಿವಂಗತ ಪುನೀತ್ ರಾಜಕುಮಾರ್‌ರವರಿಗೆ ಗೀತ ನಮನ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .

ಕಾರ್ಯಕ್ರಮದ ಕೇಂದ್ರಬಿAದುವಾದ ಕರುನಾಡ ಯುವಶಕ್ತಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ವಸಂತ್ ಕುಮಾರ್ ರವರು ಮಾತನಾಡಿ ನಮ್ಮ ಸಂಘಟನೆ ಕೇವಲ ವೇದಿಕೆಗೆ ಮಾತ್ರ ಸೀಮಿತವಾಗಿರದೆ ಸಾಮಾಜಿಕ ಶೈಕ್ಷಣಿಕ ಆರೋಗ್ಯ ಕ್ಷೇತ್ರದಲ್ಲಿ ಸಂಘಟನೆಯ ಎಲ್ಲಾ ಕಾರ್ಯಕರ್ತರು ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಚಾರ ಮತ್ತು ಜೊತೆಗೆ ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿರಬೇಕು ಕೇಂದ್ರ ಸರ್ಕಾರ ನಡೆಸುವ ಎಲ್ಲಾ ಪರೀಕ್ಷೆಗಳು ಕನ್ನಡದಲ್ಲಿ ಬರೆಯುವುದಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಅಲ್ಲದೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಚಾಮರಾಜನಗರ ಜಿಲ್ಲಾಧ್ಯಕ್ಷರಾದ ಅಶೋಕ್ ರಾಜ್ ರವರ ಜಮೀನಿನಲ್ಲಿ ವೃದ್ರಾಶ್ರಮ ತೆರೆಯಲಾಗುವುದು ಎಂದು ಈ ಮೂಲಕ ತಿಳಿಸಿದರು.

ನಂತರ ಮಾತನಾಡಿದ ಚಾಮರಾಜನಗರ ಜಿಲ್ಲಾ ಅಧ್ಯಕ್ಷರಾದ ಅಶೋಕ್ ರಾಜ್ ಮಾತನಾಡಿ ನಮ್ಮ ಜಿಲ್ಲೆಯಲ್ಲಿ ೩೨ಕ್ಕೂ ಅಧಿಕ ಕನ್ನಡಪರ ಸಂಘಟನೆ ಗಳಿದ್ದು. ಕನ್ನಡ ನಾಡು ನುಡಿ ಸಂಸ್ಕೃತಿಯ ವಿಚಾರದಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಿವೆ. ಎಂದು ತಿಳಿಸಿದರು.

ನಂತರ ಮಾತನಾಡಿದ ಕರುನಾಡ ಯುವಶಕ್ತಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾದ ಯೋಗೇಶ್ ಮಾತನಾಡಿ ಕರೋನವೈರಸ್ ನಮ್ಮ-ನಿಮ್ಮೆಲ್ಲರ ಸಂತೋಷ ಸಂಭ್ರಮವನ್ನು ಕಿತ್ತುಕೊಂಡಿದೆ .ಆದರೆ ತಾಯಿ ಭುವನೇಶ್ವರಿ ದೇವಿಗೆ ಹೆದರಿದ ಕರೋನಾ ವೈರಸ್ ಕನ್ನಡದ ಅಭಿಮಾನಿಗಳ ತಂಟೆಗೆ ಬಾರದೆ ತಾಯಿ ಭುವನೇಶ್ವರಿ ನುಡಿಹಬ್ಬಕ್ಕೆ ಅವಕಾಶ ಮಾಡಿಕೊಟ್ಟಿರುವುದು ಕೊರೋನಾ ವೈರಸ್ ಕನ್ನಡ ಭಾಷೆಯ ಮೇಲೆ ಇರುವ ಪ್ರೀತಿಯನ್ನು ತೋರಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ಕರುನಾಡ ಯುವಶಕ್ತಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ವಸಂತಕುಮಾರ್, ,ರಾಜ್ಯ ಅಧ್ಯಕ್ಷರಾದ ಶರವಣ್, ರಾಜ್ಯ ಯುವ ಘಟಕದ ಅಧ್ಯಕ್ಷರಾದ ಚಿದಾನಂದ, ಚಾಮರಾಜನಗರ ಜಿಲ್ಲಾ ಅಧ್ಯಕ್ಷರಾದ ಅಶೋಕ್ ರಾಜ್, ತಾಲೂಕು ಅಧ್ಯಕ್ಷರಾದ ಮುನೀರ್ ಪಾಷಾ, ಪ್ರಧಾನ ಕಾರ್ಯದರ್ಶಿಯಾದ ಯೋಗೇಶ್, ಕೂಲಿಕಾರ್ಮಿಕ ರ ಘಟಕದ ಅಧ್ಯಕ್ಷರಾದ ಅಡ್ಡು, ತಾಲೂಕು ಯುವ ಘಟಕದ ಅಧ್ಯಕ್ಷರಾದ ಮಂಜುನಾಥ್, ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕರಾದ ಸುಭಾಷ್ ಮಾಡ್ರಹಳ್ಳಿ, ತಾಲೂಕು ಸಂಚಾಲಕರಾದ ಆರ್ ಸೋಮಣ್ಣ ಚಲವಾದಿ, ಡಿಎಸ್‌ಎಸ್ ಮುಖಂಡರಾದ ನಂಜುAಡಸ್ವಾಮಿ, ರಂಗಸ್ವಾಮಿ ಮಾಡ್ರಹಳ್ಳಿ, ಮೈಸೂರು ಜಿಲ್ಲಾ ಅಧ್ಯಕ್ಷರಾದ ದಿವಾಕರ್, ಹಿರಿಯ ಕನ್ನಡ ಪರ ಹೋರಾಟಗಾರರಾದ ಬ್ರಹ್ಮಾನಂದ, ಸಾಧಕರಾದ ಉಮೇಶ್, ದೊಡ್ಡಪ್ಪಾಜಿ ಸರಸ್ವತಿ, ಪುಟ್ಟಮ್ಮ ,ನಮ್ಮ ಗುಂಡ್ಲುಪೇಟೆ ತಂಡದ ಯುವಕರು, ಮತ್ತು ಸಿಎಂಎಸ್ ಮಕ್ಕಳ ಮನೆಯ ವ್ಯವಸ್ಥಾಪಕರಾದ ಸೆಲ್ವಿ ರಾಜ್, ಮತ್ತು ಕನ್ನಡದ ಪ್ರೇಮಿಗಳು, ಕಾರ್ಯಕ್ರಮದ ನಿರೂಪಕರಾದ ಕೆ. ಎ೦. ಮನಸ್, ಸಾಹಿತಿಗಳಾದ ಕಾಲಿಂಗ ಸ್ವಾಮಿ ಇದ್ದರು

ವರದಿ: ಸದಾನಂದ ಕಣ್ಣೇಗಾಲ ಗುಂಡ್ಲುಪೇಟೆ

error: